ನವದೆಹಲಿ: ರಿಲಯನ್ಸ್ ಜತೆಗಿನ 24,713 ಕೋಟಿ ರೂ.ಒಪ್ಪಂದದ ಕುರಿತು ಯಥಾಸ್ಥಿತಿ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಫ್ಯೂಚರ್ ರಿಟೇಲ್ ಲಿಮಿಟೆಡ್ (ಎಫ್‌ಆರ್‌ಎಲ್) ತಿಳಿಸಿದೆ.
ಅಮೆರಿಕ ಮೂಲದ ಇ-ಕಾಮರ್ಸ್ ದೈತ್ಯ ಅಮೆಜಾನ್, ರಿಲಯನ್ಸ್ ಗ್ರೂಪ್ ಜತೆಗಿನ 24,713 ಕೋಟಿ ರೂ. ಒಪ್ಪಂದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. 'ಈ ಒಪ್ಪಂದವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ' ನ್ಯಾಯಮೂರ್ತಿ ಜೆ ಆರ್ ಮಿಧಾ ಅವರಿದ್ದ ದೆಹಲಿ ಹೈಕೋರ್ಟ್ ಪೀಠ ಮಂಗಳವಾರ ಎಫ್‌ಆರ್‌ಎಲ್‌ಗೆ ನಿರ್ದೇಶನ ನೀಡಿತ್ತು.
ಮಂಗಳವಾರದ ನಿರ್ದೇಶನದ ನಂತರ, ಎಫ್‌ಆರ್‌ಎಲ್ ಕಾನೂನು ಸಹಾಯ ಅನ್ವೇಷಿಸುವುದಾಗಿ ಹೇಳಿತ್ತು. ಅಂದರಂತೆ ಇಂದು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆ ಮಾಡಿದೆ.
2021ರ ಫೆಬ್ರವರಿ 2ರ ಆದೇಶದ ವಿರುದ್ಧ ಕಂಪನಿಯು ದೆಹಲಿಯ ಮಾನ್ಯ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಬಗ್ಗೆ ದಯವಿಟ್ಟು ವಿಚಾರಣೆ ಎನ್ನೆಂಬುವುದನ್ನು ತಿಳಿಸಿ ಎಂದು ಎಫ್‌ಆರ್‌ಎಲ್ ಬುಧವಾರ ನಿಯಂತ್ರಕ ಫಲಿಂಗ್ನಲ್ಲಿ ತಿಳಿಸಿದೆ.
ಎಫ್‌ಆರ್‌ಎಲ್‌ನ ಯೋಜನೆಗೆ ಈಗಾಗಲೇ ಸಿಸಿಐನಿಂದ ಅನುಮೋದನೆ ದೊರೆತಿದೆ. ಸೆಬಿಯಿಂದ ಯಾವುದೇ ಆಕ್ಷೇಪಣೆ ಇಲ್ಲ. ಆ ನಂತರ ಅದು 2021ರ ಜನವರಿ 26ರಂದು ಮುಂಬೈನ ಎನ್‌ಸಿಎಲ್‌ಟಿಯನ್ನು ಸಂಪರ್ಕಿಸಿತ್ತು. ಅರ್ಜಿಯನ್ನು ಎನ್‌ಸಿಎಲ್‌ಟಿ ಇನ್ನೂ ಪರಿಗಣಿಸಬೇಕಿಲ್ಲ ಎಂದು ಎಫ್‌ಆರ್‌ಎಲ್ ತಿಳಿಸಿದೆ.
ಇದನ್ನೂ ಓದಿ: ಲೋಕಲ್ ಟ್ರೈನ್ಗೆ ನಮಿಸಿದ ಪ್ರಯಾಣಿಕ: 'ಭಾರತದ ಆತ್ಮ ಹೀಗೇ ಇರಲಿ' ಎಂದ ಆನಂದ್ ಮಹೀಂದ್ರಾ
ಕಳೆದ ತಿಂಗಳು ಸಿಂಗಾಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದಲ್ಲಿ (ಎಸ್‌ಐಎಸಿ) ತುರ್ತು ಮಧ್ಯಸ್ಥಿಕೆದಾರರ (ಇಎ) ಮಧ್ಯಂತರ ಆದೇಶ ಜಾರಿಗೊಳಿಸುವಂತೆ ಕೋರಿ ಅಮೆಜಾನ್ ದೆಹಲಿ ಹೈಕೋರ್ಟ್‌ನ್ನು ಸಂಪರ್ಕಿಸಿತ್ತು. ಅದು ಎಫ್‌ಆರ್‌ಎಲ್ ಅನ್ನು ರಿಲಯನ್ಸ್ ಜತೆಗಿನ ಒಪ್ಪಂದಕ್ಕೆ ಮುಂದಾಗದಂತೆ ತಡೆಯಿತು ಕೋರಿತ್ತು.