ETV Bharat / business

ಲಾಭದ ಹಾದಿಗೆ ಮರಳಿದ ಆ್ಯಪಲ್: ಕಂಪನಿಯ ನಿವ್ವಳ ಆದಾಯದಲ್ಲಿ ಹೆಚ್ಚಳ - ಆ್ಯಪಲ್​ ಕಂಪಿನಯ ನಿವ್ವಳ ಆದಾಯ

ಜಗತ್ತಿನ ಪ್ರಮುಖ ಮೊಬೈಲ್‌ ತಯಾರಿಕಾ ಕಂಪನಿಗಳಲ್ಲೊಂದಾದ ಆ್ಯಪಲ್​ ಕಂಪನಿಗೆ ನಿರೀಕ್ಷೆಯಷ್ಟು ಲಾಭ ಹರಿದು ಬಂದಿರಲಿಲ್ಲ. ಇದೀಗ ಹಿಂದಿನ ವರ್ಷದ ತ್ರೈಮಾಸಿಕ ಅಂಕಿಅಂಶಗಳನ್ನು ಪ್ರಕಟಿಸಿದ್ದು, ಕಂಪನಿ ಪುನಃ ಲಾಭದ ಹಾದಿಯತ್ತ ಮರಳಿದೆ.

Apple
ಆ್ಯಪಲ್​ ಕಂಪನಿ
author img

By

Published : Jan 29, 2020, 11:35 AM IST

ಸ್ಯಾನ್ ಫ್ರಾನ್ಸಿಸ್ಕೊ(ಅಮೆರಿಕ) : ಜಗತ್ತಿನ ಪ್ರಮುಖ ಮೊಬೈಲ್ ತಯಾರಿಕಾ ಕಂಪನಿ ಆ್ಯಪಲ್​ 2019ರ ಕೊನೆಯ ಮೂರು ತಿಂಗಳುಗಳಲ್ಲಿ ದಾಖಲಿಸಿದ ಫಲಿತಾಂಶವನ್ನು ಪ್ರಕಟಿಸಿದೆ. ಕಂಪನಿಯು ಡಿಜಿಟಲ್ ಸೇವೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಂತೆಯೇ ಐಫೋನ್‌ಗಳ ಮಾರಾಟದಲ್ಲಿ ಹಾಗೂ ಲಾಭ ಗಳಿಕೆಯಲ್ಲಿ ದಾಪುಗಾಲಿಟ್ಟಿದೆ.

ಕಳೆದ ತ್ರೈಮಾಸಿಕದಲ್ಲಿ ಆ್ಯಪಲ್​ ಕಂಪನಿಯ ನಿವ್ವಳ ಆದಾಯ ಕಂಪನಿಗೆ ಹೊಸ ದಾಖಲೆಯನ್ನು ತಂದು ಕೊಟ್ಟಿದೆ ಎಂದು ಐಫೋನ್​​ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಲುಕಾ ಮಾಸ್ಟ್ರಿ ಹೇಳಿದ್ದಾರೆ.

ಕುಸಿದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಮತ್ತು ಹೆಚ್ಚುತ್ತಿರುವ ಸ್ಪರ್ಧೆಯ ಮಧ್ಯೆ ಆ್ಯಪಲ್ ತನ್ನ ಆದಾಯದ ಸ್ಥಿತಿಗತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು ಮ್ಯೂಸಿಕ್​​, ಸ್ಟ್ರೀಮಿಂಗ್ ಟೆಲಿವಿಷನ್ ಮತ್ತು ಇತರ ಡಿಜಿಟಲ್ ವಿಷಯಗಳಂತಹ ಸೇವೆಗಳನ್ನು ನೀಡುವತ್ತ ಗಮನ ಕೇಂದ್ರೀಕರಿಸಿದೆ. ಒಂದು ವರ್ಷದ ಹಿಂದೆ ಸ್ಮಾರ್ಟ್‌ಫೋನ್​​ ಮಂದಗತಿಯ ಮಾರಾಟದಿಂದ ಕಳವಳ ವ್ಯಕ್ತಪಡಿಸಿದ ಆ್ಯಪಲ್​​ ಕಂಪನಿಯು, ಇದೀಗ ಗಮನಾರ್ಹ ಬೆಳವಣಿಗೆ ಕಂಡಿದೆ.

