ETV Bharat / business

ಭಾರತದಲ್ಲಿ ಆಡಿ A4 ಹೊಸ ಆವೃತ್ತಿ ಕಾರು ಬಿಡುಗಡೆ : 7.3 ಸೆಕೆಂಡಿಗೆ 0-100 km ಸ್ಪೀಡ್​, ಬೆಲೆ ಎಷ್ಟು ಗೊತ್ತೇ? - ಆಡಿ ಎ4 ಹೊಸ ಕಾರು ಫೀಚರ್

5ನೇ ಪೀಳಿಗೆಯಲ್ಲಿ ಹೊಸ ಆಡಿ ಎ4 ಇತ್ತೀಚಿನ ತಂತ್ರಜ್ಞಾನ ಹೊಂದಿದೆ. ಹಲವು ವಿನೂತನ ಫೀಚರ್​ ಅಳವಡಿಸಿದ್ದೇವೆ. ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಎಂಬ ಎರಡು ಮಾಡಲ್​​ಗಳಲ್ಲಿ ಲಭ್ಯವಿದೆ. ಕಸ್ಟಮೈಸ್ ಮಾಡಬಹುದಾದ ಆಂತರಿಕ ವೈಶಿಷ್ಟ್ಯಗಳು ಸಹ ಇವೆ..

Audi
ಆಡಿ
author img

By

Published : Jan 5, 2021, 1:33 PM IST

ನವದೆಹಲಿ : ಜರ್ಮನಿಯ ಐಷಾರಾಮಿ ಕಾರು ತಯಾರಕ ಆಡಿ ತನ್ನ ಜನಪ್ರಿಯ ಸೆಡಾನ್ ಎ4ನ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಆವೃತ್ತಿಯ ಆಡಿ ಎ4 ಬೆಲೆ 42.34 ಲಕ್ಷ ರೂ.ಯಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

ಹೊಸ ಐದನೇ ತಲೆಮಾರಿನ ಆಡಿ ಎ4 ನೂತನ ವಿನ್ಯಾಸವನ್ನು ಹೊಂದಿದ್ದು, 2.0 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದು 190 ಹೆಚ್‌ಪಿ ಶಕ್ತಿ ಉತ್ಪಾದಿಸುತ್ತದೆ. 7.3 ಸೆಕೆಂಡ್​ಗಳಲ್ಲಿ 0 ರಿಂದ 100 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಗಂಟೆಗೆ 241 ಕಿ.ಮೀ ವೇಗ ಸಾಧಿಸಬಹುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಆಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ಧಿಲ್ಲಾನ್, ನಮ್ಮ ಅತ್ಯುತ್ತಮ ಮಾರಾಟಗಳಲ್ಲಿ ಒಂದಾದ ಹೊಸ ಆಡಿ ಎ4ನ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡುವುದರೊಂದಿಗೆ ಹೊಸ ವರ್ಷ ಪ್ರಾರಂಭಿಸಲು ನಾವು ತುಂಬಾ ಸಂತೋಷ ಪಡುತ್ತೇವೆ ಎಂದರು.

ಇದನ್ನೂ ಓದಿ: ನಿಮ್ಮ ವರ್ತನೆಯಿಂದ ಭ್ರಮನಿರಸನಗೊಂಡಿದ್ದೇವೆ: ಅಮೆಜಾನ್‌ ನೋಟಿಸ್​ಗೆ ಕಿಶೋರ್ ಬಿಯಾನಿ ಪ್ರತಿಕ್ರಿಯೆ

5ನೇ ಪೀಳಿಗೆಯಲ್ಲಿ ಹೊಸ ಆಡಿ ಎ4 ಇತ್ತೀಚಿನ ತಂತ್ರಜ್ಞಾನ ಹೊಂದಿದೆ. ಹಲವು ವಿನೂತನ ಫೀಚರ್​ ಅಳವಡಿಸಿದ್ದೇವೆ. ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಎಂಬ ಎರಡು ಮಾಡಲ್​​ಗಳಲ್ಲಿ ಲಭ್ಯವಿದೆ. ಕಸ್ಟಮೈಸ್ ಮಾಡಬಹುದಾದ ಆಂತರಿಕ ವೈಶಿಷ್ಟ್ಯಗಳು ಸಹ ಇವೆ.

ಕೀಲಿ ರಹಿತ ಪ್ರವೇಶ, ಗೆಸ್ಚರ್ ಆಧಾರಿತ ಬೂಟ್ ಲೈಡ್​ ಒಪನಿಂಗ್​, ಚಾಲಕರ ಆಸನದಲ್ಲಿ ಮೆಮೊರಿ ಪವರ್ ಫ್ರಂಟ್ ಆಸನ ಮತ್ತು ಮೂರು ವಲಯ ಹವಾಮಾನ ನಿಯಂತ್ರಣದಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.