ಶಿಲ್ಲಾಂಗ್: ಲಾಕ್‌ಡೌನ್ ವಿನಾಯತಿ ಭಾಗವಾಗಿ ವಾರದ ಆರಂಭದಲ್ಲಿ ಮದ್ಯದ ಮಳಿಗೆ ತೆರೆಯಲು ಅವಕಾಶ ನೀಡಿದ ಮೇಘಾಲಯ ಸರ್ಕಾರ, ಲಿಕ್ಕರ್ ಮಾರಾಟದಿಂದಲೇ 6 ಕೋಟಿ ರೂ. ಸಂಪನ್ಮೂಲ ಸಂಗ್ರಹಿಸಿದೆ.
ಮದ್ಯದ ಅಂಗಡಿ ತೆರೆದಾಗಿನಿಂದ ಲಿಕ್ಕರ್ ಪ್ರಿಯರು, ಮಳಿಗೆ ಮುಂದೆ ಸರತಿ ಸಾಲಿನಲ್ಲಿ ನಿಂತು ಖರೀದಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗ್ರಾಹಕರು ಮತ್ತು ಅಂಗಡಿ ಮಾಲೀಕರು ಖರೀದಿಯ ವೇಳೆ ಸಾಮಾಜಿಕ ಅಂತರದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೇ ಕಠಿಣ ಕ್ರಮಗಳ ಎಚ್ಚರಿಕೆಯನ್ನು ಅಧಿಕಾರಿ ನೀಡಿದ್ದಾರೆ.
ಜನದಟ್ಟಣೆ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾದರೇ ಮದ್ಯದ ಮಳಿಗೆಗಳನ್ನು ಮುಚ್ಚಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಎಂ. ಎಸ್. ರಾವ್ ತಿಳಿಸಿದ್ದಾರೆ.