ETV Bharat / business

ಆರ್ಥಿಕತೆ ಸರಿ ಹೋಗ್ತಿಲ್ಲ; ಮೊನ್ನೆ ₹ 2.72 ಲಕ್ಷ ಕೋಟಿ, ಇಂದು ₹ 1.65 ಲಕ್ಷ ಕೋಟಿ ನಷ್ಟ! - ಬಿಎಸ್​ಇ

ಗುರುವಾರದ ಮುಂಬೈ ಪೇಟೆಯಲ್ಲಿ ಸೆನ್ಸೆಕ್ಸ್ 470.41 ಅಂಶಗಳು ಕುಸಿದು 36,093.47 ಅಂಶಗಳ ಮಟ್ಟಕ್ಕೆ ತಲುಪಿತು. ಬ್ಯಾಂಕಿಂಗ್​, ಇಂಧನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಪ್ರತಿಯಾಗಿ ಬಿಎಸ್​ಇನ ಮಾರುಕಟ್ಟೆ ಬಂಡವಾಳದ ಕಂಪನಿಗಳ ಸಂಪತ್ತು ₹ 1,65,437.91 ಯಿಂದ ₹ 1,38,54,439.41ಗೆ ತಲುಪಿತು.

ಸಾಂದರ್ಭಿಕ ಚಿತ್ರ
author img

By

Published : Sep 19, 2019, 9:47 PM IST

ನವದೆಹಲಿ: ದೇಶಿಯ ಷೇರುಪೇಟೆಯಲ್ಲಿ ಅನಿಶ್ಚಿತತೆ ಮುಂದುವರೆದಿದ್ದು, ಮಂಗಳವಾರಷ್ಟೆ ಹೂಡಿಕೆದಾರರು ₹ 2.72 ಕೋಟಿಯಷ್ಟು ಸಂಪತ್ತು ಕಳೆದುಕೊಂಡು ಕಹಿ ಮರೆಯುವ ಮುನ್ನವೇ ಇಂದು ಮತ್ತೆ ₹ 1.65 ಲಕ್ಷ ಕೋಟಿಯಷ್ಟು ಸಂಪತ್ತು ಕೈಜಾರಿದೆ.

ಗುರುವಾರದ ಮುಂಬೈ ಪೇಟೆಯಲ್ಲಿ ಸೆನ್ಸೆಕ್ಸ್ 470.41 ಅಂಶಗಳು ಕುಸಿದು 36,093.47 ಅಂಶಗಳ ಮಟ್ಟಕ್ಕೆ ತಲುಪಿತು. ಬ್ಯಾಂಕಿಂಗ್​, ಇಂಧನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದವು. ಪ್ರತಿಯಾಗಿ ಬಿಎಸ್​ಇನ ಮಾರುಕಟ್ಟೆ ಬಂಡವಾಳದ ಕಂಪನಿಗಳ ಸಂಪತ್ತು ₹ 1,65,437.91 ಯಿಂದ ₹ 1,38,54,439.41ಗೆ ತಲುಪಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರ (ಎಫ್‌ಐಐ) ನಿರಂತರ ಮಾರಾಟ ಮತ್ತು ಅಮೆರಿಕದ ಫೆಡ್ (ಫೆಡರಲ್​ ರಿಸರ್ವ್​) ದರ ಕಡಿತವು ಭವಿಷ್ಯದಲ್ಲಿ ಉಂಟಾಗಬಹುದಾದದ ಅನಿಶ್ಚಿತತೆಯು ಹೂಡಿಕೆದಾರರ ಮನೋಭಾವವನ್ನು ಕುಗ್ಗಿಸಿದೆ. ನಿಧಾನಗತಿಯ ಪರೋಕ್ಷ ತೆರಿಗೆ ಸಂಗ್ರಹ ಮತ್ತು ತೈಲ ಬೆಲೆಗಳ ಏರಿಕೆಯ ಉತ್ತೇಜಕದತ್ತ ಸರ್ಕಾರದ ಗಮನ ನೆಟ್ಟಿರುವುದು ಹೂಡಿಕೆ ಮಾರುಕಟ್ಟೆಯಿಂದ ಅದರ ದೃಷ್ಟಿ ದೂರಗೊಳಿಸಿದೆ. ಈ ಬೆಳವಣಿಗೆ ಹೀಗೆಯೇ ಸಾಗಿದರೆ ಮಾರುಕಟ್ಟೆಯ ತೊಡಕುಗಳು ಮುಂದುವರಿಯಲಿವೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ವಿಶ್ಲೇಷಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.