ETV Bharat / business

16 ದಿನವಾದರೂ ಸ್ಥಿರವಾಗಿ ನಿಂತ ಪೆಟ್ರೋಲ್, ಡೀಸೆಲ್ ದರ: ಕಾರಣವೇನು ಗೊತ್ತೇ? - Petrol price in India

ಈ ಮೊದಲು ಸೆಪ್ಟೆಂಬರ್ 22ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು. ಅಕ್ಟೋಬರ್ 2ರಿಂದ ಡೀಸೆಲ್ ದರಗಳು ಬದಲಾಗಿಲ್ಲ. ನವೆಂಬರ್‌ ತಿಂಗಳಲ್ಲಿ ಏರಿಕೆಯಾಗಲು ಪ್ರಾರಂಭಿಸಿ ಡಿಸೆಂಬರ್ 8ರಿಂದ ಮತ್ತೆ ವಿರಾಮಕ್ಕೆ ಮರಳಿತು.

Fuel
ಇಂಧನ
author img

By

Published : Dec 23, 2020, 3:58 PM IST

ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಸಂಭವನೀಯ ನಡೆಗಳನ್ನು ಕಾದು ನೋಡುವ ತಂತ್ರದ ಭಾಗವಾಗಿ ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಯನ್ನು ಸ್ಥಿರವಾಗಿ ಇರಿಸಿಕೊಂಡಿವೆ.

ದೆಹಲಿಯಲ್ಲಿ ಬುಧವಾರ ಪೆಟ್ರೋಲ್ ಬೆಲೆ ಲೀಟರ್​ಗೆ 83.71 ಮತ್ತು ಡೀಸೆಲ್ 73.87 ರೂ.ಯಲ್ಲಿ ಮಾರಾಟ ಆಗುತ್ತಿದೆ. ದೇಶಾದ್ಯಂತ ಇತರೆ ನಗರಗಳಲ್ಲೂ ಎರಡು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಬದಲಾಗದೆ ಉಳಿದಿವೆ.

ಓದಿ: ಅಂದು ಟೆಸ್ಲಾ ಖರೀದಿಸಲು ನಿರಾಕರಿಸಿದ್ದ ಆ್ಯಪಲ್​: ಇವತ್ತು ಅದೇ ಕಂಪನಿ ಮಾಲೀಕ ಜಗತ್ತಿನ ನಂ.2 ಶ್ರೀಮಂತ

ಕೊರೊನಾ ವೈರಸ್​ನ ಹೊಸ ರೂಪಾಂತರದ ಒತ್ತಡದ ಇತ್ತೀಚಿನ ಸುದ್ದಿಗಳು ಪ್ರಪಂಚದಾದ್ಯಂತದ ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರಿವೆ. ಮತ್ತೊಂದು ಸುತ್ತಿನ ಲಾಕ್‌ಡೌನ್‌ಗಳು ಮತ್ತು ಬೇಡಿಕೆ ಹಿಡಿದಿಟ್ಟುಕೊಳ್ಳುವಿಕೆಯಂತಹ ಅನಿಶ್ಚಿತತೆಯು ಮತ್ತೆ ಕಚ್ಚಾ ತೈಲ ಬೆಲೆ ಕೆಳಮುಖವಾಗಿ ಬ್ಯಾರಲ್‌ಗೆ 50 ಡಾಲರ್​ ಸನಿಹಕ್ಕೆ ತಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.