ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಭಾರಿ ರಿಯಾಯಿತಿ ಘೋಷಿಸಿದೆ. ಗ್ರಾಹಕರು ಗರಿಷ್ಠ 33,496 ರೂ. ಆಫರ್ಗಳನ್ನು ಅಮೆಜಾನ್, ಡಬ್ಲ್ಯು-ಆರ್ ಮತ್ತು ಜಾಝ್ ಕಾರುಗಳ ಮೇಲೆ ನೀಡುತ್ತದೆ.
ಮಾಡಲ್, ರೂಪಾಂತರ ಮತ್ತು ಪ್ರದೇಶ ಅವಲಂಬಿಸಿ ಈ ಕೊಡುಗೆಗಳು ಅನ್ವಯವಾಗುತ್ತವೆ. ಈ ಆಫರ್ಗಳು ಜೂನ್ 30ರವರೆಗೆ ಮಾನ್ಯವಾಗಿರುತ್ತವೆ ಎಂದು ಹೋಂಡಾ ಕಂಪನಿ ತಿಳಿಸಿದೆ.
ಹೋಂಡಾ ಅಮೆಜಾ ಸೆಡಾನ್ ಮೇಲೆ ಅತಿ ಹೆಚ್ಚು 33,496 ರೂ. ತನಕ ಆಫರ್ ಸಿಗಲಿದೆ. ಇದು ಎಸ್‌ಎಂಟಿ ಪೆಟ್ರೋಲ್ ರೂಪಾಂತರಕ್ಕೆ ಅನ್ವಯಿಸುತ್ತದೆ. ಇದರಲ್ಲಿ 15,000 ರೂ.ವರೆಗೆ ನಗದು ರಿಯಾಯಿತಿ ಮತ್ತು 15,000 ರೂ. ವಿನಿಮಯ ಬೋನಸ್ ಸೇರಿದೆ. ನಿಮಗೆ ನಗದು ರಿಯಾಯಿತಿ ಬೇಡವಾದರೆ, ನೀವು 18,496 ರೂ. ಮೌಲ್ಯದ ಪರಿಕರಗಳನ್ನು ಪಡೆಯಬಹುದು. ಉಳಿದೆಲ್ಲ ರೂಪಾಂತರಗಳನ್ನು ಒಟ್ಟಾಗಿ 15,998 ರೂ.ವರೆಗೆ ಪಡೆಯಬಹುದು.
ಓದಿ: ಗೋಧಿ ಹಿಟ್ಟಿನ ಉದ್ಯಮ ಪ್ರವೇಶಿಸಿದ Parle-G
ಹೋಂಡಾ ಜಾಝ್ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನಲ್ಲಿ ಒಟ್ಟು ರಿಯಾಯಿತಿ 21,908 ರೂ.ಯಷ್ಟಿದೆ. ಈ ಪೈಕಿ 10,000 ರೂ. ನಗದು ರಿಯಾಯಿತಿ ಮತ್ತು 10,000 ರೂ. ವಿನಿಮಯ ಬೋನಸ್ ಒಳಗೊಂಡಿದೆ. ನಿಮಗೆ ನಗದು ರಿಯಾಯಿತಿ ಬೇಡವಾದರೆ, 11,908 ರೂಪಾಯಿ ಮೌಲ್ಯದ ಪರಿಕರಗಳನ್ನು ನೀಡಲಾಗುವುದು. ಡಬ್ಲ್ಯುಆರ್-ವಿ ಯಲ್ಲಿ ಹೋಂಡಾ ಒಟ್ಟು 22,158 ರೂ. ರಿಯಾಯಿತಿ ಘೋಷಿಸಿದೆ.