ETV Bharat / business

ಕೊರೊನಾಷಾಢದಲ್ಲಿ ಸಂಕ್ರಾಂತಿಯ ಫಸಲಾದ ಬಂಗಾರ: ಹೂಡಿಕೆಯ ಸುರಕ್ಷಿತ ಸ್ವರ್ಗ ಏಕೆಂದು ಮತ್ತೆ ಸಾಬೀತು! - ಕೋವಿಡ್ ಆರ್ಥಿಕ ಪ್ರಭಾವ

ಪ್ರಸ್ತುತದಲ್ಲಿನ ಚಿನ್ನದ ಬೆಲೆ, ತನ್ನ ಜೀವಿತಾವಧಿಯ ಗರಿಷ್ಠ ಮಟ್ಟಕ್ಕಿಂತ ಶೇ 10ರಷ್ಟು ಕಡಿಮೆಯಾಗಿವೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಬರುವ ಪ್ರಶ್ನೆ, ಚಿನ್ನಕ್ಕಾಗಿ ಮ್ಯಾರಥಾನ್ ಓಟದ ಸ್ಪರ್ಧೆ ಮುಗಿದಿದೆಯಾ ಅಥವಾ ಮುಂದಿನ ಹಂತಕ್ಕೆ ಚಲಿಸುವ ಮೊದಲು ಅದು ಮತ್ತೆ ನಿಂತಿದೆಯಾ? ಎಂಬುದು.

Dhanteras
ಧನ್​ತೇರಸ್
author img

By

Published : Nov 11, 2020, 3:45 PM IST

ನವದೆಹಲಿ: ಚಿನ್ನವು ತನ್ನ ತಾರೆ ವರ್ಚಸ್ಸಿನಿಂದ ಹಿಂದೆದಿಗಿಂತಲೂ ಪ್ರಸ್ತುತ ಅತ್ಯಮೂಲ್ಯವಾದದ್ದು ಎಂಬುದನ್ನು ಸಾಬೀತುಪಡಿಸಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಈ ವರ್ಷ ಗರಿಷ್ಠ ಮಟ್ಟದಲ್ಲಿ ಶೇ 44ರಷ್ಟು ಆದಾಯ ಗಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಸಂಕಷ್ಟದ ಮಧ್ಯೆ, ಹೂಡಿಕೆದಾರರ ಬಂಡವಾಳ ಕಾಪಾಡುವುದರ ಜೊತೆಗೆ ಉತ್ತಮ ಆದಾಯ ನೀಡುವ ಚಿನ್ನಕ್ಕಿಂತ ಮತ್ತೊಂದು ಇಲ್ಲ ಎಂದು ರಿಲಿಗೇರ್ ಬ್ರೋಕಿಂಗ್ ವರದಿಯೊಂದು ತಿಳಿಸಿದೆ.

ಕೋವಿಡ್ -19 ಬಿಕ್ಕಟ್ಟು ಮಾತ್ರವಲ್ಲದೇ, ಸ್ಥೂಲ ಆರ್ಥಿಕ ಸಮಸ್ಯೆಗಳು, ರಾಜಕೀಯ ಅನಿಶ್ಚಿತತೆಗಳು ಮತ್ತು ಹೂಡಿಕೆಯ ಬೇಡಿಕೆಯಂತಹ ಹಲವು ಅಂಶಗಳು ಲೋಹದತ್ತ ಮುಖ ಮಾಡುವಂತೆ ಮಾಡಿವೆ.

ಪ್ರಸ್ತುತದಲ್ಲಿನ ಚಿನ್ನದ ಬೆಲೆ, ತನ್ನ ಜೀವಿತಾವಧಿಯ ಗರಿಷ್ಠ ಮಟ್ಟಕ್ಕಿಂತ ಶೇ 10ರಷ್ಟು ಕಡಿಮೆಯಾಗಿವೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಬರುವ ಪ್ರಶ್ನೆ, ಚಿನ್ನಕ್ಕಾಗಿ ಮ್ಯಾರಥಾನ್ ಓಟದ ಸ್ಪರ್ಧೆ ಮುಗಿದಿದೆಯಾ ಅಥವಾ ಮುಂದಿನ ಹಂತಕ್ಕೆ ಚಲಿಸುವ ಮೊದಲು ಅದು ಮತ್ತೆ ನಿಂತಿದೆಯಾ? ಎಂಬುದು.

