ನವದೆಹಲಿ: ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ (ಎಸ್‌ಎಂಬಿ) ಸವಾಲಿನ ಆರ್ಥಿಕ ವಾತಾವರಣಕ್ಕೆ ದಿಕ್ಸೂಚಿಯಾಗಲು ಹೊಸ ಬಹುಮುಖಿ ಪ್ರಯತ್ನದ ಭಾಗವಾಗಿ 'ನಮಸ್ತೆ ಡಿಜಿಟಲ್' ಎಂಬ ದೂರದರ್ಶನದ ಸಹಭಾಗಿತ್ವದಲ್ಲಿ ಹೊಸ ಶೋ ಪ್ರಾರಂಭಿಸುವುದಾಗಿ ಗೂಗಲ್ ಇಂಡಿಯಾ ತಿಳಿಸಿದೆ.
'ನಮಸ್ತೆ ಡಿಜಿಟಲ್' ಶೋ ಎಸ್‌ಎಂಬಿಗಳಿಗೆ ಇಂಟರ್ನೆಟ್ ಬಗ್ಗೆ ತಿಳವಳಿಕೆ ಹಾಗೂ ವ್ಯವಹಾರ ವೃದ್ಧಿಗೆ ನೆರವಾಗಲು ಸಮೂಹ ಮಾಧ್ಯಮ ಕಾರ್ಯಕ್ರಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಗೂಗಲ್ ತಿಳಿಸಿದೆ.
ಗೂಗಲ್ ಸರ್ಚ್ ಮತ್ತು ಮ್ಯಾಪಿಂಗ್ನಲ್ಲಿ ಸಣ್ಣ ಉದ್ಯಮಗಳನ್ನು ಕಂಡುಹಿಡಿಯಲು ಗ್ರಾಹಕರಿಗೆ ನೆರವಾಗುವ ಪ್ರಯತ್ನನಕ್ಕೆ ಡಿಡಿ ವಾಹನಿಯಲ್ಲಿ ಹೊಸ 'ನಮಸ್ತೆ ಡಿಜಿಟಲ್' ಶೋ ಆರಂಭಿಸಲಿದೆ. ಹೊಸ ಉಪಕ್ರಮವು ಸಾಫ್ಟ್‌ವೇರ್ ಅಭಿವೃದ್ಧಿ ಕಂಪನಿ ಜೋಹೊ ಮತ್ತು ಪೇಮೆಂಟ್ ಗೇಟ್‌ವೇ ಇನ್‌ಸ್ಟಾಮೊಜೊ ಸಹಭಾಗಿತ್ವದಲ್ಲಿ ವ್ಯವಹಾರಗಳಿಗೆ ಡಿಜಿಟಲ್ ಉಪಸ್ಥಿತಿ ನಿರ್ಮಿಸಿಕೊಡುವತ್ತ ನೆರವಾಗಲಿವೆ.
ನಾನಾ ವ್ಯವಹಾರಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಆನ್-ಬೋರ್ಡಿಂಗ್ ಪ್ರಕ್ರಿಯೆಯನ್ನು ತ್ವರಿತವಾಗಿ ಪತ್ತೆಹಚ್ಚಲು ಗೂಗಲ್ ಸೇವಾ ಪೂರೈಕೆದಾರರಾದ ಡಂಜೊ ಮತ್ತು ಸ್ವಿಗ್ಗಿ ಜತೆ ಸಹಭಾಗಿತ್ವ ಹೊಂದಿದೆ. ಆನ್‌ಲೈನ್‌ನಲ್ಲಿ ಆರ್ಡರ್ ಸ್ವೀಕಾರ ಮತ್ತು ವಿತರಣಾ ಲಾಜಿಸ್ಟಿಕ್ಸ್ ಸಕ್ರಿಯಗೊಳಿಸಲು ಸಣ್ಣ ಉದ್ಯಮಗಳಿಗೆ ಹೆಚ್ಚಿನ ಬೆಂಬಲ ನೀಡಲು ಎರಡೂ ಪಾಲುದಾರರು ಕೈಜೋಡಿಸಲಿದ್ದಾರೆ.
ನೂತನ ಉಪಕ್ರಮದಡಿಯಲ್ಲಿ ಸಣ್ಣ ಉದ್ಯಮಗಳು ಜೋಹೊ ದಾಸ್ತಾನು ಬಳಸಿ ವ್ಯಾಪಾರ ವೆಬ್‌ಸೈಟ್‌ಗಳ ರಚನೆ ಮತ್ತು ಝೋಹೊ ಕಾಮರ್ಸ್ ಮೂಲಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್ 31ವರೆಗೆ ಉಚಿತವಾಗಿ ಮಾರಾಟ ಮಾಡಲಿದೆ. ಮತ್ತೊಂದಡೆ ಇನ್‌ಸ್ಟಾಮೊಜೊ ತನ್ನ 'ಪ್ರೀಮಿಯಂ ಆನ್‌ಲೈನ್ ಸ್ಟೋರ್ ಸಲ್ಯುಷನ್'ಗೆ ಆರು ತಿಂಗಳ ಉಚಿತ ಚಂದಾದಾರಿಕೆ ನೀಡುತ್ತಿದೆ.
ಎಸ್‌ಎಂಬಿಗಳು ಡಂಜೊನ ದಿನದ 24 ಗಂಟೆ (24x7) ವ್ಯಾಪಾರಿ ಬೆಂಬಲ ಪಡೆಯಲು ಶೂನ್ಯ ಸೈನ್ ಅಪ್ ಶುಲ್ಕ ಮತ್ತು ತ್ವರಿತ ನೋಂದಣಿಯನ್ನು ಉಚಿತವಾಗಿ ಪಡೆಯಬಹುದು. ಇದರ ಜೊತೆಗೆ ಸ್ವಿಗ್ಗಿಯ ಏಳು ದಿನಗಳ ತನಕ 'ಫಾಸ್ಟ್ ಟ್ರ್ಯಾಕ್ ಆನ್‌ಬೋರ್ಡಿಂಗ್' ಸೇವೆ ಬಳಸಿಕೊಳ್ಳಬಹುದು. ಈ ವರ್ಷದ ಜುಲೈನಲ್ಲಿ ಪ್ರಾರಂಭವಾದ ಭಾರತದ "ಗ್ರೋ ವಿಥ್ ಗೂಗಲ್ ಸ್ಮಾಲ್ ಬಿಸಿನೆಸ್ ಹಬ್‌ನಲ್ಲಿ ಎಸ್‌ಎಂಬಿಗಳಿಗೆ ಇವೆಲ್ಲವೂ ಲಭ್ಯವಿರುತ್ತವೆ.