ನವದೆಹಲಿ: ಒನ್ಪ್ಲಸ್ ಕಂಪನಿ ತನ್ನ ಮಾರುಕಟ್ಟೆ ವಿಸ್ತರಣೆ ನಿಟ್ಟಿನಲ್ಲಿ ಗುರುವಾರ ತನ್ನ ಮಹತ್ವಾಕಾಂಕ್ಷಿ ಟಿವಿ ಹಾಗೂ ಹೊಸ ಮಾಡೆಲ್ ಮೊಬೈಲ್ಗಳನ್ನು ಅನಾವರಣಗೊಳಿಸಿದೆ.
ಒನ್ಪ್ಲಸ್ ಟಿವಿ ಜೊತೆಗೆ ಒನ್ಪ್ಲಸ್ 7T ಮೊಬೈಲ್ ಗುರುವಾರ ರಿಲೀಸ್ ಆಗಿದ್ದು ಶನಿವಾರ(ಸೆ.28)ದಿಂದ ಭಾರತದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಭಾರತದಲ್ಲಿ ಸದ್ಯ ಉತ್ತಮ ಬೇಡಿಕೆ ಹೊಂದಿರುವ ಒನ್ಪ್ಲಸ್ ಸದ್ಯ ಬಿಡುಗಡೆ ಮಾಡಿರುವ ಮೊಬೈಲ್ ಹಾಗೂ ಟಿವಿ ವಿಶೇಷತೆ ಇಲ್ಲಿದೆ..
ಒನ್ಪ್ಲಸ್ 7T:
ಒನ್ಪ್ಲಸ್ 7T ಮೊಬೈಲ್ ಮೂರು ಹಿಂಬದಿ ಕ್ಯಾಮೆರಾ ಹೊಂದಿದ್ದು, ಡಾಲ್ಬಿ ಅಟ್ಮಾಸ್ ಸ್ಪೀಕರ್ ಇರಲಿದೆ. ಹೀಗಾಗಿ ಸಿನಿಮಾ ವೀಕ್ಷಣೆ ಹಾಗೂ ಗೇಮಿಂಗ್ ಉತ್ತಮ ಅನುಭವ ನೀಡಲಿದೆ. 48 MP, 8MP ಹಾಗೂ 16MP ಕ್ಯಾಮರಾ ಹಿಂಬದಿಯಲ್ಲಿದ್ದರೆ ಮುಂಬದಿಯ ಕ್ಯಾಮೆರಾ 16MP ಆಗಿರಲಿದೆ.
-
The bold and upgraded OnePlus 7T will be available starting at INR 37,999 🥳 pic.twitter.com/Wmwp2LbnhD
— OnePlus India (@OnePlus_IN) 26 September 2019 " class="align-text-top noRightClick twitterSection" data="
">The bold and upgraded OnePlus 7T will be available starting at INR 37,999 🥳 pic.twitter.com/Wmwp2LbnhD
— OnePlus India (@OnePlus_IN) 26 September 2019The bold and upgraded OnePlus 7T will be available starting at INR 37,999 🥳 pic.twitter.com/Wmwp2LbnhD
— OnePlus India (@OnePlus_IN) 26 September 2019
ಒನ್ಪ್ಲಸ್ 7T 6.65 ಇಂಚು ಡಿಸ್ಲೇ ಹೊಂದಿದ್ದು, 8GB RAM/128GB ಹಾಗೂ 8GB RAM/256GB ಆಂತರಿಕ ಸಾಮರ್ಥ್ಯ ಹೊಂದಿದೆ. 4,085mAh ಬ್ಯಾಟರಿ ಸಾಮರ್ಥ್ಯವಿದೆ. ಆಂಡ್ರಾಯ್ಡ್ 10 ಓಎಸ್ ಒನ್ಪ್ಲಸ್ 7T ಹೊಂದಿದೆ. ಡಿಸ್ಲೇ ಟಚ್ ಸೆನ್ಸಾರ್ 40 ಮಿಲಿಸೆಕೆಂಡ್ನಲ್ಲಿ ಸ್ಪಂದಿಸುವ ಸಾಮರ್ಥ್ಯ ಹೊಂದಿದ್ದು ಈ ಮೂಲಕ ಉಳಿದೆಲ್ಲಾ ಮೊಬೈಲ್ಗಿಂತಲೂ ಈ ವಿಚಾರದಲ್ಲಿ ವೇಗ ಹೊಂದಿರಲಿದೆ. ಉಳಿದಂತೆ ಒನ್ಪ್ಲಸ್ 7T ಮೊಬೈಲ್ ವಿನ್ಯಾಸ ಬಹುತೇಕ ಒನ್ಪ್ಲಸ್ 7 ಪ್ರೋ ರೀತಿಯಲ್ಲೇ ಇರಲಿದೆ.
