ETV Bharat / business

'ನನ್ನ ನಂಬಿ, ಆರ್ಥಿಕ ಬೆಳವಣಿಗೆಯನ್ನು ಮರಳಿ ತರುವುದು ಕಷ್ಟವಲ್ಲ': ಪ್ರಧಾನಿ ಮೋದಿ ವಿಶ್ವಾಸ - ನರೇಂದ್ರ ಮೋದಿ

ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ (ಸಿಐಐ) 125ನೇ ವಾರ್ಷಿಕ ಅಧಿವೇಶನದಲ್ಲಿ ವಿಡಿಯೋ ಸಂವಾದ ಮಾಡಿದ ಪ್ರಧಾನಿ ಮೋದಿ, ಕೊರೊನಾ ವೈರಸ್ ನಮ್ಮ ವೇಗಕ್ಕೆ ಅಡ್ಡಿಯಾಗಿರಬಹುದು. ಇಂದಿನ ವಾಸ್ತವವೆಂದರೆ ನಾವು ಲಾಕ್‌ಡೌನ್ ಹಂತವನ್ನು ಬಿಟ್ಟು ಈಗ ಅನ್ಲಾಕ್ 1.0 ಹಂತದಲ್ಲಿದ್ದೇವೆ. ನನ್ನನ್ನು ನಂಬಿರಿ, ಬೆಳವಣಿಗೆಯನ್ನು ಮರಳಿ ಪಡೆಯುವುದು ಅಷ್ಟು ಕಷ್ಟವಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PM Modi
ಪ್ರಧಾನಿ ಮೋದಿ
author img

By

Published : Jun 2, 2020, 5:01 PM IST

ನವದೆಹಲಿ: ಪ್ರಪಂಚದ ಉಳಿದ ಭಾಗಗಳು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವಾಗ ಭಾರತವು ಬೆಳವಣಿಗೆಯ ಹಾದಿಗೆ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಆರ್ಥಿಕತೆಯನ್ನು ಪುನರಾರಂಭ ಆಗುತ್ತಿದ್ದಂತೆ ಮತ್ತೆ ಬೆಳವಣಿಗೆ ಮರಳಿ ಪಡೆಯುವುದು ನಮ್ಮ ಧ್ಯೇಯವಾಗಿದೆ. ಭಾರತವು ತನ್ನ ಬೆಳವಣಿಗೆಯನ್ನು ಮರಳಿ ಪಡೆಯಲಿದೆ ಎಂದು ಪ್ರಧಾನಿ ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ (ಸಿಐಐ) 125ನೇ ವಾರ್ಷಿಕ ಅಧಿವೇಶನದ ಪ್ರಯುಕ್ತ ನಡೆದ ವಿಡಿಯೋ ಸಂವಾದದಲ್ಲಿ ಹೇಳಿದರು.

  • Highlights from the Hon'ble Prime Minister's Inaugural Address at CII Annual Session 2020. (1/5) pic.twitter.com/LMnORv77zE

    — NSitharamanOffice (@nsitharamanoffc) June 2, 2020 " class="align-text-top noRightClick twitterSection" data=" ">

ವಿಶ್ವ ವೇದಿಕೆಯಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಹಲವು ಕ್ಷೇತ್ರಗಳಿವೆ. ಆತ್ಮನಿರ್ಭರ ಭಾರತ ಎಂಬುದು ವಿದೇಶಿ ಸರಕುಗಳ ಮೇಲೆ ಭಾರತದ ಅವಲಂಬನೆ ಕಡಿಮೆ ಮಾಡುವುದು. ಆತ್ಮನಿರ್ಭರ ಭಾರತದಡಿ ನಾವು ಸಂಪೂರ್ಣವಾಗಿ ಸಂಯೋಜನೆಗೊಳ್ಳುತ್ತೇವೆ. ಜಾಗತಿಕ ಸಮುದಾಯ ಸಂಪೂರ್ಣ ಬೆಂಬಲ ನೀಡಲಿದೆ. ಯಾವಾಗಲೂ ನೆನಪಿಡಿ, ಭಾರತ ಇತರರ ಮೇಲೆ ಅವಲಂಬಿತರಾಗಲು ಬಯಸುವುದಿಲ್ಲ ಎಂದು ಹೇಳಿದರು.

  • Highlights from the Hon'ble Prime Minister's Inaugural Address at CII Annual Session 2020. (4/5) pic.twitter.com/rZF9kPDkjt

ಭಾರತದಿಂದ ವಿಶ್ವದ ನಿರೀಕ್ಷೆಗಳು ಹೆಚ್ಚಿವೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯಕೀಯ ಸರಬರಾಜು ಮೂಲಕ 150ಕ್ಕೂ ಹೆಚ್ಚು ದೇಶಗಳಿಗೆ ಭಾರತ ಸಹಾಯ ಮಾಡಿದೆ. ಜಗತ್ತು ನಂಬಿಕೆಯ ವಿಶ್ವಾಸಾರ್ಹ ಪಾಲುದಾರನನ್ನು ಹುಡುಕುತ್ತಿದೆ. ಭಾರತ ಅಂತಹ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಮೋದಿ ಹೇಳಿದರು.

ಭಾರತದ ಬಿಕ್ಕಟ್ಟು ನಿರ್ವಹಣೆ ಮತ್ತು ಸಾಮರ್ಥ್ಯದ ಮೇಲೆ ನನಗೆ ಸಂಪೂರ್ಣವಾಗಿ ವಿಶ್ವಾಸವಿದೆ. ಭಾರತದ ತಂತ್ರಜ್ಞಾನ, ಕೌಶಲ್ಯ, ನಾವಿನ್ಯತೆ, ಬುದ್ದಿವಂತಿಕೆ, ರೈತರ, ಎಂಎಸ್​ಎಂಇ, ಉದ್ಯಮಿದಾರರ ಹಾಗೂ ಕೈಗಾರಿಕೆ ನಾಯಕರ ಮೇಲೆ ನನಗೆ ನಂಬಿಕೆ ಇದೆ. ಅವರು ಭಾರತವನ್ನು ಮರಳಿ ಅಭಿವೃದ್ಧಿಯ ಬೆಳವಣಿಗೆಯತ್ತೆ ಕರೆದೊಯ್ಯುತ್ತಾರೆ ಎಂದು ಪ್ರಧಾನಿ ಹೇಳಿದರು.

ಭಾರತ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದೆ. ನಮ್ಮ ದೇಶವನ್ನು ಇತರರೊಂದಿಗೆ ಹೋಲಿಸಿದಾಗ ಲಾಕ್‌ಡೌನ್ ನಮಗೆ ಹೇಗೆ ಸಹಾಯ ಮಾಡಿದೆ ಎಂಬುದನ್ನು ನಾವು ಅರಿತುಕೊಳ್ಳಬಹುದು ಎಂದು ಪರೋಕ್ಷವಾಗಿ ಕಾಂಗ್ರೆಸ್​​ನ ಟೀಕೆಗೆ ಸ್ಪಷ್ಟನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.