ನವದೆಹಲಿ: ರೈಲ್ವೆ ಪ್ರಯಾಣಿಕರು ಪ್ರಯಾಣದ ವೇಳೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಸೇವೆಯ ಆಹಾರ ಉತ್ಪನ್ನಗಳನ್ನು ಆರ್ಡರ್ ಮಾಡುವ ಮುನ್ನ ಒಮ್ಮೆ ಯೋಚನೆ ಮಾಡುವಂತಾಗಿದೆ.
ರಾಜಧಾನಿ, ಶತಾಬ್ದಿ, ತುರಂತೊ ಹಾಗೂ ಇತರೆ ಕೆಲ ರೈಲುಗಳಲ್ಲಿ ಊಟದ ದರ ಹೆಚ್ಚಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಇದು ಜಾರಿಗೆ ಬರಲಿದೆ.
ಪ್ರಸ್ತುತ ದರದ ಮೇಲೆ ಶೇ 6ರಿಂದ ಶೇ 9ರಷ್ಟು ಹೆಚ್ಚಳ ಆಗಲಿದೆ. ಇದರಿಂದಾಗಿ ಈ ರೈಲುಗಳ ಪ್ರಯಾಣ ದರದಲ್ಲೂ ಅಲ್ಪ ಏರಿಕೆಯಾಗಲಿದೆ. ಪ್ರಾದೇಶಿಕ ಸ್ವಾದದ ತಿಂಡಿಗಳನ್ನು ಪರಿಚಯಿಸಲು ನಿರ್ಧರಿಸಿದ್ದು, ಇವುಗಳ ಮೇಲೆ ಜಿಎಸ್ಟಿ ಹೊರೆ ಸಹ ಬೀಳಲಿದೆ ಎಂದು ರೈಲ್ವೆ ಮಂಡಳಿ ತನ್ನ ಆದೇಶದಲ್ಲಿ ತಿಳಿಸಿದೆ.