ನವದೆಹಲಿ: ಮೂರು ದಿನಗಳ ಕುಸಿತ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರವು ಶುಕ್ರವಾರದಂದು ಪ್ರತಿ 10 ಗ್ರಾಂ. ಮೇಲೆ 324 ರೂ. ಹೆಚ್ಚಳವಾಗಿ 51,704 ರೂ.ಗೆ ತಲುಪಿದೆ.
ಹಿಂದಿನ ವಹಿವಾಟಿನಲ್ಲಿ ಅಮೂಲ್ಯವಾದ ಲೋಹವು 10 ಗ್ರಾಂ.ಗೆ 51,380 ರೂ.ಯಷ್ಟಿತ್ತು. ಹಿಂದಿನ ವಹಿವಾಟಿನಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ 61,374 ರೂ.ಗಳಿಂದ 1,598 ರೂ. ಹೆಚ್ಚಳವಾಗಿ 62,972 ರೂ.ಗೆ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು 1,910 ಡಾಲರ್ ಮತ್ತು ಬೆಳ್ಳಿ 24.35 ಯುಎಸ್ ಡಾಲರ್ ಗಳಿಕೆಯೊಂದಿಗೆ ವಹಿವಾಟು ನಡೆಸುತ್ತಿದೆ.
ಯುರೋಪ್ನಲ್ಲಿ ನೂತನ ಲಾಕ್ಡೌನ್ ಹೇರಿಕೆ ಭಯದ ನಡುವೆ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮೇಲೆ ಪ್ರಸ್ತುತ ಮಾರುಕಟ್ಟೆಯು ಅನಿಶ್ಚಿತತೆ ವಹಿವಾಟು ನಡೆಸುತ್ತಿದೆ. ಇದರಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಸರಕುಗಳು) ತಪನ್ ಪಟೇಲ್ ಹೇಳಿದ್ದಾರೆ.