ETV Bharat / business

ಬೆಳವಣಿಗೆ ದರ ಶೇ.9.2ರಷ್ಟು ನಿರೀಕ್ಷೆ ಸೇರಿ ಕೇಂದ್ರ ಬಜೆಟ್‌-2022-23ರ ಹೈಲೈಟ್ಸ್‌... - Union Budget 2022

Union Budget 2022 Highlights : ಮುಂದಿನ 3 ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್‌ ರೈಲು ಸೇವೆ, ಎಲ್‌ಐಸಿ ಐಪಿಒ ಸೇರಿದಂತೆ ಇಂದಿನ ಬಜೆಟ್‌ನ ಹೈಲೈಟ್ಸ್‌..

Union Budget 2022 Highlights
ಬೆಳವಣಿಗೆ ದರ ಶೇ.9.20ರಷ್ಟು ನಿರೀಕ್ಷೆ ಸೇರಿ ಕೇಂದ್ರ ಬಜೆಟ್‌-2022 ಹೈಲೈಟ್ಸ್‌
author img

By

Published : Feb 1, 2022, 1:42 PM IST

ನವದೆಹಲಿ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ 4ನೇ ಬಜೆಟ್‌ ಅನ್ನು ಇಂದು ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಬಜೆಟ್‌ ಇದಾಗಿದೆ. ಜೊತೆಗೆ ಕೋವಿಡ್‌ನಿಂದಾಗಿ ಕಾಗದ ರಹಿತ ಎರಡನೇ ಬಜೆಟ್‌ ಇದಾಗಿದೆ.

2022-23ನೇ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣೆಗೆ ದರ ಶೇ.9.2ರಷ್ಟು ನಿರೀಕ್ಷೆ, ಕೋವಿಡ್‌ ಸವಾಲನ್ನು ಎದುರಿಸಿ ವ್ಯಾಕ್ಸಿನೇಷನ್‌ ಕಾರ್ಯಕ್ರಮ ಜಾರಿ ಸೇರಿದಂತೆ ಇಂದು ಸೀತಾರಾಮನ್‌ ಮಂಡಿಸಿದ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ.

  • 2022-23ನೇ ಸಾಲಿನ ಬಜೆಟ್‌ ಭಾಷಣದ ಹೈಲೈಟ್ಸ್‌
  • ಜೀವ ವಿಮಾ ನಿಗಮದ(LIC) ಐಪಿಒ ತರಲಾಗುವುದು
  • ಮುಂದಿನ 25 ವರ್ಷದ ಬಳಿಕ ಭಾರತದ ಸ್ವಾತಂತ್ರ್ಯಕ್ಕೆ 100ನೇ ವರ್ಷ ಪೂರೈಸುವ ಹಿನ್ನೆಲೆ ಆರ್ಥಿಕ ಗುರಿಯ ಅಡಿಪಾಯಕ್ಕೆ ನೀಲನಕ್ಷೆ
  • ಉತ್ಪಾದಕತೆ, ಹವಾಮಾನ ಕ್ರಮ, ಹಣಕಾಸು ಹೂಡಿಕೆ ಹಾಗೂ ಪಿಎಂ ಗತಿ ಶಕ್ತಿ ಯೋಜನೆ ಈ 4 ಸ್ತಂಭಗಳತ್ತ ಗಮನ
  • ಮುಂದಿನ 3 ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್‌ ರೈಲು ಸೇವೆ ಮತ್ತು100 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳ ನಿರ್ಮಾಣ
  • ECLGS 2023ರ ಮಾರ್ಚ್‌ವರೆಗೆ ವಿಸ್ತರಣೆ. ಎಂಎಸ್‌ಎಂಇ ವಲಯ ಆರ್ಥಿಕ ನೆರವಿಗೆ 5 ಕೋಟಿ ರೂ., ಖಾತ್ರಿ ಹಣದ ಮಿತಿ 50 ಸಾವಿರ ಕೋಟಿಗೆ ಹೆಚ್ಚಳ
  • 5 ನದಿಗಳ ಜೋಡಣೆಗೆ DPR : ಕಾವೇರಿ-ಪೆನ್ನಾರ್, ಕೃಷ್ಣ-ಪೆನ್ನಾರ್‌, ಗೋದಾವರಿ-ಪೆನ್ನಾರ್‌, ಪಾರ್‌-ನರ್ಮದಾ, ದಮನ್‌ಗಂಗಾ-ಪಿಂಜಾನ್‌ ನದಿಗಳ ಜೋಡಣೆ
  • 5ಜಿ ಸೇವೆಗಾಗಿ 2022ರಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜು
  • ದೇಶೀಯ ಉತ್ಪಾದನೆಗೆ ಒತ್ತು ನೀಡಿ 2030ರ ವೇಳೆಗೆ 280 ಗಿ.ವ್ಯಾ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನೆ. ಸೌರಶಕ್ತಿಯ ಪಿವಿ ದಕ್ಷತೆಯ ಮಾಡ್ಯೂಲ್‌ಗಳ ಉತ್ಪಾದನಾ ಘಟಕಗಳಿಗೆ ಹೆಚ್ಚುವರಿಯಾಗಿ 19,500 ಕೋಟಿ ರೂ. ಹಂಚಿಕೆ
  • ಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿ 2022-23ರಲ್ಲಿ ಡಿಜಿಟಲ್ ರೂಪಾಯಿ ಪರಿಚಯ
  • ಸಹಕಾರಿ ಸಂಘಗಳಿಗೆ ಶೇ.12 ರಿಂದ ಶೇ.7ಕ್ಕೆ ಆದಾಯ ತೆರಿಗೆ ರಿಯಾಯ್ತಿ
  • ವರ್ಚುವಲ್/ಡಿಜಿಟಲ್ ಆಸ್ತಿಗಳ ಆದಾಯಕ್ಕೆ ಶೇ.30ರಷ್ಟು ತೆರಿಗೆ
  • ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತ ಮಿತಿ ಶೇ.10 ರಿಂದ 14ಕ್ಕೆ ಏರಿಕೆ

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.