ನವದೆಹಲಿ: ಕಳೆದ ತಿಂಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಿ ಗ್ರಾಹಕರ ಮೆಚ್ಚುಗೆ ಗಳಿಸಿರುವ ಚೀನಾ ಮೂಲದ ಒನ್ಪ್ಲಸ್ ಸಂಸ್ಥೆಯ ಮೊದಲ ಒನ್ಪ್ಲಸ್ ಟಿವಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.
ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಭಾರತದ ಗ್ರಾಹಕರಿಗೆ ಲಭ್ಯವಾಗಿದ್ದ ಒನ್ಪ್ಲಸ್ ಟಿವಿ, ಎರಡು ವಿವಿಧ ಶ್ರೇಣಿಯಲ್ಲಿ ರಿಲೀಸ್ ಆಗಿತ್ತು. ಒನ್ಪ್ಲಸ್ ಟಿವಿ Q1(₹69,899) ಹಾಗೂ ಒನ್ಪ್ಲಸ್ ಟಿವಿ Q1 Pro(₹99,899) ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಿತ್ತು.
ಅಮೇಜಾನ್ ಮೂಲಕ ಹಬ್ಬ ಆಚರಿಸಿದ ಒನ್ಪ್ಲಸ್...! ಎರಡೇ ದಿನದಲ್ಲಿ ಕೋಟಿ ಕೋಟಿ ಬಾಚಿದ ಚೀನಾ ಕಂಪನಿ ..
ಸದ್ಯ ಒನ್ಪ್ಲಸ್ ಟಿವಿ ಖರೀದಿಸಲು ಯೋಜಿಸುತ್ತಿರುವವರಿಗೆ ಖುಷಿ ಸುದ್ದಿ ಇಲ್ಲಿದೆ. ಒನ್ಪ್ಲಸ್ ಸಂಸ್ಥೆ ಸದ್ಯ ತನ್ನ ಟಿವಿ ಬೆಲೆಯಲ್ಲಿ ಡಿಸ್ಕೌಂಟ್ ಘೋಷಿಸಿದೆ. ಒನ್ಪ್ಲಸ್ ಟಿವಿ Q1 ಬೆಲೆಯಲ್ಲಿ ನಾಲ್ಕು ಸಾವಿರ ಹಾಗೂ ಒನ್ಪ್ಲಸ್ ಟಿವಿ Q1 Pro ಬೆಲೆಯಲ್ಲಿ ಐದು ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದೆ.
ಒನ್ಪ್ಲಸ್ ಟಿವಿ Q1 ಡಿಸ್ಕೌಂಟ್ ಮೂಲಕ ₹ 65,899 ರೂ.ಗೆ ಲಭ್ಯವಾದರೆ ಒನ್ಪ್ಲಸ್ ಟಿವಿ Q1 Pro ಡಿಸ್ಕೌಂಟ್ ಮೂಲಕ ₹94,899ರೂ.ಗೆ ದೊರೆಯಲಿದೆ. ಹೆಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಲ್ಲವೇ ಡೆಬಿಟ್ ಬಳಕೆಯಲ್ಲಿ ಅಥವಾ ಇಎಂಐ ಮೂಲಕವೂ ಈ ರಿಯಾಯಿತಿ ಪಡೆಯಬಹುದು.