ನವದೆಹಲಿ: ಟ್ರಕ್ ತಯಾರಕ ಅಶೋಕ್ ಲೇಲ್ಯಾಂಡ್ ಶುಕ್ರವಾರ ತನ್ನ ಇತ್ತೀಚಿನ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಎವಿಟಿಆರ್ 4120 14-ವೀಲ್ ಡ್ರೈವ್ 4-ಆಕ್ಸಲ್ ಟ್ರಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಟ್ರಕ್ 40.5 ಟನ್ ಸರಕು ಸಾಗಿಸಬಲ್ಲದು. ಈ ಕಂಪನಿ ಉತ್ಪಾದಿಸುವ ಸ್ಟ್ಯಾಂಡರ್ಡ್ ಟ್ರಕ್‌ಗಳಿಗೆ ಹೋಲಿಸಿದರೆ ಇದು 5 ಟನ್ ಹೆಚ್ಚು ಸರಕು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಎರಡು ದಿನಗಳ ಕರಡಿ ಕುಣಿತಕ್ಕೆ ವಿರಾಮ: ದಲಾಲ್ ಸ್ಟ್ರೀಟ್‌ನಲ್ಲಿ ಮತ್ತೆ ಗೂಳಿ ಆರ್ಭಟ
ಅಶೋಕ್ ಲೇಲ್ಯಾಂಡ್ ಎಂಡಿ ವಿಪಿನ್ ಸೋಂಧಿ ಮಾತನಾಡಿ, ನಾವು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತೇವೆ. ಅವರಿಗೆ ಉತ್ತಮ ಉತ್ಪನ್ನ ಮತ್ತು ಹೆಚ್ಚಿನ ಪ್ರಯೋಜನಗಳನ್ನು ನೀಡುವುದು ನಮ್ಮ ಗುರಿ. ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಎವಿಟಿಆರ್ 4120 ಟ್ರಕ್. ಈ ಟ್ರಕ್‌ನಲ್ಲಿ 12.5 ಟನ್ ಡ್ಯುಯಲ್ ಟೈರ್ ಲಿಫ್ಟ್ ಆಕ್ಸಲ್ ಅಳವಡಿಸಲಾಗಿದೆ ಎಂದರು.
ಕಂಪನಿಯು ಈ ಬಗ್ಗೆ ಪೇಟೆಂಟ್ ಸಹ ಹೊಂದಿದೆ. ಇದು ಟೈರ್‌ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. 200 ಎಚ್‌ಪಿ ಎಂಜಿನ್ ಇದರಲ್ಲಿದೆ. ಈಗ ಈ ಸೃಜನಶೀಲ ಟ್ರಕ್ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ಟ್ರಕ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ ಎಂದು ಕಂಪನಿಯ ಸಿಇಒ ಅಂಜು ಕತುರಿಯಾ ಹೇಳಿದರು.