ETV Bharat / business

ಕೆಜಿ ಟೀ ಬ್ಯಾಗ್​ಗೆ 75 ಸಾವಿರ ರೂ... ಅಂತಹದ್ದೇನಿದೆ ಇದರಲ್ಲಿ? - ಗುವಾಹಟಿ ಟೀ ಹರಾಜು ಕೇಂದ್ರ

ಪ್ಯಾನ್ ಇಂಡಿಯಾ ಹರಾಜು ವ್ಯವಸ್ಥೆಯಡಿ ​ದಿಕೋನ್​ ಟೀ ಎಸ್ಟೇಟ್​ನ ಗೋಲ್ಡನ್​ ಬಟರ್​ಫ್ಲೈ ವಿಶೇಷ ಟೀ ಬ್ಯಾಗ್ ಕೆ.ಜಿ.ಗೆ 75 ಸಾವಿರ ರೂ.ಗೆ ಮಾರಾಟ ಆಗಿದೆ. ಇದು ಜಗತ್ತಿನ ಯಾವುದೇ ಹರಾಜು ಕೇಂದ್ರದಲ್ಲಿ ಮಾರಾಟವಾಗದ ದಾಖಲೆಯನ್ನು ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 13, 2019, 1:03 PM IST

ಗುವಾಹಟಿ: ಅಸ್ಸೋಂನ ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ (ಜಿಟಿಎಸಿ) 1 ಕೆಜಿ ಟೀ ಬ್ಯಾಗ್​ ದಾಖಲೆಯ ಪ್ರಮಾಣದ 75,000 ರೂ.ಗೆ ಹರಾಜಾಗಿದ್ದು, ದಾಖಲೆ ನಿರ್ಮಿಸಿದೆ.

ಪ್ಯಾನ್ ಇಂಡಿಯಾ ಹರಾಜು ವ್ಯವಸ್ಥೆಯಡಿ ​ದಿಕೋನ್​ ಟೀ ಎಸ್ಟೇಟ್​ನ ಗೋಲ್ಡನ್​ ಬಟರ್​ಫ್ಲೈ ವಿಶೇಷ ಟೀ ಬ್ಯಾಗ್ ಕೆ.ಜಿ.ಗೆ 75 ಸಾವಿರ ರೂ.ಗೆ ಮಾರಾಟ ಆಗಿದೆ. ಇದು ಜಗತ್ತಿನ ಯಾವುದೇ ಹರಾಜು ಕೇಂದ್ರದಲ್ಲಿ ಮಾರಾಟವಾಗದ ದಾಖಲೆಯನ್ನು ಜಿಟಿಎಸಿನಲ್ಲಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಹರಾಜಿನಲ್ಲಿ ದಾಖಲೆಯ ಬೆಲೆಗಳು ಕಂಡುಬರುತ್ತಿವೆ. ಉತ್ತಮ ಉತ್ಪನ್ನದ ಟೀಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಗುಣಮಟ್ಟದ ಟೀಗೆ ಯಾವುದೇ ರೀತಿಯ ಬೆಲೆ ಅಡ್ಡಿಯಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.

ದಿಬ್ರುಗರ್​ನ ಮೈಜಾನ್ ಟೀ ಎಸ್ಟೇಟ್‌ನ ವಿಶೇಷ ಸಾಂಪ್ರದಾಯಿಕ 1 ಕೆಜಿ ಟೀ ಪುಡಿ 70,501 ರೂ.ಗೆ ಹರಾಜಾಗಿದ್ದು, ಇದುವರೆಗಿನ ಗರಿಷ್ಠ ಬೆಲೆಯದ್ದು ಎಂಬ ಹೆಗ್ಗಳಿಕೆ ಇತ್ತು. ಈಗ ಅದು ಬಟರ್​ಫ್ಲೈ ಟೀ ಪಾಲಾಗಿದೆ. ಬಟರ್​ಫ್ಲೈ ಟೀ ಪುಡಿ ಸಂಪೂರ್ಣವಾಗಿ ಕೈಯಿಂದ ಮಾಡಲ್ಪಟ್ಟಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಯಾವುದೇ ಯಂತ್ರಗಳನ್ನು ಬಳಸುವುದಿಲ್ಲ.

ಸಣ್ಣ ಮೊಗ್ಗುಗಳಿಂದ ತಯಾರಿಸಲಾಗುವ ಇಲ್ಲಿನ ಟೀ ಉತ್ನಗಳ ಬ್ರ್ಯಾಂಡ್​ಗೆ ವರ್ಷದಿಂದ ವರ್ಷಕ್ಕೆ ಯಥೇಚ್ಛ ಬೇಡಿಕೆ ಕಂಡುಬರುತ್ತಿದೆ. ಮೇ ಮತ್ತು ಜೂನ್​ ಋತುವಿನ ಮುಂಜಾನೆಯಲ್ಲಿ ಸಣ್ಣ ಮೊಗ್ಗಗಳಿಂದ ಇದನ್ನು ಉತ್ಪಾದಿಸಲಾಗುತ್ತದೆ. ಪ್ರತಿಕೂಲ ಹವಾಮಾನದಿಂದಾಗಿ ಈ ವರ್ಷ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದ ದಾಖಲೆಯ ಬೆಲೆಯಲ್ಲಿ ಹರಾಜು ಆಗುತ್ತಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.