ನವದೆಹಲಿ: ಒಂದು ವಾರದ ದರ ಏರಿಕೆಯ ವಿರಾಮದ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ ಮಂಗಳವಾರವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳ ಬೆಲೆ ಸೂಚನೆಯ ಪ್ರಕಾರ ಮಂಗಳವಾರ ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 25 ಪೈಸೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಡೀಸೆಲ್ ಚಿಲ್ಲರೆ ಮಾರಾಟದ ಬೆಲೆ ಲೀಟರ್‌ಗೆ 80.78 ರೂ.ಗೆ ತಲುಪಿದೆ.
ಸತತ 8ನೇ ದಿನಕ್ಕೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರತಿ ಲೀಟರ್ 80.43 ರೂ.ಗೆ ಮಾರಾಟ ಆಗುತ್ತಿದೆ. ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಪ್ರಮಾಣವನ್ನು ಅವಲಂಬಿಸಿ ದರಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಆಗುತ್ತವೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೊನೆಯದಾಗಿ ಜೂನ್ 29ರಂದು ಪರಿಷ್ಕರಿಸಲಾಯಿತು. ಕಳೆದ ಒಂದು ತಿಂಗಳಲ್ಲಿ 23 ಬಾರಿ ಡೀಸೆಲ್ ಬೆಲೆ ಹೆಚ್ಚಿಸಿದ್ದರೇ ಪೆಟ್ರೋಲ್ ದರ 21 ಪಟ್ಟು ಏರಿಕೆ ಮಾಡಲಾಗಿದೆ.
ಜೂನ್ 7ರಿಂದ ಈವರೆಗೆ ತೈಲ ಕಂಪನಿಗಳು ಪೆಟ್ರೋಲ್‌ಗೆ 9.17 ರೂ. ಮತ್ತು ಡೀಸೆಲ್ ಮೇಲೆ 11.39 ರೂ. ಏರಿಕೆ ಮಾಡಿವೆ.