ಮುಂಬೈ: ಆರ್‌ಬಿಐ ವಿತ್ತೀಯ ನೀತಿ ಫಲಿತಾಂಶಕ್ಕೂ ಮುನ್ನ ಈಕ್ವಿಟಿ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ದಾಖಲೆಯ ಪ್ರಗತಿ ಸಾಧಿಸಿವೆ.
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 51,000 ಗಡಿದಾಟಿದ ಬಳಿಕ ಈಗ 50,830.76 ಅಂಕಗಳ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಆರಂಭಿಕ ವಹಿವಾಟಿನಲ್ಲಿ 216.47 ಅಂಕ ಗಳಿಸಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 14,968.95 ಅಂಕಗಳಿಗೆ ತಲುಪಿ 73.30 ಅಂಕಗಳಷ್ಟು ಹೆಚ್ಚುವರಿ ಏರಿಕೆ ದಾಖಲಿಸಿದೆ.
ಎಸ್‌ಬಿಐ, ಕೊಟಕ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ, ಒಎನ್‌ಜಿಸಿ ಮತ್ತು ಆಕ್ಸಿಸ್ ಬ್ಯಾಂಕ್ ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟಾಪ್ ಗೇನರ್ಗಳಾಗಿದ್ದಾರೆ. ಸೆನ್ಸೆಕ್ಸ್ನಲ್ಲಿ 22 ಷೇರುಗಳು ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿದ್ದವು.
ಗುರುವಾರ ಸೆನ್ಸೆಕ್ಸ್ ತನ್ನ ಮುಕ್ತಾಯಕ್ಕೆ ಸಾರ್ವಕಾಲಿಕ 50,614.29 ಅಂಕಗಳಿಗೆ ತಲುಪಿ 358.54 ಅಂಕ ಏರಿಕೆ ದಾಖಲಿಸಿತ್ತು. ನಿಫ್ಟಿ ಕೂಡ ಗರಿಷ್ಠ 14,895.65 ಅಂಕಗಳಿಗೆ ತಲುಪಿತ್ತು. ಈ ಮಧ್ಯೆ ರಿಸರ್ವ್ ಬ್ಯಾಂಕ್ ತನ್ನ ದ್ವಿ ಮಾಸಿಕ ಹಣಕಾಸು ನೀತಿ ಪ್ರಕಟಿಸಿದೆ. ಪ್ರಸ್ತುತ ಬಿಎಸ್‌ಇ 275 ಅಂಕ ಹಾಗೂ ನಿಫ್ಟಿ 173 ಅಂಕ ಏರಿಕೆಯೊಂದಿಗೆ ವಹಿವಾಟು ನಿರತವಾಗಿವೆ.
ಇದನ್ನೂ ಓದಿ: ಸತತ ನಾಲ್ಕನೇ ಬಾರಿಯೂ RBI ಬ್ಯಾಂಕ್ ಬಡ್ಡಿದರ ಸ್ಥಿರ: ಕಾರಣವೇನು ಗೊತ್ತೇ?