ETV Bharat / business

ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ : ಆರ್‌ಬಿಐ ಗವರ್ನರ್

ಗ್ರಾಮೀಣ ಬೇಡಿಕೆಯ ಚೇತರಿಕೆಯು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ನಗರ ಪ್ರದೇಶದಲ್ಲಿ ಪ್ರಚೋದಕ (ಸ್ಪರ್ಸ್) ಚಟುವಟಿಕೆ ಮತ್ತು ಉದ್ಯೋಗಗಳ ನಿರ್ಬಂಧತೆ​ ತೆರವಿನ ಬೇಡಿಕೆಯ ವೇಗ ಪಡೆಯುತ್ತಿದೆ. ಮುಖ್ಯವಾಗಿ ಕೋವಿಡ್​-19ರಿಂದ ವಲಸೆ ಹೋದ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತಿದೆ..

RBI Governor
ಆರ್​ಬಿಐ ಗವರ್ನರ್
author img

By

Published : Dec 4, 2020, 3:39 PM IST

ನವದೆಹಲಿ : ಆರ್ಥಿಕತೆಯು ನಿರೀಕ್ಷೆಗಿಂತಲೂ ವೇಗವಾಗಿ ಚೇತರಿಸಿಕೊಂಡಿದೆ. ಡಿಸೆಂಬರ್ ಕೊನೆಯ ವಾರದಲ್ಲಿ ಬರಲಿರುವ ಆರ್ಥಿಕ ಸ್ಥಿರತೆ ವರದಿಯಲ್ಲಿ ಈ ಬಗ್ಗೆ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.

ಹಣಕಾಸು ನೀತಿ ಪರಾಮರ್ಶೆ (ಎಂಪಿಸಿ) ಸಭೆಯ ಬಳಿಕ ಹಣಕಾಸು ವ್ಯವಸ್ಥೆಯ ಮೇಲೆ ಕೋವಿಡ್​-19 ಪ್ರಭಾವದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರ್ಷದ ದ್ವಿತೀಯಾರ್ಧದಲ್ಲಿ ಹೊಸ ಚೇತರಿಕೆಯ ಚಿಹ್ನೆಗಳು ಗೋಚರಿಸುತ್ತಿವೆ.

ಬಹುತೇಕ ವಲಯಗಳು ಪ್ರಗತಿಯ ಸಂಕೇತಗಳಿಗೆ ಸೇರುತ್ತವೆ. ನಮ್ಮ ನಿರೀಕ್ಷೆಗಿಂತ ಕ್ಷೀಪ್ರವಾಗಿ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಡಿಸೆಂಬರ್ ಮಾಸದ ಅಂತ್ಯಕ್ಕೆ ಲಭ್ಯವಾಗುವ ದತ್ತಾಂಶಗಳೊಂದಿಗೆ ವಿವರಣೆ ನೀಡುತ್ತೇವೆ ಎಂದು ತಿಳಿಸಿದರು.

ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್​ಬಿಐ

2020-21ರ3ನೇ ತ್ರೈಮಾಸಿಕದ ತನಕ (ಅಕ್ಟೋಬರ್-ಡಿಸೆಂಬರ್) ಲಭ್ಯವಿರುವ ದತ್ತಾಂಶವು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದನ್ನು ಖಚಿತಪಡಿಸುತ್ತವೆ. ಬೆಳವಣಿಗೆಯು ದ್ವಿತೀಯಾರ್ಧದಲ್ಲಿ (ಎಚ್ 2) ಸಕಾರಾತ್ಮಕವಾಗಿ ಇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಬೇಡಿಕೆಯ ಚೇತರಿಕೆಯು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ. ನಗರ ಪ್ರದೇಶದಲ್ಲಿ ಪ್ರಚೋದಕ (ಸ್ಪರ್ಸ್) ಚಟುವಟಿಕೆ ಮತ್ತು ಉದ್ಯೋಗಗಳ ನಿರ್ಬಂಧತೆ​ ತೆರವಿನ ಬೇಡಿಕೆಯ ವೇಗ ಪಡೆಯುತ್ತಿದೆ. ಮುಖ್ಯವಾಗಿ ಕೋವಿಡ್​-19ರಿಂದ ವಲಸೆ ಹೋದ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ದಾಸ್ ತಿಳಿಸಿದರು.

ಈ ಸಕಾರಾತ್ಮಕ ಪ್ರಚೋದನೆಗಳು ದೇಶದ ಕೆಲವು ಭಾಗಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗುವುದರಿಂದ ಮತ್ತೆ ಕಾರ್ಮೋಡ ಕವಿದಿದ್ದು, ಕೆಲವು ಸ್ಥಳೀಯ ನಿಯಂತ್ರಣ ಕ್ರಮಗಳು ಅಲ್ಪ ಅಡ್ಡಿಗೆ ಕಾರಣವಾಗುತ್ತವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.