ETV Bharat / business

ಮಳೆಯ ಅಬ್ಬರಕ್ಕೆ ಸಿಲಿಕಾನ್​ ಸಿಟಿಯಲ್ಲಿ ಚಿನ್ನದ ಖರೀದಿ ಇಳಿಮುಖ - undefined

ಅಕ್ಷಯ ತೃತೀಯ ಹಬ್ಬ ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭಾಂಶದ ಸುಗ್ಗಿಯ ಕಾಲ. ಈ ವೇಳೆ ಸಾಕಷ್ಟು ರಿಯಾಯಿತಿ ಕೊಡುಗೆ, ಉಡುಗೊರೆ ಘೋಷಿಸಿ ಆಭರಣ ಪ್ರಿಯರನ್ನು ತಮ್ಮತ್ತ ಸೆಳೆಯುತ್ತಾರೆ. ಚಿನ್ನ ಮಾರಾಟವಾಗುವ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದ ವ್ಯಾಪಾರಿಗಳಿಗೆ ವರುಣ ಅವಕೃಪೆ ತೋರಿದ್ದಾನೆ.

ಸಂಗ್ರಹ ಚಿತ್ರ
author img

By

Published : May 9, 2019, 4:37 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ಸಂಜೆ ಸುರಿದ ಗಾಳಿ ಸಹಿತ ಮಳೆಗೆ ಅಕ್ಷಯ ತೃತೀಯ ಹಬ್ಬದ ನಡುವೆಯೂ ಚಿನ್ನ ಖರೀದಿ ಪ್ರಮಾಣದಲ್ಲಿ ಕುಸಿತವಾಗಿದೆ.

ಅಕ್ಷಯ ತೃತೀಯ ಹಬ್ಬ ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭಾಂಶದ ಸುಗ್ಗಿಯ ಕಾಲ. ಈ ವೇಳೆ ಸಾಕಷ್ಟು ರಿಯಾಯಿತಿ ಕೊಡುಗೆ, ಉಡುಗೊರೆ ಘೋಷಿಸಿ ಆಭರಣ ಪ್ರಿಯರನ್ನು ತಮ್ಮತ್ತ ಸೆಳೆಯುತ್ತಾರೆ. ಮಾರಾಟದ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದ ಚಿನ್ನದ ವ್ಯಾಪಾರಿಗಳಿಗೆ ವರುಣನ ಅವಕೃಪೆ ತೋರಿದ್ದಾನೆ.

ಕಳೆದೆರಡು ದಿನಗಳಿಂದ ಚಿನ್ನಾಭರಣ ಖರೀದಿಯಲ್ಲಿ ಉತ್ಸಾಹ ಕಂಡುಬರಲಿದೆ ಎಂದು ವ್ಯಾಪಾರಿಗಳು ನಿರೀಕ್ಷಿಸಿದ್ದರು. ಆದರೆ, ಸಂಜೆ ಸುರಿದ ಭಾರಿ ಮಳೆಗೆ ಶೇ 30ರಷ್ಟು ಚಿನ್ನ ಖರೀದಿ ಪ್ರಮಾಣ ಇಳಿಕೆಯಾಗಿದೆ. ಸಂಜೆ ಮೇಲೆ ಸುರಿದ ಗಾಳಿ ಸಹಿತ ಮಳೆಯಿಂದ ಚಿನ್ನ ಕೊಳ್ಳಲು ಗ್ರಾಹಕರು ಮಳಿಗೆಗಳತ್ತ ಮುಖ ಮಾಡಿಲ್ಲ. ಅಕ್ಷಯ ತೃತೀಯ ಹಬ್ಬದ ವಾಡಿಕೆಯಂತೆ ಚಿನ್ನ ಖರೀದಿಸಿದರೆ ಚಿನ್ನ ಅಕ್ಷಯ ವಾಗುತ್ತದೆ ಎಂದು ನಂಬಿಕೆಯಿದ್ದು, ಗಾಳಿ ಸಹಿತ ಸುರಿದ ಮಳೆಗೆ ಗ್ರಾಹಕರು ಖರೀದಿಗೆ ಹಿಂದೇಟು ಹಾಕಿದ್ದಾರೆ.

ಈ ವೇಳೆ ಮಾತನಾಡಿದ ಸಾಯಿ ಜ್ಯುವೆಲರಿ ಪ್ಯಾಲೇಸ್​ನ ಸೆಂತಿಲ್, ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಚಿನ್ನದ ಖರೀದಿ ವ್ಯಾಪಕವಾಗಿ ಕಂಡುಬರುತ್ತದೆ. ಈ ವರ್ಷದಲ್ಲಿ ಮೊದಲ ಹಂತದ ಪ್ರಥಮ ದಿನದ ಸಂಜೆ ವೇಳೆ ಖರೀದಿಯ ಪ್ರಮಾಣ ಗಣನೀಯವಾಗಿ ಇಳಿಕೆ ಆಯಿತು.

