ನವದೆಹಲಿ: ಯೆಸ್ ಬ್ಯಾಂಕ್ ವೈಫಲ್ಯ ಬಿಜೆಪಿ ಸರ್ಕಾರದ ಅಧೀನದಲ್ಲಿರುವ ಹಣಕಾಸು ಸಂಸ್ಥೆಗಳ ದುರುಪಯೋಗದಿಂದ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಕೇಂದ್ರ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಬ್ಯಾಂಕ್ ಹೊಣೆಗಾರಿಕೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಅನುಮೋದಿತ ಬೇಲ್ಔಟ್ ಯೋಜನೆಯಡಿ ಬಿಕ್ಕಟ್ಟಿನಿಂದ ಬಳಲುತ್ತಿರುವ ಬ್ಯಾಂಕ್ನಲ್ಲಿ ಶೇ. 49ರಷ್ಟು ಪಾಲು ತೆಗೆದುಕೊಳ್ಳಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,450 ಕೋಟಿ ರೂ. ಹೂಡಿಕೆ ಮಾಡುವುದು ವಿಲಕ್ಷಣವಾಗಿದೆ ಎಂದರು.
ಯೆಸ್ ಬ್ಯಾಂಕ್ ಸಾಲ ನೀಡುವ ವಿನೋದದಲ್ಲಿ ಪಾಲ್ಗೊಳ್ಳುವುದು ಬ್ಯಾಂಕಿಂಗ್ ಅಲ್ಲ. ಆದರೆ, ಹಡಗು ಸುಲಿಗೆಕೋರ ಎಂದು ವ್ಯಂಗ್ಯವಾಡಿದರು.
ಯೆಸ್ ಬ್ಯಾಂಕ್ ಸಾಲ ನೀಡಿಕೆಯಲ್ಲಿ ತೊಡಗಿದ್ದು, ಬಿಜೆಪಿ ಸರ್ಕಾರದ ಅಧೀನದಲ್ಲಿನ ಹಣಕಾಸು ಸಂಸ್ಥೆಗಳ ದುರುಪಯೋಗದಿಂದ ಖಾಸಗಿ ವಲಯದ ಸಾಲ ನೀಡುವ ಸಂಸ್ಥೆಗಳಲ್ಲಿ ವೈಫಲ್ಯ ಉಂಟಾಗಿದೆ. ಈ ಬಿಕ್ಕಟ್ಟಿನ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಂಪೂರ್ಣ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಯೆಸ್ ಬ್ಯಾಂಕ್ ವೈಪಲ್ಯಕ್ಕೆ ಯುಪಿಎ ಸರ್ಕಾರವನ್ನು ದೂರಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಚಿದಂಬರಂ, ಕೆಲವೊಮ್ಮೆ ನಾನು ಅವರ ಮಾತನ್ನು ಕೇಳಿದಾಗ ಯುಪಿಎ ಇನ್ನೂ ಅಧಿಕಾರದಲ್ಲಿದೆ ಮತ್ತು ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದಾರೆ ಎಂದು ಭಾವಿಸುತ್ತೇನೆ ಎಂದು ಕುಟುಕಿದರು.