ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನೆಲಸಿರುವ ಭಾರತೀಯ ಮೂಲದ ಮೂವರು ಚಾಲಕರಿಗೆ ಅಬುಧಾಬಿಯಲ್ಲಿ ಮೆಗಾ ಮಾಸಿಕ ಜಾಕ್‌ಪಾಟ್ ಡ್ರಾ ಗೆದ್ದಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಕಣ್ಣೂರು ಜಿಲ್ಲೆಯವರಾದ ಜಿಜೇಶ್ ಕೊರೊಥನ್ ಅವರು ರಾಜಧಾನಿಯಲ್ಲಿ ನಡೆದ ಬಿಗ್ ಟಿಕೆಟ್ ರಾಫೆಲ್ ಡ್ರಾದಲ್ಲಿ 20 ಮಿಲಿಯನ್ ದಿರ್ಹಾಮ್ (5 ಮಿಲಿಯನ್ ಡಾಲರ್/ 38 ಕೋಟಿ ರೂ.) ಗೆದ್ದಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
15 ವರ್ಷಗಳಿಂದ ರಾಸ್ ಅಲ್ ಖೈಮಾದಲ್ಲಿ ವಾಸಿಸುತ್ತಿರುವ ಕೊರೊಥಾನ್, ಎಮಿರೇಟ್‌ನ ಇತರ ತನ್ನ ಇಬ್ಬರು ಭಾರತೀಯರೊಂದಿಗೆ ಗೆಲುವನ್ನು ಹಂಚಿಕೊಂಡಿದ್ದಾರೆ.
ಹಣದ ಬಹುಪಾಲು ಭಾಗವನ್ನು ತನ್ನ ಏಳು ವರ್ಷದ ಮಗಳ ಶಿಕ್ಷಣಕ್ಕೆ ಮತ್ತು ತಾನು ಹಾಗೂ ಸ್ನೇಹಿತರು ಸೇರಿ ಆರಂಭಿಸಿರುವ ಐಷಾರಾಮಿ ಕಾರು ಬಾಡಿಗೆಗಳ ಉದ್ಯಮಕ್ಕೆ ತೊಡಗಿಸುವುದಾಗಿ ಗಲ್ಫ್ ನ್ಯೂಸ್‌ಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದು ಕಠಿಣ ತಿಂಗಳು. ನನಗೆ ಯಾವುದೇ ಕೆಲಸವಿಲ್ಲ. ನಾನು ಹತಾಶ ಪರಿಸ್ಥಿತಿಯಲ್ಲಿದ್ದೆ. ನನ್ನ ಕುಟುಂಬವನ್ನು ವಾಪಸ್ ಕಳುಹಿಸಲಿದ್ದೇನೆ. ಈ ಗೆಲುವು ಪವಾಡವಲ್ಲದೆ ಮತ್ತೇನಲ್ಲ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.