ನವದೆಹಲಿ: ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ತನ್ನ, ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಅಲ್ಕಾಜಾರ್‌ನ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದಾಗಿ ತಿಳಿಸಿದೆ.
6 ಮತ್ತು 7 ಆಸನಗಳ ಆಯ್ಕೆಗಳಲ್ಲಿ ಬರಲಿರುವ ಪ್ರೀಮಿಯಂ ಎಸ್‌ಯುವಿಯನ್ನು ಕಂಪನಿಯ ಮಾರಾಟಗಾರರಲ್ಲಿ ಅಥವಾ ಆನ್‌ಲೈನ್‌ನಲ್ಲಿ 25 ಸಾವಿರ ರೂ. ಪಾವತಿಯೊಂದಿಗೆ ಕಾಯ್ದಿರಿಸಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಕಾಜಾರ್ 2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ನ ಎರಡು ಎಂಜಿನ್ ಆಯ್ಕೆಗಳಲ್ಲಿ ಆರು-ಸ್ಪೀಡ್ ಆಟೋಮ್ಯಾಟಿಕ್ ಮತ್ತು ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.
ಎಚ್‌ಎಂಐಎಲ್ ನಿರ್ದೇಶಕ (ಮಾರಾಟ, ಮಾರ್ಕೆಟಿಂಗ್ & ಸೇವೆ) ತರುಣ್ ಗರ್ಗ್ ಮಾತನಾಡಿ, ಕಂಪನಿಯು 2020ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಎಸ್‌ಯುವಿ ತಯಾರಕ ಕಂಪನಿಯಾಗಿದೆ. ಅದರ ಶ್ರೇಣಿಯ ಎಸ್ಯುವಿಗಳಾದ ಕ್ರೆಟಾ, ವೆನ್ಯೂ, ಟಕ್ಸನ್ ಮತ್ತು ಕೋನಾ ಎಲೆಕ್ಟ್ರಿಕ್ ಸೇರಿವೆ ಎಂದರು.
ಓದಿ: ಹಳೆ ಚಿನ್ನ ಅಡವಿಡುವ, ಮಾರುವ ಮುನ್ನ ನೀವು ಅರಿಯಬೇಕಾದ ಸಂಗತಿಗಳಿವು...
ಇಂದು ನಮ್ಮ ಗ್ರಾಹಕರಿಗೆ ಪ್ರೀಮಿಯಂ 6 ಮತ್ತು 7 ಆಸನಗಳ ಎಸ್‌ಯುವಿ ಹ್ಯುಂಡೈ ಅಲ್ಕಾಜಾರ್‌ಗಾಗಿ ಬುಕಿಂಗ್ ಪ್ರಾರಂಭಿಸಲು ನಾವು ಸಂತೋಷಪಟ್ಟಿದ್ದೇವೆ. ಈ ವಾಹನವು ಒಟ್ಟಿಗೆ ಪ್ರಯಾಣವನ್ನು ಹೆಚ್ಚು ಸ್ಮರಣೀಯ ಮತ್ತು ಮೋಜಿನ ಅನುಭವವಾಗಿಸುತ್ತದೆ ಎಂದು ಹೇಳಿದರು.
ಅಲ್ಕಾಜಾರ್ ಏಳು ಆಸನಗಳ ಎಸ್‌ಯುವಿ ವಿಭಾಗಕ್ಕೆ ಎಚ್‌ಎಂಐಎಲ್ ಪ್ರವೇಶ ಪಡೆದಿದೆ. ಈಗಿರುವ ಮಹೀಂದ್ರಾ ಎಕ್ಸ್‌ಯುವಿ 500, ಹೊಸದಾಗಿ ಬಿಡುಗಡೆಯಾದ ಟಾಟಾ ಸಫಾರಿ ಮತ್ತು ಎಂಜಿ ಹೆಕ್ಟರ್ ಪ್ಲಸ್ಗೆ ಪ್ರತಿಸ್ಪರ್ಧಿಯಾಗಿದೆ.
ಕಂಪನಿಯು ವೇಗವಾಗಿ ಬೆಳೆಯುತ್ತಿರುವ ಎಸ್‌ಯುವಿ ವಿಭಾಗದಲ್ಲಿ ಅಲ್ಕಾಜಾರ್‌ನೊಂದಿಗೆ ತನ್ನ ಸ್ಥಾನ ಬಲಪಡಿಸಲು ಎದುರು ನೋಡುತ್ತಿದೆ. ಇದು ತನ್ನ ಜನಪ್ರಿಯ ಮಧ್ಯಮ ಗಾತ್ರದ ಎಸ್‌ಯುವಿ ಕ್ರೆಟಾ ಮತ್ತು ಪ್ರೀಮಿಯಂ ಆಫರಿಂಗ್ ಟಕ್ಸನ್ ನಡುವೆ ಸ್ಥಾನ ಪಡೆಯಲಿದೆ.