ETV Bharat / business

ಇಂದಿನಿಂದ ಎಟಿಎಂ ಹಣ ವಿತ್‌ಡ್ರಾ ಸೇವಾ ಶುಲ್ಕ ಹೆಚ್ಚಳ ; ಮಿತಿ ಮೀರಿದರೆ ಪ್ರತಿ ವಹಿವಾಟಿಗೆ 21 ರೂ. - ಇಂದಿನಿಂದ ಎಟಿಎಂ ಹಣ ವಿತ್‌ಡ್ರಾ ಸೇವಾ ಶುಲ್ಕ ಹೆಚ್ಚಳ

ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ವಿತ್‌ ಡ್ರಾಗಳನ್ನು ಉಚಿತವಾಗಿ ಪಡೆಯಬಹುದು. ಇದರಲ್ಲಿ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳು ಸೇರಿವೆ. ಇತರ ಬ್ಯಾಂಕ್ ಎಟಿಎಂಗಳಿಂದ ಮೆಟ್ರೋ ನಗರಗಳಲ್ಲಿ ಮೂರು ವಹಿವಾಟುಗಳು ಉಚಿತವಾಗಿದ್ದರೆ ಮೆಟ್ರೋ ಅಲ್ಲದ ನಗರಗಳು ಹಾಗೂ ಪಟ್ಟಣಗಳಲ್ಲಿ ಐದು ವಹಿವಾಟುಗಳು ಉಚಿತವಾಗಿವೆ..

ATM service charges increase, to cost Rs 21 per transaction from today
ಇಂದಿನಿಂದ ಎಟಿಎಂ ಹಣ ವಿತ್‌ಡ್ರಾ ಸೇವಾ ಶುಲ್ಕ ಹೆಚ್ಚಳ; ಮಿತಿ ಮೀರಿದರೆ ಪ್ರತಿ ವಹಿವಾಟಿಗೆ 21 ರೂ.
author img

By

Published : Jan 1, 2022, 1:42 PM IST

ನವದೆಹಲಿ : ಹೊಸ ವರ್ಷದ ಮೊದಲ ದಿನದಿಂದಲೇ ಬ್ಯಾಂಕ್ ಗ್ರಾಹಕರು ಎಟಿಎಂ ಮಾಸಿಕ ಉಚಿತ ವಹಿವಾಟುಗಳ ಮಿತಿ ಮೀರಿದ್ರೆ ಪ್ರಸ್ತುತವಿರೋದಕ್ಕಿಂತ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಕೆಲ ಬ್ಯಾಂಕ್‌ಗಳು ಕೂಡ ಗ್ರಾಹಕರಿಗೆ ಮಾಹಿತಿ ರವಾನಿಸಿವೆ.

ಮಾಸಿಕ ಉಚಿತ ವಹಿವಾಟು ಮೀರಿದ್ರೆ ಪ್ರಸ್ತುತ ಇರುವುದಕ್ಕಿಂತ 1 ರೂಪಾಯಿಯ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಯಾಕೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2022ರ ಜನವರಿ 1ರಿಂದ ನಗದು ಹಾಗೂ ನಗದುರಹಿತ ಎಟಿಎಂ ವ್ಯವಹಾರಗಳು ನಿಗದಿತ ಮಾಸಿಕ ಮಿತಿ ಮೀರಿದ್ರೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡಿದೆ.

ಪ್ರಸ್ತುತ ಎಟಿಎಂಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚುವರಿ ವ್ಯವಹಾರ ನಡೆಸಿದ್ರೆ ಗ್ರಾಹಕ ಪ್ರತಿ ವ್ಯವಹಾರಕ್ಕೆ 20ರೂ. ಶುಲ್ಕ ಪಾವತಿಸಬೇಕಿದೆ. ಆದ್ರೆ, ಇಂದಿನಿಂದ ಹೆಚ್ಚುವರಿ ವ್ಯವಹಾರದ ಮೇಲಿನ ಶುಲ್ಕವನ್ನು ಒಂದು ರೂಪಾಯಿ ಹೆಚ್ಚಿಸಿ 21 ರೂಪಾಯಿ ಮಾಡಲಾಗಿದೆ. ಈ ಬಗ್ಗೆ ಆರ್‌ಬಿಐ 2021ರ ಜೂನ್ 10ರಂದು ಅಧಿಸೂಚನೆ ಹೊರಡಿಸಿದೆ. ಬ್ಯಾಂಕುಗಳಿಗೆ ಅನುಮತಿ ನೀಡಿರುವ ಹಿನ್ನೆಯಲ್ಲಿ ಮಿತಿ ಮೀರಿದರೆ ಇಂದಿನಿಂದ ಹೆಚ್ಚಿನ ಶುಲ್ಕ ಭರಿಸಬೇಕಾಗುತ್ತದೆ.

ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ವಿತ್‌ ಡ್ರಾಗಳನ್ನು ಉಚಿತವಾಗಿ ಪಡೆಯಬಹುದು. ಇದರಲ್ಲಿ ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳು ಸೇರಿವೆ. ಇತರ ಬ್ಯಾಂಕ್ ಎಟಿಎಂಗಳಿಂದ ಮೆಟ್ರೋ ನಗರಗಳಲ್ಲಿ ಮೂರು ವಹಿವಾಟುಗಳು ಉಚಿತವಾಗಿದ್ದರೆ ಮೆಟ್ರೋ ಅಲ್ಲದ ನಗರಗಳು ಹಾಗೂ ಪಟ್ಟಣಗಳಲ್ಲಿ ಐದು ವಹಿವಾಟುಗಳು ಉಚಿತವಾಗಿವೆ.

ಎಟಿಎಂ ವಹಿವಾಟುಗಳಿಗೆ ಇಂಟರ್‌ಚೇಂಜ್ ಶುಲ್ಕವನ್ನು 2012ರ ಆಗಸ್ಟ್‌ನಲ್ಲಿ ಕೊನೆಯ ಬಾರಿಗೆ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಗ್ರಾಹಕರು ಪಾವತಿಸಬೇಕಾದ ಶುಲ್ಕಗಳನ್ನು ಕೊನೆಯದಾಗಿ 2014ರ ಆಗಸ್ಟ್‌ನಲ್ಲಿ ಪರಿಷ್ಕರಿಸಲಾಗಿತ್ತು.

ಇದನ್ನೂ ಓದಿ: ಹೊಸ ವರ್ಷದ ಸಿಹಿ ಸುದ್ದಿ.. ವಾಣಿಜ್ಯ ಬಳಕೆ ಎಲ್​​ಪಿಜಿ ಸಿಲಿಂಡರ್ ಬೆಲೆ 100 ರೂ. ಇಳಿಕೆ..!

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.