ETV Bharat / business

ಇಂದಿನಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ - Maruti Suzuki hikes vehicle prices

ಕಳೆದ ವರ್ಷ ಮೂರು ಬಾರಿ ವಾಹನ ಬೆಲೆಗಳನ್ನು ಹೆಚ್ಚಿಸಿತ್ತು. ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6 ಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು ಬೆಲೆ ಹೆಚ್ಚಿಸಿದೆ. ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ..

Maruti Suzuki hikes vehicle prices up to 4.3 pc to offset rise in input costs
ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ
author img

By

Published : Jan 15, 2022, 11:54 AM IST

ನವದೆಹಲಿ : ದೇಶದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ) ಮತ್ತೆ ಬೆಲೆ ಏರಿಕೆಯ ಮೊರೆ ಹೋಗಿದೆ. ಕಾರು ಉತ್ಪಾದನಾ ಕಂಪನಿಯು ತನ್ನೆಲ್ಲಾ ಮಾದರಿಗಳ ಮೇಲಿನ ಬೆಲೆಯನ್ನು ಶೇ. 4.3ರವರೆಗೆ ಹೆಚ್ಚಿಸಿದೆ.

ಇನ್​ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಜನಪ್ರಿಯ ಎಂಎಸ್​ಐ ಈ ನಿರ್ಧಾರ ಕೈಗೊಂಡಿದೆ. ವಿವಿಧ ಇನ್​ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಈಗಾಗಲೇ ಕಂಪನಿಯ ವಾಹನಗಳ ವೆಚ್ಚವು ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಂಪನಿ ಹೇಳಿತ್ತು.

ಆ ಮೂಲಕ ಬೆಲೆ ಏರಿಕೆ ಮಾಡಿ ಹೆಚ್ಚುವರಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿ, ಈಗಾಗಲೇ ತನ್ನೆಲ್ಲಾ ಮಾದರಿಗಳ ಮೇಲಿನ ಬೆಲೆಯನ್ನು ಹೆಚ್ಚಿಸಿತ್ತು. ಇದೀಗ ಮತ್ತೆ ಬೆಲೆಯನ್ನು ಶೇ. 4.3ರವರೆಗೆ ಹೆಚ್ಚಿಸಿದೆ.

ಇದನ್ನೂ ಓದಿ: ತಾಜಾ ಮಾಂಸ: ಪ್ರತಿ ಸೆಕೆಂಡ್​ಗೆ ಒಂದು ಆರ್ಡರ್​​​​​​​..! ಚಿಕನ್​​​ ಪ್ರಿಯರೇ ಜಾಸ್ತಿಯಂತೆ!!

ಕಳೆದ ವರ್ಷ ಮೂರು ಬಾರಿ ವಾಹನ ಬೆಲೆಗಳನ್ನು ಹೆಚ್ಚಿಸಿತ್ತು. ಜನವರಿಯಲ್ಲಿ ಶೇ.1.4, ಏಪ್ರಿಲ್‌ನಲ್ಲಿ ಶೇ.1.6 ಮತ್ತು ಸೆಪ್ಟೆಂಬರ್‌ನಲ್ಲಿ ಶೇ.1.9ರಷ್ಟು ಬೆಲೆ ಹೆಚ್ಚಿಸಿದೆ. ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.