ETV Bharat / business

ಸೆಪ್ಟೆಂಬರ್‌ ಅಂತ್ಯಕ್ಕೆ Ford ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹುದ್ದೆ ತೊರೆಯಲಿರುವ ಅನುರಾಗ್‌

author img

By

Published : Sep 25, 2021, 12:11 PM IST

ಭಾರತದಲ್ಲಿರುವ ಅಮೆರಿಕ ಮೂಲದ ಆಟೋಮೊಬೈಲ್‌ ಸಂಸ್ಥೆ ಫೋರ್ಡ್‌(Ford)ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುರಾಗ್‌ ಮೆಹ್ರೋತ್ರಾ ಈ ತಿಂಗಳಾಂತ್ಯಕ್ಕೆ ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆ.

Ford India announces leadership rejig, MD to step down by month-end
ಸೆಪ್ಟೆಂಬರ್‌ ಅಂತ್ಯದ ವೇಳೆಗೆ ಫೋರ್ಡ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹುದ್ದೆ ತೊರೆಯಲಿರುವ ಅನುರಾಗ್‌

ನವದೆಹಲಿ: ಭಾರತದಲ್ಲಿ ವಾಹನ ಉತ್ಪಾದನೆ ಸ್ಥಗಿತಗೊಳಿಸಿದ ಕೆಲವೇ ವಾರಗಳ ನಂತರ ಅಮೆರಿಕದ ಆಟೋಮೊಬೈಲ್‌ ಸಂಸ್ಥೆ ಫೋರ್ಡ್(Ford) ಸಂಸ್ಥೆಯ ನಾಯಕತ್ವದ ಬದಲಾವಣೆಯನ್ನು ಘೋಷಿಸಿದೆ. ಫೋರ್ಡ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಅನುರಾಗ್ ಮೆಹ್ರೋತ್ರಾ ಈ ತಿಂಗಳ ಅಂತ್ಯದ ವೇಳೆಗೆ ಕಂಪನಿಯನ್ನು ತೊರೆಯಲಿದ್ದಾರೆ ಎಂದು ಹೇಳಿದೆ.

ಪ್ರಸ್ತುತ ಫೋರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಫ್ಐಪಿಎಲ್)ನ ಉತ್ಪಾದನಾ ವಿಭಾಗದ ನಿರ್ದೇಶಕರಾಗಿರುವ ಬಾಲಸುಂದರಂ ರಾಧಾಕೃಷ್ಣನ್ (ಬಾಲ) ಅವರನ್ನು ಕಂಪನಿಯ ಟ್ರಾನ್ಸ್‌ಫಾರ್ಮೆಷನ್‌ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಎಫ್ಐಪಿಎಲ್‌ನ ವಕ್ತಾರರು ತಿಳಿಸಿದ್ದಾರೆ.

ಕಂಪನಿಯ ಪುನರ್‌ ರಚನೆಗೆ ಸಂಬಂಧಿಸಿದ ಸೇವೆಗಳನ್ನು ಬಾಲಾ ಅವರು ನೋಡಿಕೊಳ್ಳುತ್ತಾರೆ. ಭಾರತದಲ್ಲಿನ ಗ್ರಾಹಕರು ಮತ್ತು ಪಾಲುದಾರರನ್ನು ಬೆಂಬಲಿಸಲು ಸಂಸ್ಥೆ ಬದ್ಧವಾಗಿದೆ ಎಂತಲೂ ಅವರು ಹೇಳಿದ್ದಾರೆ.

ಸುಮಾರು ಮೂರು ದಶಕಗಳ ನಂತರ ಭಾರತದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಹೆಣಗಾಡುತ್ತಿರುವ ಫೋರ್ಡ್ ಮೋಟಾರ್ ಕಂಪನಿ, ಸೆಪ್ಟೆಂಬರ್ 9 ರಂದು ದೇಶದ ಎರಡು ವಾಹನಗಳ ಉತ್ಪಾದನೆ ಘಟಕಗಳನ್ನು ನಿಲ್ಲಿಸುವುದಾಗಿ ಘೋಷಿಸಿತ್ತು. ಪುನರ್‌ ರಚನೆಯಲ್ಲಿ ಈಗಾಗಲೇ ಆಮದು ಮಾಡಿಕೊಂಡಿರುವ ವಾಹನಗಳನ್ನು ಮಾತ್ರ ಮಾರಾಟ ಮಾಡುವುದಾಗಿ ಘೋಷಿಸಿತ್ತು.

ಸುಮಾರು 2.5 ಶತಕೋಟಿ ಡಾಲರ್ ಹೂಡಿಕೆ ಮಾಡಿರುವ ಚೆನ್ನೈ (ತಮಿಳುನಾಡು) ಮತ್ತು ಸನಂದ್ (ಗುಜರಾತ್) ಘಟಕಗಳನ್ನು ಸ್ಥಗಿತಗೊಳಿಸುತ್ತಿದೆ. ಸದ್ಯ ಭಾರತದಲ್ಲಿ 2 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ಅನುಭವಿಸಿದೆ. ಫೋರ್ಡ್‌ ಸಂಸ್ಥೆಯ ಈ ನಿರ್ಧಾರದಿಂದ 4,000ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 300 ಮಾರಾಟ ಕೇಂದ್ರಗಳನ್ನು ನಿರ್ವಹಿಸುವ 150 ಡೀಲರ್‌ಗಳ ಮೇಲೆ ಪರಿಣಾಮ ಬೀರಲಿದೆ.

ಫೋರ್ಡ್ ಇಂಡಿಯಾ 2021ರ ನಾಲ್ಕನೇ ತ್ರೈಮಾಸಿಕದಲ್ಲಿ ಸನಂದ್‌ ಘಟಕದಲ್ಲಿ ವಾಹನ ಜೋಡಣೆಯನ್ನು ಮತ್ತು 2022ರ ಎರಡನೇ ತ್ರೈಮಾಸಿಕದಲ್ಲಿ ಚೆನ್ನೈ ಘಟಕದಲ್ಲಿ ವಾಹನ ಮತ್ತು ಎಂಜಿನ್ ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿದೆ.

ಭಾರತದಲ್ಲಿ 11,000 ಕ್ಕಿಂತ ಹೆಚ್ಚು ಸದಸ್ಯರನ್ನು ಫೋರ್ಡ್ ಹೊಂದಿದೆ. ಫೋರ್ಡ್​ ಬಿಸಿನೆಸ್ ಸೊಲ್ಯೂಷನ್ಸ್, ಫೋರ್ಡ್ ಪ್ಲಸ್‌ ಅನ್ನು ಜಾಗತಿಕವಾಗಿ ಮಾರ್ಪಡಿಸುವ ಹಾಗೂ ಆಧುನೀಕರಿಸುವ ಯೋಜನೆಗೆ ಬೆಂಬಲವಾಗಿ ಸಾಫ್ಟ್‌ವೇರ್ ಡೆವಲಪರ್‌ಗಳು, ಡೇಟಾ ವಿಜ್ಞಾನಿಗಳು, ಆರ್ & ಡಿ ಎಂಜಿನಿಯರ್‌ಗಳು, ಹಣಕಾಸು ಹಾಗೂ ಅಕೌಂಟಿಂಗ್ ವೃತ್ತಿಪರರಿಗೆ ಹೆಚ್ಚಿನ ಅವಕಾಶಗಳನ್ನು ಒದಗಿಸಲು ಯೋಜಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.