ನವದೆಹಲಿ : ಸತತ ಎರಡು ದಿನಗಳ ತೀವ್ರ ಏರಿಕೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು (ಶನಿವಾರ) ಯಥಾಸ್ಥಿತಿ ಕಾಯ್ದುಕೊಂಡಿದೆ. ಜಾಗತಿಕ ಕಚ್ಚಾ ಬೆಲೆಗಳು ಶೇ .1ರಷ್ಟು ಏರಿಕೆಯಾಗಿದೆ. ಈ ವರ್ಷದ ಗರಿಷ್ಠ ಮಟ್ಟವಾಗಿ ಪ್ರತಿ ಬ್ಯಾರೆಲ್‌ಗೆ 60 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ.
ಶುಕ್ರವಾರದಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ 30 ಪೈಸೆ ಹೆಚ್ಚಳವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 86.95 ರೂ. ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 77.13 ರೂ.ಯಲ್ಲಿದ್ದವು. ಇಂದು ಇದೇ ದರದಲ್ಲಿ ಮಾರಾಟ ಆಗುತ್ತಿವೆ.
ದೆಹಲಿ ಹೊರತಾಗಿ ಇತರ ಮಹಾನಗರಗಳಲ್ಲಿಯೂ ಇಂಧನ ದರ ಜಿಗಿದಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 93.49 ರೂ. ಇದ್ದರೆ, ಚೆನ್ನೈನಲ್ಲಿ 30 ಪೈಸೆ ಹೆಚ್ಚಳದ ನಂತರ 89.39 ರೂ.ಗೆ ತಲುಪಿದೆ.
ಕೋಲ್ಕತಾ ಮತ್ತು ಹೈದರಾಬಾದ್‌ನಲ್ಲಿ ಕ್ರಮವಾಗಿ ಲೀಟರ್‌ಗೆ 88.30 ಮತ್ತು 90.42 ರೂ.ಯಲ್ಲಿ ಲಭ್ಯವಾಗುತ್ತಿದೆ. ಡೀಸೆಲ್ ಬೆಲೆ ಮುಂಬೈಯಲ್ಲಿ ಪ್ರತಿ ಲೀಟರ್‌ಗೆ 83.99 ರೂ.ಗೆ ಏರಿದ್ದು, ಚೆನ್ನೈನಲ್ಲಿ ಲೀಟರ್‌ಗೆ 82.33 ರೂ; ಕೋಲ್ಕತಾದಲ್ಲಿ 80.71 ರೂ. ಮತ್ತು ಹೈದರಾಬಾದ್‌ನಲ್ಲಿ 84.14 ರೂ.ಯಷ್ಟಿದೆ.
ಇದನ್ನೂ ಓದಿ: ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರದಾದ್ಯಂತ 'ಚಕ್ಕಾ ಜಾಮ್': ಭಾರೀ ಪೊಲೀಸ್ ಭದ್ರತೆ, ಹೆದ್ದಾರಿ ಬಂದ್ ಮಾಡಿ ರೈತರ ಪ್ರೊಟೆಸ್ಟ್
ಸರ್ಕಾರಿ ತೈಲ ಮಾರಾಟ ಕಂಪನಿಗಳು (ಒಎಂಸಿಗಳು) ಅಂತಾರಾಷ್ಟ್ರೀಯ ತೈಲ ಬೆಲೆ ಮತ್ತು ವಿದೇಶಿ ವಿನಿಮಯ ದರಗಳ ಆಧಾರದ ಮೇಲೆ ನಿತ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಿಸುತ್ತಿವೆ.