ಮುಂಬೈ: ಭಾರತೀಯ ಸಂವೇದಿ ಸೂಚ್ಯಂಕದಲ್ಲಿ ಇಂದು ಭಾರಿ ಮಟ್ಟದ ಏರಿಕೆ ಕಂಡು ಬಂದಿದೆ. ಕೊರೊನಾ ವೈರಸ್ಗೆ ಔಷಧ ಕಂಡು ಹಿಡಿದಿರುವ ಸುದ್ದಿ ಹೊರಬೀಳುತ್ತಿದ್ದಂತೆ ಮುಂಬೈ ಷೇರು ಪೇಟೆಯಲ್ಲಿ ಈ ಏರಿಕೆ ಕಂಡು ಬಂದಿದೆ.
-
Sensex crosses 43,000 points benchmark for the first time ever as its gains more than 500 points, Nifty hits 12,600 pic.twitter.com/vwMC6KduEz
— ANI (@ANI) November 10, 2020 " class="align-text-top noRightClick twitterSection" data="
">Sensex crosses 43,000 points benchmark for the first time ever as its gains more than 500 points, Nifty hits 12,600 pic.twitter.com/vwMC6KduEz
— ANI (@ANI) November 10, 2020Sensex crosses 43,000 points benchmark for the first time ever as its gains more than 500 points, Nifty hits 12,600 pic.twitter.com/vwMC6KduEz
— ANI (@ANI) November 10, 2020
600 ಅಂಕಗಳ ಏರಿಕೆ ಕಂಡು ಬರುತ್ತಿದ್ದಂತೆ ಸೆನ್ಸೆಕ್ಸ್ 43 ಸಾವಿರ ಅಂಕ ದಾಟಿದ್ದು, ನಿಫ್ಟಿ ಕೂಡ 137 ಅಂಕಗಳ ಏರಿಕೆಯೊಂದಿಗೆ 12,598 ಅಂಕ ದಾಖಲು ಮಾಡಿದೆ. ಕೊರೊನಾ ವೈರಸ್ಗೆ ಔಷಧ ಅಭಿವೃದ್ಧಿ ಮಾಡಿರುವ ಆಶಾಭಾವನೆ ಮೂಡಿರುವುದು ಈ ಬೆಳವಣಿಗೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಬರುವ ದಿನಗಳಲ್ಲಿ ಷೇರು ಮಾರುಕಟ್ಟೆ ಹಾಗೂ ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡು ಬರಲಿದೆ ಎನ್ನಲಾಗಿದೆ.
ಈ ಏರಿಕೆಯೊಂದಿಗೆ ಇಂಡಸ್ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಸ್ಬಿಐ,ಲಾರ್ಸನ್, ಹೆಚ್ಡಿಎಫ್ಸಿ ಸೇರಿದಂತೆ ಅನೇಕ ಕಂಪನಿ ಷೇರುಗಳು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಪ್ರಮುಖವಾಗಿ ಬ್ಯಾಂಕಿಂಗ್ ಹಾಗೂ ಹಣಕಾಸು ಕ್ಷೇತ್ರ ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರಾ ಮತ್ತು ಟೈಟಾನ್ ಷೇರು ಏರಿಕೆ ಕಂಡಿವೆ.
ಕಳೆದ 8 ತಿಂಗಳ ಬಳಿಕ ಸೆನ್ಸೆಕ್ಸ್ 43 ಸಾವಿರದ ಗಡಿ ದಾಟಿದ್ದು, ಕೊರೊನಾ ಬಳಿಕ ಚೇತರಿಕೆ ಹಾದಿ ಹಿಡಿದಿದೆ. ಇದು ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ.