ETV Bharat / business

ಕೊರೊನಾ ಬಿಕ್ಕಟ್ಟು ಆರ್ಥಿಕ ತಜ್ಞರಿಗೆ ಕಠಿಣ ಸವಾಲೊಡ್ಡಲಿದೆ: IMF ಮುಖ್ಯಸ್ಥ

ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಅಭಿವೃದ್ಧಿ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದ ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ, ವೈರಸ್​ಗೂ ಮೊದಲು ವಿಶ್ವ ಆರ್ಥಿಕತೆಯು ನಿಧಾನವಾಗಿ ಚೇತರಿಕೆ ಆಗುತ್ತಿತ್ತು. 2020ರಲ್ಲಿ ತೀವ್ರ ಹಿಂಜರಿತದಿಂದ ಬಳಲುತ್ತದೆ. ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜಾಗತಿಕ ಸರಪಳಿಗಳಿಗೆ ತಡೆಯೊಡ್ಡಲಿದೆ ಎಂದರು.

International Monetary Fund
ಅಂತಾರಾಷ್ಟ್ರೀಯ ಹಣಕಾಸು ನಿಧಿ
author img

By

Published : Apr 18, 2020, 7:48 PM IST

ವಾಷಿಂಗ್ಟನ್​: ಕೊರೊನಾ ವೈರಸ್ ಹಬ್ಬುವ ಮುನ್ನ ಜಾಗತಿಕ ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಈಗ 2020ರಲ್ಲಿ ಕೋವಿಡ್​ 19ರಿಂದ ಈ ಹಿಂದಿನದಕ್ಕಿಂತ ತೀವ್ರ ಹಿಂಜರಿತ ಅನುಭವಿಸಲಿದೆ ಎಂದು ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ ಎಚ್ಚರಿಸಿದ್ದಾರೆ.

ಪ್ರಸ್ತುತದಲ್ಲಿನ ಬಿಕ್ಕಟ್ಟು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅನೇಕ ಉದಯೋನ್ಮುಖ ಮಾರುಕಟ್ಟೆಗಳ ರಾಷ್ಟ್ರಗಳ ವಿತ್ತೀಯ ನೀತಿ- ನಿರೂಪಕರಿಗೆ ಬೆದರಿಕೆಯಂತಹ ಕಠಿಣ ಸವಾಲುಗಳನ್ನು ಒಡ್ಡಿದೆ. ಈ ವರ್ಷದ ಮೊದಲಾರ್ಧದಲ್ಲಿ ದೊಡ್ಡ ಜಾಗತಿಕ ಸಂಕುಚಿತ ಬೆಳವಣಿಗೆ ಅನಿವಾರ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಅಭಿವೃದ್ಧಿ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದರು.

ವ್ಯಾಪಾರ ವಿವಾದಗಳು, ನೀತಿಗಳ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಆರ್ಥಿಕತೆ ದುರ್ಬಲವಾಗಿತ್ತು. ಇದೇ ಸಂದರ್ಭದಲ್ಲಿಯೇ ಕೊರೊನಾ ವೈರಸ್ ವಿಶ್ವ ಆರ್ಥಿಕತೆ ಮೇಲೆ ಅಪ್ಪಳಿಸಿದೆ ಎಂದರು.

ವೈರಸ್​ಗೂ ಮೊದಲು ವಿಶ್ವ ಆರ್ಥಿಕತೆಯು ನಿಧಾನವಾಗಿ ಚೇತರಿಕೆ ಆಗುತ್ತಿತ್ತು. 2020ರಲ್ಲಿ ತೀವ್ರ ಹಿಂಜರಿತದಿಂದ ಬಳಲುತ್ತದೆ. ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜಾಗತಿಕ ಸರಪಳಿಗಳಿಗೆ ತಡೆಯೊಡ್ಡಲಿದೆ. ಕಡಿಮೆ ವಿದೇಶಿ ನೇರ ಹೂಡಿಕೆ, ಬಂಡವಾಳದ ಹೊರಹರಿವು, ಕಠಿಣ ಹಣಕಾಸು ಪರಿಸ್ಥಿತಿ ನಿರ್ಮಾಣ, ಪ್ರವಾಸೋದ್ಯಮ, ಆಹಾರ ಮತ್ತು ಔಷಧಗಳಂತಹ ಆಮದು ಕ್ಷೇತ್ರಗಳು ಬೆಲೆ ಒತ್ತಡಗಳಿಂದ ಬಳಲುತ್ತಿವೆ ಎಂದು ಜಾರ್ಜೀವಾ ಹೇಳಿದರು.

143 ದೇಶಗಳಲ್ಲಿ 368.5 ಮಿಲಿಯನ್ ಮಕ್ಕಳು ಪೌಷ್ಠಿಕಾಂಶಕ್ಕಾಗಿ ಶಾಲೆಯ ಊಟವನ್ನು ಅವಲಂಬಿಸಿದ್ದಾರೆ. ಈಗ ಹೆಚ್ಚುತ್ತಿರುವ ಅಪೌಷ್ಟಿಕತೆ ಶಮನಗೊಳಿಸಲು ಇತರ ಮೂಲಗಳತ್ತ ನಾವು ಗಮನಹರಿಸಬೇಕು ಎಂದು ಎಚ್ಚರಿಸಿದರು.

ಚೀನಾ, ದಕ್ಷಿಣ ಕೊರಿಯಾ ಮತ್ತು ಇಟಲಿ ಮೊದಲಿನಿಂದಲೂ ಉತ್ಪಾದನಾ ಚಟುವಟಿಕೆ ಮತ್ತು ಸೇವೆಗಳಲ್ಲಿ ದೊಡ್ಡ ಸಂಕೋಚ ಅನುಭವಿಸಿದ್ದವು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಆರಂಭದಲ್ಲಿ ದಾಖಲಾದ ನಷ್ಟವನ್ನು ಮೀರಿ ಅವು ಅನುಭವಿಸುತ್ತಿವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.