ನಿಸ್ಸಂದೇಹವಾಗಿ ಚಿನ್ನವು ಈ ವರ್ಷದ ಹೆಚ್ಚು ಆದ್ಯತೆ ಗಿಟ್ಟಿಸಿಕೊಂಡ ಆಸ್ತಿಯಾಗಿದೆ. ಇದು ಹೂಡಿಕೆದಾರರಿಗೆ ಅತ್ಯಧಿಕ ಆದಾಯ ಒದಗಿಸುತ್ತದೆ. ಆದರೆ, ಆರ್ಥಿಕತೆಯ ಕಪ್ಪು ಮೋಡಗಳ ಸಂದರ್ಭದಲ್ಲಿ ಅವರಿಗೆ ರಕ್ಷಣೆಯಾಗಿ ನಿಲ್ಲುತ್ತದೆ.

ದೇಶೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹವು ಇಲ್ಲಿಯವರೆಗೆ ಸುಮಾರು 30 ಪ್ರತಿಶತದಷ್ಟು ಆದಾಯ ಕಂಡಿದೆ. ಆಗಸ್ಟ್ ಆರಂಭದಲ್ಲಿನ ಎಂಸಿಎಕ್ಸ್‌ನಲ್ಲಿ ಅದರ ಗರಿಷ್ಠ ದರ ಪ್ರತಿ ಗ್ರಾಂ.ಗೆ 56,191 ರೂ.ಗಳಿಂದ ಗಮನಾರ್ಹವಾಗಿ ಬದಲಾಗಿದೆ ಎಂಬುದು ವರದಿಯೊಂದು ತಿಳಿಸಿದೆ. ಮಾಸಿಕ ಮತ್ತು ಸಾಪ್ತಾಹಿಕ ದರ ಪಟ್ಟಿಯಲ್ಲಿ ಹೆಚ್ಚಿನ ಗರಿಷ್ಠ ಮತ್ತು ಹೆಚ್ಚಿನ ಕನಿಷ್ಠತೆ ಜತೆಗೆ ಮುನ್ನಡೆ ಆಗುತ್ತಿದೆ. ವಾರ್ಷಿಕ ದೃಷ್ಟಿಕೋನದಿಂದ ನೋಡಿದರೆ ಬೆಲೆಗಳು ಪ್ರತಿ ಗ್ರಾಂ.ಗೆ 65,000 ರೂ.ಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರಿಲಿಗೇರ್ ಬ್ರೋಕಿಂಗ್ ಅಂದಾಜಿಸಿದೆ.

ಚಿನ್ನಾಭರಣಗಳ ಖರೀದಿಗೆ ಶುಭ ದಿನವಾದ ಧನ್​ತೇರಸ್ ವೇಳೆ ದೇಶದಾದ್ಯಂತ ಈ ಬಾರಿ ಗ್ರಾಹಕರಲ್ಲಿ ಹೆಚ್ಚಿನ ಖರೀದಿ ಸಂಭ್ರಮ ಕಂಡುಬರಲಿದೆ ಎಂಬ ನಿರೀಕ್ಷೆಯನ್ನು ಚಿನ್ನಾಭರಣ ವರ್ತಕರು ಇರಿಸಿಕೊಂಡಿದ್ದಾರೆ.

ಜ್ಯುವೆಲ್ಲರ್ಸ್ ಚೇತರಿಕೆಯು ಆರ್ಥಿಕತೆಯ ಚೇತರಿಕೆಗೆ ಮತ್ತು ಬೇಡಿಕೆ ಹೆಚ್ಚಳಕ್ಕೆ ಈ 'ಧನ್​ತೇರಸ್' ವಹಿವಾಟು ನೆರವಾಗಲಿದೆ. ಚಿನ್ನಾಭರಣ ಉದ್ಯಮವು ಕಳೆದ ವರ್ಷದ ವ್ಯವಹಾರಕ್ಕಿಂತ ಶೇ 70ರಷ್ಟು ಹೆಚ್ಚಿಗೆ ಮಾಡುವ ಸಾಧ್ಯತೆಯಿದೆ. ಹೆಚ್ಚಿನ ಚಿನ್ನದ ಬೆಲೆಗಳ ಏರಿಳಿತ, ಪ್ರಸ್ತುತದ ಕೋವಿಡ್​-19 ಅನಿಶ್ಚಿತತೆಗಳ ಹೊರತಾಗಿಯೂ ಈ ಹಬ್ಬದ ಋತುವಿನಲ್ಲಿ ಚಿಲ್ಲರೆ ಮಾರಾಟದಲ್ಲಿ ಪುನರುಜ್ಜೀವನ ಕಾಣಬಹುದು ಎಂಬುದು ಆಭರಣಕಾರರ ನಿರೀಕ್ಷೆ. ಹಳದಿ ಲೋಹವು ಭಾರತದ ಹಬ್ಬಗಳ ಅವಧಿಯಲ್ಲಿ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಧನ್​ತೇರಸ್, ದೀಪಾವಳಿ ಮತ್ತು ವಿವಾಹದ ಸೀಸನ್​ನಲ್ಲಿ ವ್ಯಾಪಕ ಖರೀದಿ ಕಂಡುಬರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.