- ಒನ್ಪ್ಲಸ್ 7T 8GB RAM/128GB ಬೆಲೆ: 37,999
- ಒನ್ಪ್ಲಸ್ 7T 8GB RAM/256GB ಬೆಲೆ: 39,999
ಒನ್ಪ್ಲಸ್ ಟಿವಿ:
55 ಇಂಚಿನ 4K ರೆಸಲ್ಯೂಷನ್ ಇರುವ ಒನ್ಪ್ಲಸ್ ಟಿವಿ ಆರಂಭಿಕ ಹಂತದಲ್ಲಿ ಅಮೆರಿಕ, ಭಾರತ ಹಾಗೂ ಚೀನಾದಲ್ಲಿ ಮಾತ್ರ ಲಭ್ಯವಾಗಲಿದೆ. ವಿಶೇಷ ಆಂಡ್ರಾಯ್ಡ್ ಟಿವಿ ಅನುಭವವನ್ನು ಒನ್ಪ್ಲಸ್ ಟಿವಿ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದ್ದು, ಗೂಗಲ್ ಅಸಿಸ್ಟೆಂಟ್ ಇಲ್ಲವೇ ಅಲೆಕ್ಸಾ ಇರಲಿದೆ.
-
There you have it folks! The OnePlus TV Q1 will retail at INR 69,900 and the OnePlus TV Q1 Pro will retail at INR 99,900 pic.twitter.com/VqWHue36Mq
— OnePlus India (@OnePlus_IN) 26 September 2019 " class="align-text-top noRightClick twitterSection" data="
">There you have it folks! The OnePlus TV Q1 will retail at INR 69,900 and the OnePlus TV Q1 Pro will retail at INR 99,900 pic.twitter.com/VqWHue36Mq
— OnePlus India (@OnePlus_IN) 26 September 2019There you have it folks! The OnePlus TV Q1 will retail at INR 69,900 and the OnePlus TV Q1 Pro will retail at INR 99,900 pic.twitter.com/VqWHue36Mq
— OnePlus India (@OnePlus_IN) 26 September 2019
ಒನ್ಪ್ಲಸ್ ಟಿವಿಯಲ್ಲಿ ಅಮೇಜಾನ್ ಪ್ರೈಮ್, ಸನ್ ಎನ್ಎಕ್ಸ್ಟಿ, ವೂಟ್, ನೆಟ್ಫ್ಲಿಕ್ಸ್, ಎರೋಸ್ ನೌ ಹಾಗೂ ಯಪ್ಫ್ಲಿಕ್ಸ್ ಡಿಜಿಟಲ್ ವೇದಿಕೆಗಳ ಎಲ್ಲ ವಿಡಿಯೋ ಹಾಗೂ ಸಿನಿಮಾಗಳನ್ನು ಇಲ್ಲಿ ವೀಕ್ಷಿಸಬಹುದು.
ಒನ್ಪ್ಲಸ್ ಟಿವಿಯಲ್ಲಿ ಎಂಟು ಡಾಲ್ಬಿ ಅಟ್ಮಾಸ್ ಸ್ಪೀಕರ್ ಇದ್ದು ಆರು ಮುಂಭಾಗದಲ್ಲಿದ್ದರೆ ಇನ್ನುಳಿದ ಎರಡು ಹಿಂಭಾಗದಲ್ಲಿ ವಿನ್ಯಾಸ ಮಾಡಲಾಗಿದೆ.
- ಒನ್ಪ್ಲಸ್ ಟಿವಿ Q1 ಬೆಲೆ: 69,900
- ಒನ್ಪ್ಲಸ್ ಟಿವಿ Q1 ಪ್ರೋ ಬೆಲೆ : 99,900