ಆ್ಯಪಲ್ ಷೇರುಗಳು ಕಳೆದ ವರ್ಷದಿಂದ ದ್ವಿಗುಣಗೊಂಡಿದ್ದು, ಅದರ ಮೌಲ್ಯ 1.3 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದೆ. ಈ ಮೌಲ್ಯ ಹೆಚ್ಚಲು ಮುಖ್ಯವಾಗಿ ಕಾರಣವಾಗಿದ್ದು ಕಂಪನಿಯ ಸ್ಟ್ರೀಮಿಂಗ್ ಟೆಲಿವಿಷನ್ ಕೊಡುಗೆ, ಡಿಜಿಟಲ್ ಪಾವತಿ ಮತ್ತು ಧರಿಸಬಹುದಾದ ತಂತ್ರಜ್ಞಾನಗಳಾದ ಐ-ಪಾಡ್ಸ್​​ ಮತ್ತು ನೂತನವಾಗಿ ನವೀಕರಿಸಿದ ಆಪಲ್ ವಾಚ್‌.

ಆ್ಯಪಲ್​​ ಕಂಪನಿಯ ಸೇವೆಗಳ ಆದಾಯ ಕಳೆದ ವರ್ಷ ಶೇ 17 ರಷ್ಟು ಏರಿಕೆಯಾಗಿ 12.7 ಶತಕೋಟಿ ಡಾಲರ್‌ಗೆ ತಲುಪಿತ್ತು. ಹಿಂದಿನ ವರ್ಷದ ಈ ಪ್ರಗತಿಗೆ ಆ್ಯಪಲ್ ಟಿವಿ ಮತ್ತು ಇತರ ಸೇವೆಗಳು ಕಾರಣವಾಗಿದ್ದವು.

ಐಫೋನ್​​ ಕಂಪನಿಯ ಆ್ಯಪಲ್ ಟಿವಿ ಮತ್ತು ಆನ್-ಡಿಮಾಂಡ್ ಸ್ಟ್ರೀಮಿಂಗ್ ಸೇವೆ 100 ಕ್ಕೂ ಅಧಿಕ ದೇಶಗಳಲ್ಲಿ ತಿಂಗಳಿಗೆ 4.99 ಯುಎಸ್​​ ಡಾಲರ್​​ ದರದಲ್ಲಿ ಪ್ರಾರಂಭಿಸಲ್ಪಟ್ಟಿದ್ದು, ನೆಟ್‌ಫ್ಲಿಕ್ಸ್‌ನಂತಹ ಪ್ರತಿಸ್ಪರ್ಧಿಗಳು ನೀಡುವ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಇದು ಗ್ರಾಹಕರಿಗೆ ದೊರೆಯಲಾರಂಭಿಸಿತ್ತು.

ಟಿವಿ ಮತ್ತು ಆನ್​-ಡಿಮಾಂಡ್​​ ಸ್ಟ್ರೀಮಿಂಗ್​​ ಸೇವೆಗಿಂತಲು ಹೋಮ್‌ಪಾಡ್ ಸ್ಪೀಕರ್, ಐಪಾಡ್​,​ ಆಪಲ್ ವಾಚ್ ಮತ್ತು ಇತರ ವಸ್ತುಗಳಿಂದಾಗಿ ಶೇ 37 ರಷ್ಟು ಹೆಚ್ಚಳಗೊಂಡು ಪ್ರಸ್ತುತ 10 ಬಿಲಿಯನ್ ಡಾಲರ್‌ಗಳಿಗೆ ಆ್ಯಪಲ್​ ಕಂಪನಿ ತಲುಪಿದೆ.

ಕಂಪನಿಯ ಒಟ್ಟಾರೆ ಆದಾಯವು ಚೀನಾದಲ್ಲಿ ಹೆಚ್ಚಾಗಿದ್ದು, ಕಂಪನಿಯ ಮುಖ್ಯ ಮಾರುಕಟ್ಟೆಗಳಲ್ಲಿ ಚೀನಾ ಸಹ ಒಂದಾಗಿದೆ. ಇನ್ನು ಪ್ರಸಕ್ತ ತ್ರೈಮಾಸಿಕದಲ್ಲಿ ಆ್ಯಪಲ್ ಕಂಪನಿಯು 63.0 ಬಿಲಿಯನ್ ಯುಎಸ್​​ ಡಾಲರ್​​ ಮತ್ತು 67.0 ಬಿಲಿಯನ್ ಯುಎಸ್​​ ಡಾಲರ್​​ನಷ್ಟು ಆದಾಯವನ್ನು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.