ETV Bharat / business

ದಾಸ್ತಾನು ಖಾಲಿಯಾಗುವವರೆಗೂ ಹಳೆ ದರದಲ್ಲೇ ರಸಗೊಬ್ಬರ ಮಾರಾಟಕ್ಕೆ ಒಪ್ಪಿಗೆ - IFFCO agree to unrevised Price

ದೇಶದ ರಸಗೊಬ್ಬರ ತಯಾರಿಕಾ ನಿಗಮ ಇಂಡಿಯನ್​ ಫಾರ್ಮಸ್​​ ಫರ್ಟಿಲೈಸರ್ ಕೋ ಆಪರೇಟಿವ್​ ಲಿಮಿಟೆಡ್​ (ಇಫ್ಕೊ) ಜತೆ ಸಭೆ ಸೇರಿದ ನಂತರ, ಈಗ ಲಭ್ಯವಿರುವ ದಾಸ್ತಾನು ಖಾಲಿ ಆಗುವವರೆಗೂ ಡಿಎಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳನ್ನು ಪರಿಷ್ಕರಿಸದ ಎಂಆರ್‌ಪಿಯೊಂದಿಗೆ ಮಾರಾಟ ಮಾಡಲು ಅವರು ಒಪ್ಪಿಕೊಂಡಿದ್ದಾರೆ. ಮಾಹಿತಿ ಮತ್ತು ಅಗತ್ಯ ಕ್ರಮಗಳ ಬಗ್ಗೆ ಇಫ್ಕೊ ಬರೆದ ಪತ್ರದ ನಕಲನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ ಎಂದು ಡಿ.ವಿ ಸದಾನಂದಗೌಡ ತಿಳಿಸಿದ್ದಾರೆ.

fertilizer
fertilizer
author img

By

Published : Apr 12, 2021, 1:32 PM IST

ನವದೆಹಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ದೆಹಲಿಯಲ್ಲಿ ರಸಗೊಬ್ಬರ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಯೂರಿಯಾ ಹೊರತಾದ ವಿವಿಧ ನಮೂನೆಯ ಪೋಷಕಾಂಶಯುಕ್ತ ರಸಗೊಬ್ಬರ ಬೆಲೆಗಳಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಚಿವರು ಈ ಸಭೆ ಕರೆದಿದ್ದು ಮಹತ್ವದ ಬೆಳವಣಿಗೆಯಾಗಿತ್ತು.

ರಸಗೊಬ್ಬರ ತಯಾರಿಕೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಬಹುತೇಕವಾಗಿ ಭಾರತ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ತೀವ್ರವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಸಗೊಬ್ಬರ ಉತ್ಪಾದನಾ ವೆಚ್ಚವೂ ಅದೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ಎಲ್ಲ ರಸಗೊಬ್ಬರ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಿವೆ. ಆದಾಗ್ಯೂ, ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡುವಂತೆ ರಸಗೊಬ್ಬರ ಕಂಪನಿಗಳು ಹಾಗೂ ಆಮದುದಾರರ ಮನವೊಲಿಸಲು ಕೇಂದ್ರ ಸರ್ಕಾರ ತೀವ್ರ ಪ್ರಯತ್ನ ನಡೆಸಿದೆ.

ಇದನ್ನೂ ಓದಿ: 3ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಸ್ಥಿರ: ಪ್ರಮುಖ ನಗರಗಳಲ್ಲಿ ತೈಲ ಬೆಲೆ ಹೀಗಿದೆ..

ದೇಶದ ರಸಗೊಬ್ಬರ ತಯಾರಿಕಾ ನಿಗಮ ಇಂಡಿಯನ್​ ಫಾರ್ಮಸ್​​ ಫರ್ಟಿಲೈಸರ್ ಕೋ ಆಪರೇಟಿವ್​ ಲಿಮಿಟೆಡ್​ (ಇಫ್ಕೊ) ಜತೆ ಸಭೆ ಸೇರಿದ ನಂತರ, ಈಗ ಲಭ್ಯವಿರುವ ದಾಸ್ತಾನು ಖಾಲಿ ಆಗುವವರೆಗೂ ಡಿಎಪಿ ಮತ್ತು ಎನ್‌ಪಿಕೆ ರಸಗೊಬ್ಬರಗಳನ್ನು ಪರಿಷ್ಕರಿಸದ ಎಂಆರ್‌ಪಿಯೊಂದಿಗೆ ಮಾರಾಟ ಮಾಡಲು ಅವರು ಒಪ್ಪಿಕೊಂಡಿದ್ದಾರೆ. ಮಾಹಿತಿ ಮತ್ತು ಅಗತ್ಯ ಕ್ರಮಗಳ ಬಗ್ಗೆ ಇಫ್ಕೊ ಬರೆದ ಪತ್ರದ ನಕಲನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ಕಳುಹಿಸಲಾಗಿದೆ ಎಂದು ಸಚಿವ ಡಿ.ವಿ ಸದಾನಂದಗೌಡ ಟ್ವೀಟ್ ಮೂಲಕ ತಿಳಿಸಿದ್ದಾರೆ.

  • In the interest of the farmers, the government is closely monitoring the production, movement and availability of fertilizers across the country.

    — Sadananda Gowda (@DVSadanandGowda) April 12, 2021 " class="align-text-top noRightClick twitterSection" data=" ">

ರೈತರ ಹಿತದೃಷ್ಟಿಯಿಂದ ದೇಶಾದ್ಯಂತ ರಸಗೊಬ್ಬರಗಳ ಉತ್ಪಾದನೆ, ಪೂರೈಕೆ ಮತ್ತು ಲಭ್ಯತೆಯನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.