ಅಕ್ಷಯ ತೃತೀಯ ಹಾಗೂ ಚುನಾವಣೆಯ ತತ್ಪರಿಣಾಮ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಚಿನ್ನ ಖರೀದಿಯಲ್ಲಿ ಶೇ 30ರಷ್ಟು ಇಳಿಕೆ ಕಂಡಿದೆ. ಅಕ್ಷಯ ತೃತೀಯಂತಹ ಹಬ್ಬದ ಅವಧಿಯಲ್ಲೂ ಹಳದಿ ಲೋಹ ಖರೀದಿ ಕುಸಿದಿರುವುದು ಸಹಜವಾಗಿ ಚಿನ್ನಾಭರಣ ಉದ್ಯಮದಲ್ಲಿ ಸ್ವಲ್ಪ ಮಟ್ಟಿನ ಆತಂಕವಿದೆ ಎಂದು ಹೇಳಿದ್ದಾರೆ.

Intro:.

Body:ಮಳೆಯ ಅಬ್ಬರಕ್ಕೆ ಕಡಿಮೆಯಾದ ಚಿನ್ನ ಕರೀದಿ:

ಬೆಂಗಳೂರು: ಅಕ್ಷಯ ತೃತೀಯ ಹಬ್ಬದಂದು ಸುರಿದ ಭಾರಿ ಮಳೆಗೆ ಶೇಕಡ 30ರಷ್ಟು ಚಿನ್ನದ ಖರೀದಿ ಕ್ಷೀಣಿಸಿದೆ. ಸಂಜೆ ಮೇಲೆ ಸುರಿದ ಗಾಳಿ ಸಹಿತ ಮಳೆಯಿಂದ ಚಿನ್ನ ಕೊಳ್ಳುವರು ಚಿನ್ನದ ಅಂಗಡಿಯತ್ತ ಹೋಗಲಿಲ್ಲ.

ಅಕ್ಷಯ ತೃತೀಯ ಹಬ್ಬದ ವಾಡಿಕೆಯಂತೆ ಚಿನ್ನ ಖರೀದಿಸಿದರೆ ಚಿನ್ನ ಅಕ್ಷಯ ವಾಗುತ್ತದೆ ಎಂದು ನಂಬಿಕೆ ಇದೆ. ಆದರೆ ನಿನ್ನೆ ವರುಣನ ಅಬ್ಬರ ಜೋರಾಗಿ ಇದ್ದ ಕಾರಣ ಸುಮಾರು ಇಪ್ಪತ್ತು ನಾಲ್ಕು ಕಿಲೋಮೀಟರ್ ವೇಗದಲ್ಲಿ ಗಾಳಿ ಸಹಿತ ಮಳೆ ನಗರದಲ್ಲಿ ಸುರಿಯಿತು. ಈ ಕಾರಣದಿಂದ ಚಿನ್ನ ಕೊಳ್ಳುವರು ಚಿನ್ನದಂಗಡಿ ಇರಲಿ ಮನೆಗೆ ಸುರಕ್ಷಿತವಾಗಿ ಹೋದರೆ ಸಾಕು ಎಂಬ ಪರಿಸ್ಥಿತಿ ನಿನ್ನೆ ನಿರ್ಮಾಣವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಾಯಿ ಜುವೆಲ್ ಪ್ಯಾಲೇಸ್ ಸ್ಥಾಪಕ ಸೆಂತಿಲ್" ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಚಿನ್ನದ ಖರೀದಿ ವ್ಯಾಪಕವಾಗಿ ಇರುತ್ತದೆ ಅದೇ ರೀತಿ ಈ ವರ್ಷದಲ್ಲಿ ದಿನದ ಮೊದಲ ಹಂತದಲ್ಲಿ ಕಾಣಲು ಸಿಕ್ಕಿತು ಆದರೆ ಸಂಜೆ ವೇಳೆ ಗಣನೀಯವಾಗಿ ಚಿನ್ನ ಕರೀದಿ ಪ್ರಮಾಣದಲ್ಲಿ ಇಳಿಕೆ ಆಯಿತು. ಒಟ್ಟಾರೆಯಾಗಿ ಇದು ಕೇವಲ ಮಳೆಯ ಕಾರಣವಲ್ಲ ಇದರ ಜೊತೆಗೆ ಚುನಾವಣೆಯ ಬಿಸಿ ಅಕ್ಷಯ ತೃತಿಯ ಹಬ್ಬಕ್ಕೂ ತಟ್ಟಿದೆ. ಚಿನ್ನ ಕೊಳ್ಳುವವರು ಹೊಸ ಸರ್ಕಾರ ಬಂದ ಮೇಲೆ ಯಾವ ರೀತಿಯಾದ ನಿಯಮಗಳನ್ನು ತರುತ್ತಾರೆ, ಇದಲ್ಲದೆ ಚಿನ್ನದ ಬೆಲೆಯು ಸಹ ಏರಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಹೇಳಿದರು. ಇವರು ಹೇಳುವ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಚಿನ್ನ ಖರೀದಿಯಲ್ಲಿ ಸುಮಾರು 30% ಇಳಿಕೆಯನ್ನು ಗಮನಿಸಬಹುದು ಎಂದು ಸೇರಿಸಿದರು.

ಒಟ್ಟಾರೆಯಾಗಿ ವರ್ಷ ಕಳೆದಂತೆ ಚಿನ್ನ ಖರೀದಿಯಲ್ಲಿ ಇಳಿಕೆಯಾಗುತ್ತಿರುವುದು ಚಿನ್ನ ಅಂಗಡಿಯ ಮಾಲೀಕರಿಗೆ ಆತಂಕ ಉಂಟುಮಾಡಿದೆ.

Conclusion:.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.