ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ಕೇಬಲ್ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು 'ಕೇಬಲ್ ಹಾಗೂ ಪ್ರಸಾರ ಸೇವೆ'ಗಳ ಹೊಸ ನಿಯಂತ್ರಕ ಚೌಕಟ್ಟಿನಲ್ಲಿ ತಿದ್ದುಪಡಿಗಳನ್ನು ಘೋಷಿಸಿದೆ.
ನೂತನ ತಿದ್ದುಪಡಿಯಿಂದ ಕೇಬಲ್ ಟಿವಿ ಗ್ರಾಹಕರು ಕಡಿಮೆ ಬೆಲೆಯ ಚಂದಾದಾರಿಕೆಯಲ್ಲಿ ಹೆಚ್ಚಿನ ಚಾನೆಲ್ಗಳನ್ನು ಪಡೆಯಬಹುದಾಗಿದೆ. ಉಚಿತ ಚಾನೆಲ್ಗಳಿಗಾಗಿ ಗ್ರಾಹಕರು ತಿಂಗಳಿಗೆ 160 ರೂ. ಪಾವತಿಸಬೇಕು ಎಂದು 'ಟ್ರಾಯ್' ಸೂಚಿಸಿದೆ.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಟಿವಿ ಸಂಪಕರ್ಗಳು ಕಾರ್ಯನಿರ್ವಹಿಸುತ್ತಿರುವವ ಒಂದಕ್ಕಿಂತ ಅಧಿಕ ಟಿವಿಗಳಿರುವವರು 2ನೇ ಟಿವಿ ಸಂಪರ್ಕಕ್ಕಾಗಿ ಘೋಷಿತ ನೆಟ್ವರ್ಕ್ ಸಾಮರ್ಥ್ಯ ಶುಲ್ಕದಲ್ಲಿ (ಎನ್ಸಿಎಫ್) ಗರಿಷ್ಠ ಶೇ 40 ರಷ್ಟು ವಿಧಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹಲವು ನಿಬಂಧನೆಗಳನ್ನು ಪರಿಶೀಲಿಸಿದ ನಂತರ 'ಟ್ರಾಯ್', 200 ಚಾನೆಲ್ಗಳಿಗೆ ಗರಿಷ್ಠ ಎನ್ಸಿಎಫ್ ದರ (ತೆರಿಗೆ ಹೊರತುಪಡಿಸಿ) ₹ 130 ಎಂದು ನಿಗದಿಪಡಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಡ್ಡಾಯ ಎಂದು ಘೋಷಿಸಿದ ಚಾನೆಲ್ಗಳನ್ನು ಎನ್ಸಿಎಫ್ ಚಾನಲ್ಗಳಲ್ಲಿ ಸೇರಿಸಿಲ್ಲ ಎಂದಿದೆ.
ದೀರ್ಘಾವಧಿಯ ಚಂದಾದಾರರಿಗೆ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ರಿಯಾಯಿತಿಯನ್ನು ನೀಡಲು ವಿತರಣಾದಾರರಿಗೆ ಅನುಮತಿ ನೀಡಿದೆ. ಚಾನೆಲ್ನ ಭಾಗವಾಗಿರುವ ಪಾವತಿ ಚಾನೆಲ್ಗಳನ್ನು ಎ-ಲಾ-ಕಾರ್ಟೆ ಬೆಲೆಯ ಮೊತ್ತ ಯಾವುದೇ ಸಂದರ್ಭದಲ್ಲಿ ಒಂದೂವರೆ ಪಟ್ಟು ಮೀರಬಾರದು ಎಂದು ತಾಕೀತು ಮಾಡಿದೆ.
ನೂತನ ನಿಯಮಗಳು ಪ್ರಸಾರ ಮತ್ತು ಕೇಬಲ್ ಟಿವಿ ಸೇವೆಗಳಿಗಾಗಿ 2017ರ ಟ್ರಾಯ್ ಸುಂಕ ಆದೇಶದ ಬದಲಾವಣೆಯ ಒಂದು ಭಾಗವಾಗಿದೆ. ಮಾರ್ಚ್ 1ರಿಂದ ಅವು ಅನುಷ್ಠಾನಕ್ಕೆ ಬರಲಿವೆ.