ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗಿ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ 100 ರೂ.ಗೆ ತಲುಪಿದಂತೆ, ಶೇ 51ರಷ್ಟು ಭಾರತೀಯರು ಇಂಧನ ಬೆಲೆಗಳ ಮೇಲಿನ ಖರ್ಚು ನಿರ್ವಹಿಸಲು ತಮ್ಮ ಇತರ ಖರ್ಚುಗಳನ್ನು ಕಡಿತಗೊಳಿಸುತ್ತಿದ್ದಾರೆ ಎಂದು ಲೋಕಲ್ಸ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ 21ರಷ್ಟು ಜನರು ತಮ್ಮ ಅಗತ್ಯ ವಸ್ತುಗಳ ವೆಚ್ಚ ಕಡಿತಗೊಳಿಸುತ್ತಿದ್ದಾರೆ. ಅದೊಂದು ಅವರಿಗೆ ನೋವಿನ ಸಂಗತಿಯಾಗಿದೆ. 14 ಪ್ರತಿಶತದಷ್ಟು ಜನರು ಇಂದನ ಪಾವತಿಗಾಗಿ ಉಳಿತಾಯದ ಮೊರೆ ಹೋಗುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ.
43 ಪ್ರತಿಶದಷ್ಟು ಜನರು ತಮ್ಮ ಮಾಸಿಕ ಪೆಟ್ರೋಲ್ ಅಥವಾ ಡೀಸೆಲ್ ಬಿಲ್‌ಗಳು ಸೀಮಿತ ಪ್ರಯಾಣ ಅಥವಾ ಇತರ ಅಂಶಗಳ ನಡುವೆ ವರ್ಕ್ ಫ್ರಾಮ್ ಹೋಮ್ನಿಂದಾಗಿ ಕಡಿಮೆಯಾಗಿದೆ. ಇನ್ನೂ 2 ಪ್ರತಿಶತದಷ್ಟು ಜನರು ಇಂಧನಗಳಿಗೆ ಯಾವುದೇ ಖರ್ಚು ಮಾಡಿಲ್ಲ ಎಂದು ವರದಿ ಹೇಳಿದೆ.
ಇದನ್ನೂ ಓದಿ: 5.5 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ ಯೋಗಿ ಸರ್ಕಾರ: ಅಯೋಧ್ಯೆ ಅಭಿವೃದ್ಧಿಗೆ ಕೊಟ್ಟಿದೆಷ್ಟು?
ಇಂಧನ ಬೆಲೆ ತಗ್ಗಿಸಲು ತಮ್ಮ ರಾಜ್ಯ ಸರ್ಕಾರಗಳು ಏನು ಮಾಡಬೇಕೆಂದು ಪ್ರತಿವಾದಿಗಳು ಬಯಸುತ್ತಾರೆ ಎಂಬ ಪ್ರಶ್ನೆಗೆ, ಶೇ 32ರಷ್ಟು ಜನರು ಮೂಲ ಬೆಲೆಯ ಶೇಕಡಾವಾರು ಬದಲು ಮೌಲ್ಯವರ್ಧಿತ ತೆರಿಗೆಯ (ವ್ಯಾಟ್) ಸಂಪೂರ್ಣ ಮೌಲ್ಯ ವಿಧಿಸಬೇಕು ಎಂದಿದ್ದರೇ ಶೇ 47ರಷ್ಟು ಜನರು ವ್ಯಾಟ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಸ್ತುತ ವ್ಯಾಟ್ ಮಾದರಿ "ಉತ್ತಮವಾಗಿದೆ" ಎಂಬುದು ಶೇ 8ರಷ್ಟು ಗ್ರಾಹಕರು ವಾದ.
ವ್ಯಾಟ್ ಕಡಿಮೆ ಮಾಡುವ ಮೂಲಕ ಅಥವಾ ತೆರಿಗೆಯ ಸಂಪೂರ್ಣ ಮೌಲ್ಯ ವಿಧಿಸುವ ಮೂಲಕ ಶೇ 79ರಷ್ಟು ಸಂವಾದಿಗಳು ಬೆಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತಾರೆ ಎಂದು ಸಮೀಕ್ಷೆ ತೋರಿಸಿದೆ.
ಕಳೆದ 12 ತಿಂಗಳಲ್ಲಿ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾರತೀಯರು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಅರಿಯಲು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯು ದೇಶದ 291ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇರುವ 22,000ಕ್ಕೂ ಅಧಿಕ ನಾಗರಿಕರಿಂದ ಪ್ರತಿಕ್ರಿಯೆ ಪಡೆದಿದೆ.