ETV Bharat / business

ಬಾಯ್ಕಟ್ ಚೀನಾ ಬಾಯಿಮಾತಿಗೆ ಸೀಮಿತವಾ? ಭಾರತಕ್ಕೆ ಬಂದ 4 ಸ್ಮಾರ್ಟ್‌ಫೋನ್‌ಗಳಲ್ಲಿ 3 ಚೀನಾದವು! - ಟೆಕ್​ ನ್ಯೂಸ್

ಶಿಯೋಮಿ (ಶೇ 30ರಷ್ಟು), ಸ್ಯಾಮ್‌ಸಂಗ್ (ಶೇ 24 ರಷ್ಟು) ಮತ್ತು ವಿವೋ (ಶೇ 17 ರಷ್ಟು) ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ನೋಕಿಯಾ ಸ್ಮಾರ್ಟ್‌ಫೋನ್ ಪಾಲು ಕುಸಿಯುತ್ತಿದೆ. ಆ್ಯಪಲ್ ಅಗ್ರ 10 ಸ್ಮಾರ್ಟ್‌ಫೋನ್ ಟಾಪ್​​ ಬ್ರ್ಯಾಂಡ್​ಗಳಲ್ಲಿ ಎಂಟನೇ ಸ್ಥಾನದಲ್ಲಿದೆ. ಐಫೋನ್ ಎಸ್ಇ (2020) ಉತ್ತಮ ಬೇಡಿಕೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

smartphone
ಸ್ಮಾರ್ಟ್​​ಫೋನ್
author img

By

Published : Jul 30, 2020, 5:34 PM IST

ನವದೆಹಲಿ: ಸರಬರಾಜು ಸರಪಳಿ ಮತ್ತು ಲಾಕ್‌ಡೌನ್​ನಿಂದ ಉಂಟಾದ ಸಮಸ್ಯೆಗಳ ಹೊರತಾಗಿಯೂ ದೇಶಿಯ ಉತ್ಪಾದನೆ ಮೊಟಕುಗೊಂಡಿದ್ದರೂ ಜೂನ್ ತ್ರೈಮಾಸಿಕದಲ್ಲಿ ಭಾರತಕ್ಕೆ ರವಾನೆಯಾದ ಪ್ರತಿ ನಾಲ್ಕು ಸ್ಮಾರ್ಟ್‌ಫೋನ್‌ಗಳಲ್ಲಿ ಮೂರು ಚೀನಾ ಮೂಲದ್ದವು ಎಂದು ಹೊಸ ವರದಿಯೊಂದು ತಿಳಿಸಿದೆ.

ಸಿಎಂಆರ್‌ನ 'ಇಂಡಿಯಾ ಮೊಬೈಲ್ ಹ್ಯಾಂಡ್‌ಸೆಟ್ ಮಾರ್ಕೆಟ್ ರಿವ್ಯೂ' ಪ್ರಕಾರ, ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಎದುರಿಸುತ್ತಿರುವ ಸವಾಲುಗಳ ತಕ್ಷಣದ ಫಲಾನುಭವಿ ಸ್ಯಾಮ್‌ಸಂಗ್ ಆಗಿದೆ. ಸ್ಯಾಮ್‌ಸಂಗ್ ತನ್ನ ಕುಸಿಯುತ್ತಿರುವ ಮಾರುಕಟ್ಟೆ ಪಾಲಿನ ಮಧ್ಯೆಯೂ 2ನೇ ತ್ರೈಮಾಸಿಕದಲ್ಲಿ ಶೇ 24ರಷ್ಟು ಸುಧಾರಣೆ ಕಂಡಿದೆ.

ಮುಂಬರುವ ತ್ರೈಮಾಸಿಕಗಳಲ್ಲಿ ಸ್ಯಾಮ್‌ಸಂಗ್ ತನ್ನ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದೆಯೇ ಎಂಬುದನ್ನು ತನ್ನನ್ನು ತಾನು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕಿದೆ. ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಪ್ರಾಬಲ್ಯದ ಬೇಡಿಕೆ, ಸ್ಪರ್ಧೆ ಮತ್ತು ಸವಾಲುಗಳನ್ನು ಎದುರಿಸಬೇಕಿದೆ ಎಂದು ಸಿಎಂಆರ್‌ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್‌ನ ವ್ಯವಸ್ಥಾಪಕ ಅಮಿತ್ ಶರ್ಮಾ ಹೇಳಿದ್ದಾರೆ.

ಮೂರನೇ ತ್ರೈಮಾಸಿಕವು ಸ್ಯಾಮ್‌ಸಂಗ್‌ ತನ್ನ ಬೇಡಿಕೆಯ ವೇಗ ಪಡೆದುಕೊಳ್ಳುತ್ತಿದೆಯೇ ಎಂಬುದನ್ನು ನಿರೂಪಿಸುವ ನಿಜವಾದ ಅಗ್ನಿ ಪರೀಕ್ಷೆಯಾಗಿದೆ. 2ನೇ ತ್ರೈಮಾಸಿಕ ಅನುಸರಿಸಿ, ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಸಂಚಿತ ಮಾರುಕಟ್ಟೆ ಪಾಲು ಶೇ 73ಕ್ಕೆ ಇಳಿದಿದೆ. ಇದು 2019ರ 3ನೇ ತ್ರೈಮಾಸಿಕ ಕೊನೆಯಲ್ಲಿ ಕಂಡು ಬಂದ ಮಟ್ಟಕ್ಕೆ ಹೋಲುತ್ತದೆ.

ಜೂನ್ ತ್ರೈಮಾಸಿಕ ವೇಳೆ ಭಾರತದಲ್ಲಿ ಲಾಕ್​ಡೌನ್​ನಿಂದಾಗಿ ಒಟ್ಟು ಸ್ಮಾರ್ಟ್‌ಫೋನ್ ಸಾಗಣೆಯು ಶೇ 41ರಷ್ಟು (ತ್ರೈಮಾಸಿಕದಿಂದ ತ್ರೈಮಾಸಿಕ) ಮತ್ತು ಶೇ 48ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿತ ಕಂಡಿದೆ.

ಶಿಯೋಮಿ (ಶೇ 30ರಷ್ಟು), ಸ್ಯಾಮ್‌ಸಂಗ್ (ಶೇ 24ರಷ್ಟು) ಮತ್ತು ವಿವೋ (ಶೇ 17ರಷ್ಟು) ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. ನೋಕಿಯಾ ಸ್ಮಾರ್ಟ್‌ಫೋನ್ ಪಾಲು ಕುಸಿಯುತ್ತಿದೆ. ಆ್ಯಪಲ್ ಅಗ್ರ 10 ಸ್ಮಾರ್ಟ್‌ಫೋನ್ ಬ್ರ್ಯಾಂಡ್​ಗಳಲ್ಲಿ ಎಂಟನೇ ಸ್ಥಾನದಲ್ಲಿದೆ. ಐಫೋನ್ ಎಸ್ಇ (2020)ಗೆ ಉತ್ತಮ ಬೇಡಿಕೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.