ಮುಂಬೈ: ಗುತ್ತಿಗೆ ಮಾರುಕಟ್ಟೆ ಸ್ಥಳಗಳಲ್ಲಿ ನುರಿತ ಭಾರತೀಯ ಕಾರ್ಮಿಕರನ್ನು ಆಕರ್ಷಿಸುವ ಹಾಗೂ ಅವರನ್ನು ಉಳಿಸಿಕೊಳ್ಳುವ ರಾಷ್ಟ್ರಗಳ ಸಾಲಿನಲ್ಲಿ ಬ್ರಿಟನ್, ಐರ್ಲೆಂಡ್, ನೆದರ್ಲ್ಯಾಂಡ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಮುಂದಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಗ್ಲೋಬಲ್ ಡಿಮ್ಯಾಂಡ್ ಫಾರ್ ಇಂಡಿಯನ್ ಐಟಿ ಕಾಂಟ್ರಾಕ್ಟರ್ಸ್ ಸಮೀಕ್ಷೆಯನ್ನು ಗುತ್ತಿಗೆದಾರರ ನೇಮಕಾತಿ ಪ್ಲಾಟ್‌ಫಾರ್ಮ್ ಟೆಕ್ಫೈಂಡರ್ ಮೂಲಕ ನಡೆಸಲಾಯಿತು. ಬಹುಪಾಲು ಕಂಪನಿಗಳು ಕ್ಲೌಡ್, ಸೈಬರ್ ಮತ್ತು ಡಿಜಿಟಲೀಕರಣ ಒಳಗೊಂಡಂತೆ ಕೋರ್ ಡೊಮೇನ್‌ಗಳಿಗೆ ನೇಮಕ ಮಾಡಲು ಆಸಕ್ತಿ ತೋರಿಸುತ್ತಿವೆ ಎಂದು ಹೇಳಿದೆ.
ಭಾರತದಲ್ಲಿನ ಗುತ್ತಿಗೆ ಉದ್ಯೋಗ ಮಾರುಕಟ್ಟೆಯ ಪ್ರವೃತ್ತಿ ಕಂಡುಕೊಳ್ಳಲು 2020ರ ಜನವರಿ ಮತ್ತು ಡಿಸೆಂಬರ್ ನಡುವೆ ದೇಶಾದ್ಯಂತ 52,000 ಗುತ್ತಿಗೆದಾರರ ಸಮೀಕ್ಷೆ ಆಧರಿಸಿ ನಡೆಸಲಾಯಿತು.
ರೆನಾಲ್ಟ್ ಕಾರುಗಳ ಬೆಲೆ ₹ 28,000 ಏರಿಕೆ: ಹೊಸ ವರ್ಷದಿಂದ ಯಾವ ಕಾರಿ ದರ ಎಷ್ಟು ಹೆಚ್ಚಾಗುತ್ತೆ?
ಸಾಂಕ್ರಾಮಿಕ ರೋಗದಿಂದಾಗಿ ಅನೇಕ ವ್ಯವಹಾರ ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ನೀಡಲು ಆನ್‌ಲೈನ್ ಮೊರೆ ಹೋಗುತ್ತಿವೆ. ಇದು ಸಾಫ್ಟ್‌ವೇರ್ ಇಂಜಿನಿಯರ್, ಹಿರಿಯ ಜಾವಾ ಡೆವಲಪರ್‌ಗಳು, ಸೈಬರ್ ಸೆಕ್ಯುರಿಟಿ ಇಂಜಿನಿಯರ್, ಡೇಟಾ ಸೈಂಟಿಸ್ಟ್, ವೆಬ್ ಡೆವಲಪರ್ ಮತ್ತು ಯುಐ / ಯುಎಕ್ಸ್ ವಿನ್ಯಾಸಕರ ಬೇಡಿಕೆ ಹೆಚ್ಚಿಸಿದೆ.
ಸಮೀಕ್ಷೆಯ ಪ್ರಕಾರ, ಇಂಗ್ಲೆಂಡ್, ಐರ್ಲೆಂಡ್, ನೆದರ್ಲ್ಯಾಂಡ್, ಅಮೆರಿಕ ಮತ್ತು ದಕ್ಷಿಣ ಆಫ್ರಿಕಾವು ಗುತ್ತಿಗೆ ಮಾರುಕಟ್ಟೆ ಸ್ಥಳದಲ್ಲಿ ಹೆಚ್ಚು ನುರಿತ ಭಾರತೀಯ ಉದ್ಯೋಗಿಗಳನ್ನು ಆಕರ್ಷಿಸುತ್ತಿವೆ ಮತ್ತು ಅವರನ್ನು ಉಳಿಸಿಕೊಳ್ಳುವ ಅಗ್ರ ಐದು ರಾಷ್ಟ್ರಗಳಾಗಿವೆ.
ಈ ವರ್ಷದ ಮಾರ್ಚ್‌ನಿಂದ ಫಿಲಿಪ್ಪಿನ್ಸ್, ನೆದರ್‌ಲ್ಯಾಂಡ್ಸ್, ನೈಜೀರಿಯಾ, ಕೆನಡಾ, ಕೀನ್ಯಾ ಮತ್ತು ಬ್ರೆಜಿಲ್‌ನಾದ್ಯಂತ ಐಟಿ ಗುತ್ತಿಗೆದಾರರಿಗೆ ಉದ್ಯೋಗದ ಪೋಸ್ಟಿಂಗ್‌ನಲ್ಲಿ ಶೇ 610ರಷ್ಟು ಪ್ರಗತಿ ಕಂಡುಬಂದಿದೆ. ಗುತ್ತಿಗೆ ಕಾರ್ಮಿಕರ ಶೇ 48ರಷ್ಟು ನೇಮಕದೊಂದಿಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಅಗ್ರಸ್ಥಾನದಲ್ಲಿದೆ. ಇದರ ನಂತರ ವಿಮೆ 18 ಪ್ರತಿಶತ, ಬ್ಯಾಂಕಿಂಗ್ ಮತ್ತು ಹಣಕಾಸು ಶೇ 16ರಷ್ಟು, ದೂರಸಂಪರ್ಕ ಶೇ 12ರಷ್ಟು ಮತ್ತು ಔಷಧ ಶೇ 6ರಷ್ಟುಇವೆ ಎಂದು ಸಮೀಕ್ಷೆ ತಿಳಿಸಿದೆ.