ಸ್ಯಾನ್ಫ್ರಾನ್ಸಿಸ್ಕೋ : ಐಫೋನ್ 13 ಶ್ರೇಣಿ ಪ್ರೊಡೆಕ್ಟ್‌ನ ಪ್ರಾರಂಭಿಸಲು ಆ್ಯಪಲ್ ಇಂಕಾ ಯೋಜಿಸುತ್ತಿದೆ. ಐಫೋನ್ 13 ಪ್ರೊ ಸುಧಾರಿತ ಪೋರ್ಟ್ರೇಟ್ ಮೋಡ್ನೊಂದಿಗೆ ಹೊಸ ಮ್ಯಾಟ್ ಕಪ್ಪು ಆಯ್ಕೆಯಲ್ಲಿ ಬರಲಿದೆ ಎಂದು ಹೊಸ ವರದಿ ತಿಳಿಸಿದೆ.
ಎವೆರಿಥಿಂಗ್ ಆ್ಯಪಲ್‌ಪ್ರೊನ ಯೂಟ್ಯೂಬ್ ಚಾನೆಲ್ ಮೂಲಕ ಮ್ಯಾಕ್ಸ್ ವೈನ್‌ಬಾಕ್ ನೀಡಿದ ವರದಿಯ ಪ್ರಕಾರ, ಐಫೋನ್ 13 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾಡಲ್ಗಳಿಗೆ ಮ್ಯಾಟ್ ಕಪ್ಪು ಆಯ್ಕೆಯೊಂದಿಗೆ ಬರಲಿದೆ. ಇದು ಹೊಸ ಸ್ಟೇನ್‌ಲೆಸ್ ಸ್ಟೀಲ್ ಲೇಪನವಾಗಿದೆ. ಅದು ಸ್ಮಡ್ಜ್ ಮತ್ತು ಫಿಂಗರ್‌ಪ್ರಿಂಟ್ ಅವಲಂಬನೆ ತಗ್ಗಿಸಲಿದೆ. ಹಿಂಬದಿಯ ಕ್ಯಾಮೆರಾ ವಿನ್ಯಾಸ ಹೊಸದಾಗಿ ಇರಲಿದೆ.
ಇದಲ್ಲದೆ ಆ್ಯಪಲ್ ಸಹ ಕಂಚು/ಕಿತ್ತಳೆ ಬಣ್ಣ ಪ್ರಯೋಗಿಸಿದೆ. ಆದರೆ, ಇದು ಈ ವರ್ಷ ಪ್ರಾರಂಭವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಹೊಸ ಪ್ರೊ ಐಫೋನ್‌ಗಳಲ್ಲಿನ ಭಾವಚಿತ್ರ ಮೋಡ್ ಲಿಡಾರ್ (LiDAR: (ಲೈಟ್ ಡಿಟೆಕ್ಷನ್ ಅಂಡ್ ರೇಜಿಂಗ್ ಅಥವಾ ಲೇಸರ್ ಇಮ್ಯಾಜಿಂಗ್- 3ಡಿ ಲೇಸರ್ ಸ್ಕ್ಯಾನಿಂಗ್) ಅವಲಂಬಿಸಿರುತ್ತದೆ. ಪ್ರಸ್ತುತ ಐಫೋನ್ 12 ಪ್ರೊ, ಪ್ರೊ ಮ್ಯಾಕ್ಸ್ ಮತ್ತು ಐಪ್ಯಾಡ್ ಪ್ರೊನಲ್ಲಿರುವ ಲಿಡಾರ್ ಕಡಿಮೆ-ಬೆಳಕಿನ ಇಮೇಜ್ ಫೋಟೋಗ್ರಫಿಗೆ ಬಳಸಲಾಗುತ್ತದೆ.
ಇದನ್ನೂ ಓದಿ: ಮಾ.31ರಂದು ಸರ್ಕಾರಿ ಚೆಕ್ಗಳ ವಿಶೇಷ ಕ್ಲಿಯರಿಂಗ್ ಸೆಟಲ್ಮೆಂಟ್ ಕಡ್ಡಾಯ : ಬ್ಯಾಂಕ್ಗಳಿಗೆ ಆರ್ಬಿಐ ತಾಕೀತು
ಆ್ಯಪಲ್ ಐಫೋನ್ 13 ಮಾಡಲ್ಗಳು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಫೇಸ್ ಐಡಿ ಜೊತೆಗೆ ದೃಢೀಕರಣಕ್ಕಾಗಿ ಪ್ರದರ್ಶನದ ಅಡಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ.