ETV Bharat / business

ಬ್ಯಾಂಕ್​​ ದಿವಾಳಿ/ಬಂದ್​ ಆದರೆ ಗ್ರಾಹಕರಿಗೆ 90 ದಿನಗಳಲ್ಲಿ 5 ಲಕ್ಷ ರೂ ವಿಮಾ ಮೊತ್ತ: ಸೀತಾರಾಮನ್​ - ಕೇಂದ್ರ ಸಚಿವ ಸಂಪುಟ

ಆರ್​ಬಿಐ ವ್ಯಾಪ್ತಿಗೊಳಪಡುವ ಬ್ಯಾಂಕ್​​ ದಿವಾಳಿ ಅಥವಾ ಬಂದ್​ ಆದರೆ ಗ್ರಾಹಕರಿಗೆ 90 ದಿನಗಳಲ್ಲಿ 5 ಲಕ್ಷ ರೂ. ವಿಮಾ ಮೊತ್ತ ಸಿಗುವ ಮಸೂದೆ ಇಂದಿನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

FM
FM
author img

By

Published : Jul 28, 2021, 7:08 PM IST

ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ಇಂದು ಮಹತ್ವದ ಮಸೂದೆವೊಂದಕ್ಕೆ ಅನುಮೋದನೆ ನೀಡಲಾಗಿದ್ದು, ಇದರ ಪ್ರಕಾರ ಬ್ಯಾಂಕ್​ ದಿವಾಳಿ ಅಥವಾ ಬಂದ್​ ಆದರೆ ಬ್ಯಾಂಕ್​ನಲ್ಲಿ ಖಾತೆ ಹೊಂದಿರುವ​ ಗ್ರಾಹಕರು ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ಅಡಿಯಲ್ಲಿ 90 ದಿನಗಳಲ್ಲಿ 5 ಲಕ್ಷ ರೂ. ವಿಮಾ ಮೊತ್ತ ಪಡೆದುಕೊಳ್ಳಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸೀತಾರಾಮನ್ ಭಾಗಿ

ಇಂದಿನ ಸಚಿವ ಸಂಪುಟದಲ್ಲಿ (DICGC Amendment Bill 2021)ಮಸೂದೆಗೆ ಅನುಮೋದನೆ ನೀಡಲಾಗಿದೆ. ಇದರ ಪ್ರಕಾರ, ಠೇವಣಿ ವಿಮೆ ಮತ್ತಿ ಸಾಲ ಖಾತರಿ ಮಸೂದೆ ಅಡಿಯಲ್ಲಿ ಬ್ಯಾಂಕ್​ನ ಗ್ರಾಹಕರ ಠೇವಣಿ ರಕ್ಷಣೆ ನೀಡಲಾಗುತ್ತಿದ್ದು, ಇದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಂದು ವೇಳೆ ಆರ್​ಬಿಐನಿಂದ ಬ್ಯಾಂಕ್​ ಮೇಲೆ ಕೆಲವೊಂದು ನಿರ್ಬಂಧ ಹೇರಿ ಬ್ಯಾಂಕ್​ ಬಂದ್ ಮಾಡಿದರೂ, ಗ್ರಾಹಕರಿಗೆ 90 ದಿನದೊಳಗೆ ಅವರ ಹಣ ಹಾಗೂ ವಿಮೆ ಪಡೆದುಕೊಳ್ಳಬಹುದಾಗಿದೆ.

ದೇಶದಲ್ಲಿ ಎಲ್ಲ ವಾಣಿಜ್ಯ ಬ್ಯಾಂಕ್​ ಹಾಗೂ ವಿದೇಶಿ ಬ್ಯಾಂಕ್​ಗಳು(ಭಾರತದಲ್ಲಿ ಕಾರ್ಯನಿರ್ವಹಣೆ) ಈ ಮಸೂದೆಗೊಳಪಡಲಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಿಳಿಸಿದ್ದಾರೆ.

ಬ್ಯಾಂಕ್​ನಲ್ಲಿ ಖಾತೆ ಹೊಂದಿರುವ ಗ್ರಾಹಕನಿಗೆ ಇದರ ಲಾಭ ಸಿಗಲಿದ್ದು, ಒಂದು ವೇಳೆ ಬ್ಯಾಂಕ್​ ಬಂದ್​ ಅಥವಾ ಲೈಸನ್ಸ್​ ರದ್ದುಗೊಂಡಾಗ ಪರಿಹಾರ ಸಿಗಲಿದೆ.ಈ ಹಿಂದೆ ವಿಮೆ ಮೊತ್ತ 1 ಲಕ್ಷ ರೂ. ಆಗಿತ್ತು. ಆದರೆ ಇದೀಗ 5ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಸೀತಾರಾಮನ್​ ತಿಳಿಸಿದ್ದಾರೆ.

ಈ ಹಿಂದೆ 2021ರ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ವಿಚಾರವಾಗಿ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಠೇವಣಿ ವಿಮೆ ಮತ್ತು ಸಾಲ ಖಾತರಿ(DICGC Act) ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.