ನವದೆಹಲಿ : ಭಾರತದ ಡಿಜಿಟಲ್ ಪೇಮೆಂಟ್ ಸಂಸ್ಥೆ ಮೊಬಿಕ್ವಿಕ್ 2ನೇ ದ್ವಿತೀಯ ಭಾಗದ ಷೇರುಗಳ ಮಾರಾಟದ ನಂತರ ಜಾಗತಿಕ ಸಂಸ್ಥೆಯಾಗಿ ಮಾರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಬ್ಲ್ಯಾಕ್‌ಸ್ಟೋನ್ ಇಂಡಿಯಾ ಮಾಜಿ ಮುಖ್ಯಸ್ಥ ಮ್ಯಾಥ್ಯೂ ಸಿರಿಯಾಕ್ ನೇತೃತ್ವದಲ್ಲಿ ಇತ್ತೀಚಿಗೆ ದ್ವಿತೀಯ ಇಎಸ್‌ಒಪಿ ಮಾರಾಟ ಮಾಡಲಾಗಿತ್ತು.
ಮೊಬಿಕ್ವಿಕ್ ಉದ್ಯೋಗಿಗಳು ತಮ್ಮ ಇಎಸ್‌ಒಪಿಗಳನ್ನು (ಉದ್ಯೋಗಿಗಳ ಸ್ಟಾಕ್ ಮಾಲೀಕತ್ವ)ದ ತಮ್ಮ ಷೇರುಗಳನ್ನು ದ್ವಿತೀಯ ಭಾಗದಲ್ಲಿ ಮಾರಾಟ ಮಾಡಿದರು. ಈ ಎರಡನೇ ಸುತ್ತಿನಲ್ಲಿ ಬ್ಲ್ಯಾಕ್‌ಸ್ಟೋನ್ ಇಂಡಿಯಾ ಮಾಜಿ ಮುಖ್ಯಸ್ಥ ಮ್ಯಾಥ್ಯೂ ಸಿರಿಯಾಕ್ ಮುನ್ನಡೆಸಿದ್ದಾರೆ. ತಮ್ಮ ಹಿಂದಿನ ಬೆಲೆಗಿಂತ ಎರಡು ಪಟ್ಟು ಷೇರುಗಳ ಬೆಲೆಯನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ವಹಿವಾಟಿನ ಗಾತ್ರ ಬಹಿರಂಗವಾಗಿಲ್ಲ.
ಈ ಬಗ್ಗೆ ಮೊಬಿಕ್ವಿಕ್ ಪ್ರತಿಕ್ರಿಯೆ ನೀಡಿಲ್ಲ. 2ನೇ ಸುತ್ತಿನಲ್ಲಿ ವಹಿವಾಟು ಬಳಿಕ ಎಂಟರ್ಪ್ರೈಸ್ ಮೌಲ್ಯವನ್ನು ಸುಮಾರು 1 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿಕೊಂಡಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಯುಎಇನ ಅಬುಧಾಬಿ ಹೂಡಿಕೆ ಪ್ರಾಧಿಕಾರವು 20 ಮಿಲಿಯನ್ ಷೇರು ಖರೀದಿಯ ನಂತರ 2021ರ ಮೇನಲ್ಲಿ ಮೊಬಿಕ್ವಿಕ್‌ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ಕಂಪನಿಯು ತನ್ನ ಇಎಸ್‌ಒಪಿ 2014 ಯೋಜನೆಯಡಿ ಅರ್ಹ ಉದ್ಯೋಗಿಗಳ ಅನುಕೂಲಕ್ಕಾಗಿ 4.5 ಮಿಲಿಯನ್ ಇಕ್ವಿಟಿ ಷೇರುಗಳನ್ನು ಕಾಯ್ದಿರಿಸಿದೆ. ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ಪ್ರಾರಂಭಿಸಲು ಮಾರುಕಟ್ಟೆ ನಿಯಂತ್ರಕ ಸೆಬಿಯ ಅನುಮೋದನೆಯನ್ನು ಪಡೆದಿದೆ. ಇದರ ಮೂಲಕ 1,900 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಯೋಜಿಸಿದೆ.
ಗುರ್ಗಾಂವ್ ಮೂಲದ ಕಂಪನಿಯು ಜುಲೈನಲ್ಲಿ ಸೆಬಿಯೊಂದಿಗೆ ಆರಂಭಿಕ ಸಾರ್ವಜನಿಕ ಕೊಡುಗೆಗಾಗಿ (ಐಪಿಒ) ಪ್ರಸ್ತಾಪ ಸಲ್ಲಿಸಿತ್ತು. ಐಪಿಒ ಮೂಲಕ ಕಂಪನಿಯು 1,900 ಕೋಟಿ ರೂ. ಷೇರುಗಳನ್ನು ನೀಡಲು ಯೋಜಿಸಿದೆ. ಒಟ್ಟು ಷೇರುಗಳ ಪೈಕಿ 1,500 ಕೋಟಿ ರೂ.ಗಳ ಹೊಸ ಷೇರುಗಳ ವಿತರಣೆಯ ಮೂಲಕ ಸಂಗ್ರಹಿಸಲಾಗುತ್ತದೆ. ಆದರೆ, 400 ಕೋಟಿ ರೂ. ಮೌಲ್ಯದ ಷೇರುಗಳನ್ನು ಅಸ್ತಿತ್ವದಲ್ಲಿರುವ ಷೇರುದಾರರಿಂದ ಆಫರ್-ಫಾರ್-ಸೇಲ್ (OFS) ಮಾರ್ಗದ ಮೂಲಕ ಆಫ್‌ಲೋಡ್ ಮಾಡಲಾಗುತ್ತದೆ.
ಮೊಬಿಕ್ವಿಕ್ 2021ರ ಮಾರ್ಚ್ 31ರ ವೇಳೆಗೆ 101.37 ದಶ ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಮತ್ತು 3.44 ದಶಲಕ್ಷಕ್ಕೂ ಹೆಚ್ಚು ಆನ್‌ಲೈನ್, ಆಫ್‌ಲೈನ್ ಮತ್ತು ಬಿಲ್ಲರ್ ವ್ಯಾಪಾರಿ ಪಾಲುದಾರರನ್ನು ಹೊಂದಿದೆ. 1.5 ಶತಕೋಟಿ ಡಾಲರ್‌ನಿಂದ 1.7 ಶತಕೋಟಿಗೆ ಐಪಿಒ ಮೌಲ್ಯಮಾಪನವನ್ನು ಹೆಚ್ಚಿಸಿಕೊಳ್ಳಲು ಮೊಬಿಕ್ವಿಕ್ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದು ದೀಪಾವಳಿಗೆ ಮುಂಚಿತವಾಗಿ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ.