ETV Bharat / business

ವಿಶ್ವವನ್ನೇ ಬೆರಗುಗೊಳಿಸಿದ ಚಂದ್ರಯಾನ -2ರ ಮುಖ್ಯಸ್ಥ​ ರೈತನ ಮಗ, 'ಸ್ಲೀಪ್​ಲೆಸ್​ ಸೈಂ​ಟಿಸ್ಟ್'

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದ ಸಿವನ್​, ಅತ್ಯಂತ ವಿನಮ್ರ ವ್ಯಕ್ತಿತ್ವದವರು. ಮಿತ ಭಾಷಾಗಾರ. ತಮ್ಮ ಇಲ್ಲಿಯವರೆಗಿನ ವಿಜ್ಞಾನ ವೃತ್ತಿಜೀವನದ ಉದ್ದಕ್ಕೂ ವಿನಮ್ರತೆಯನ್ನು ಮೈಗೂಡಿಸಿಕೊಂಡು ಬಂದವರು. ವಿದ್ಯಾರ್ಥಿ ದೆಸೆಯಿಂದಲೂ ಬಲವಾಗಿ ನಂಬಿದ್ದು ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನ. ಕೋಚಿಂಗ್​ ಮತ್ತು ಟ್ಯೂಷನ್​ ಇಲ್ಲದಲ್ಲೇ ವಿಜ್ಞಾನವನ್ನು ಕರಗತ ಮಾಡಿಕೊಂಡು ಸಿವನ್, ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿದರು.

author img

By

Published : Jul 24, 2019, 3:17 PM IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಶ್ರೀಹರಿಕೋಟಾದ ಮಿಷನ್ ಕಂಟ್ರೋಲ್ ಕೇಂದ್ರದಲ್ಲಿ ಗಂಭೀರವಾಗಿ ಕುಳಿತಿದ್ದ ಇಸ್ರೊ ಮುಖ್ಯಸ್ಥ ಕೆ. ಸಿವನ್ ಅವರು, ಚಂದ್ರಯಾನ- 2ರ 'ಬಾಹುಬಲಿ' ಯಶಸ್ವಿಯಾಗಿ ನಭಕ್ಕೆ ಚಿಮ್ಮುತಿದಂತೆ ನಸುನಗುತಾ... ಹಿರಿಯ- ಕಿರಿಯ ಸಹೋದ್ಯೋಗಿಗಳಿಂದ ಶುಭಾಶಯ ಸ್ವೀಕರಿಸಿ ಮುಖದಲ್ಲಿ ಧನ್ಯತೆಯ ಭಾವನೆ ವ್ಯಕ್ತಪಡಿಸಿದರು.

ಆಗಸದಲ್ಲಿ ಜಿಎಸ್​ಎಲ್​ ವಿಕ್ರಂ ಮತ್ತು ರೋವರ್​ ಹೊತ್ತ ಚಂದ್ರನ ಅಂಗದತ್ತ ಹೊರಡುತ್ತಿದ್ದಂತೆ ತಮ್ಮ ಆಸನದಿಂದ ಎದ್ದು ಬಂದು ಕೇಂದ್ರದಲ್ಲಿದ್ದ ವೇದಿಕೆ ಹತ್ತಿದ ಸಿವನ್, 'ವೈಯಕ್ತಿಕ, ತಮ್ಮ ಕುಟುಂಬಸ್ಥರನ್ನು ಮರೆತು ದಣಿವರಿಯದೇ ಚಂದ್ರಯಾನ ಮಿಷನ್​ಗಾಗಿ ಹಗಲಿರುಳು ಶ್ರಮವಹಿಸಿದ ಎಲ್ಲ ಸಿಬ್ಬಂದಿಗೆ ಧನ್ಯವಾದ' ಅರ್ಪಿಸಿದರು ಸ್ಲೀಪ್​ಲೆಸ್​ ಸೈಂ​ಟಿಸ್ಟ್.

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಸಾಮಾನ್ಯ ರೈತನ ಮಗನಾಗಿ ಜನಿಸಿದ ಸಿವನ್​, ಅತ್ಯಂತ ವಿನಮ್ರ ವ್ಯಕ್ತಿತ್ವದವರು. ಮಿತ ಭಾಷಾಗಾರ. ತಮ್ಮ ಇಲ್ಲಿಯವರೆಗಿನ ವಿಜ್ಞಾನ ವೃತ್ತಿಜೀವನದ ಉದ್ದಕ್ಕೂ ವಿನಮ್ರತೆಯನ್ನು ಮೈಗೂಡಿಸಿಕೊಂಡು ಬಂದವರು. ವಿದ್ಯಾರ್ಥಿ ದೆಸೆಯಿಂದಲೂ ಬಲವಾಗಿ ನಂಬಿದ್ದು ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನ. ಕೋಚಿಂಗ್​ ಮತ್ತು ಟ್ಯೂಷನ್​ ಇಲ್ಲದಲ್ಲೇ ವಿಜ್ಞಾನವನ್ನು ಕರಗತ ಮಾಡಿಕೊಂಡು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿದರು.

ದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಲು ಸಿವನ್​ ಅವರು ಹಾಕಿದ ಪರಿಶ್ರಮದಿಂದಾಗಿ 'ರಾಕೆಟ್ ಮ್ಯಾನ್' ಎಂದೇ ಜನಪ್ರಿಯರಾದರು. ಪೋಖ್ರಾನ್- II ​​ಪರಮಾಣು ಪರೀಕ್ಷೆಯ ಬಳಿಕ ಅಂತಾರಾಷ್ಟ್ರೀಯ ಸಮುದಾಯಗಳು ಭಾರತದ ಮೇಲೆ ವಿಧಿಸಲಾದ ನಿರ್ಬಂಧ ಬಾಹ್ಯಾಕಾಶ ಕ್ಷೇತ್ರಕ್ಕೆ ಕ್ರಯೋಜೆನಿಕ್ ಎಂಜಿನ್ ಅತ್ಯವಶ್ಯಕವಾಗಿತ್ತು.

ಬಾಹ್ಯಾಕಾಶ ಏಜೆನ್ಸಿಯ ಇಸ್ರೋದ ಉನ್ನತ ಹುದ್ದೆಗೆ ಏರುವ ಮೊದಲು, ಶಿವನ್​ ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (ವಿಎಸ್ಎಸ್​ಸಿ) ನಿರ್ದೇಶಕರಾಗಿದ್ದರು. ಇಲ್ಲಿನ ಯಶಸ್ಸು ಚಂದ್ರಯಾನದಂತಹ ಮಹತ್ವಾಕಾಂಕ್ಷೆ ಯೋಜನೆಯ ರೂವಾರಿಗೆ ತಂದು ನಿಲ್ಲಿಸಿತು. 2017ರ ಫೆಬ್ರವರಿಯಲ್ಲಿ ಏಕಕಾಲದಲ್ಲಿ 104 ಉಪಗ್ರಹಗಳ ಉಡಾವಣೆ ಅದ್ವಿತೀಯವಾದದ್ದು. ಒಂದೇ ನೌಕೆಯಲ್ಲಿ 104 ಉಪಗ್ರಹಗಳನ್ನು ಹೇಗಿ ಜೋಡಿಸಬೇಕು, ಕಕ್ಷೆಯಲ್ಲಿ ಒಂದೊಂದಾಗಿ ಹೇಗೆ ಬೇರ್ಪಡಿಸಬೇಕು, ಅವುಗಳ ವಿನ್ಯಾಸ ಹೇಗಿರಬೇಕು ಎಂಬದನ್ನು ರೂಪಿಸಿದವರು ನೇಗಿಲ ಯೋಗಿಯ ಮಗನೇ ಈ ಶಿವನ್​.

ಸೌಮ್ಯ ಸ್ವಭಾವದ ಸಾಮಾನ್ಯ ಹಡುಗನಾಗಿದ್ದ ಸಿವನ್​, ಬಾಹ್ಯಾಕಾಶ ಕ್ಷೇತ್ರದಲ್ಲಿನ ಮಹತ್ವಾಕಾಂಕ್ಷೆಯ ಮಿಷನ್​ಗಳಲ್ಲಿ ಕೆಲಸ ಮಾಡಿದ್ದ ಸ್ಲೀಪ್​ಲೆಸ್​ ಸೈಂಟಿಸ್ಟಾಗಿ. ಪಿಎಸ್​ಎಲ್​ವಿ ಕಾರ್ಯದೊಂದಿಗೆ ಇಸ್ರೋ ಸೇರಿಕೊಂಡ ಶಿವನ್ ಮತ್ತೆ ಹಿಂದಕ್ಕೆ ತಿರುಗಿ ನೋಡಲಿಲ್ಲ. ಜಿಎಸ್​ಎಲ್​ವಿ ಉಡಾವಣೆ, ಮರುಬಳಕೆ ಮಾಡಬಹುದಾದ ಉಡಾವಣಾ ವಾಹನ ತಂತ್ರಜ್ಞಾನದ ಪ್ರಾತ್ಯಕ್ಷಿಕೆ ಯಶಸ್ವಿಯಲ್ಲಿ ಇವರ ಸೇವೆ ಅನನ್ಯ.

ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಿತವ್ಯಯದ ಬಜೆಟ್​ ಪ್ರಮುಖ ಮಾನದಂಡ. ಅಂತೆಯೇ, ಶಿವನ್ ಮಿತವ್ಯಯ ವಿಜ್ಞಾನದಲ್ಲಿ ತಂತ್ರಜ್ಞಾನದ ಚಾಂಪಿಯನ್. ರಾಜಿ ಅವರ ಗುಣದಿಂದಾಗಿ ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡುವಂತಹ ತಂತ್ರಜ್ಞಾನ ರೂಪಿಸುವಲ್ಲಿ ಯಶ ಕಂಡರು. ಕಡಿಮೆ ವೆಚ್ಚದ ಯೋಜನೆಗಳು ರಾಷ್ಟ್ರಕ್ಕೂ ಸಂಸ್ಥೆಗೂ ಅವಶ್ಯಕ ಎಂಬುದು ಅವರ ದೃಢ ನಿಲುವು. ಬಾಹ್ಯಾಕಾಶದ ಭವಿಷ್ಯವು ಹೊಸ ಎತ್ತರಕ್ಕೆ ಕೊಂಡಯ್ಯಬೇಕಾದರೆ ಕಡಿಮೆ ವೆಚ್ಚದ ಉಡಾವಣೆಗಳತ್ತ ಮೊರೆ ಹೋಗಬೇಕು ಎಂಬುದು ಅವರ ಬಜೆಟ್ ಮಂತ್ರ.

ಸಾಕಷ್ಟು ಪ್ರತಿಭೆ, ಉತ್ಸಾಹ, ಕಠಿಣ ಶ್ರಮ, ದಣಿವರಿಯದ ಸೇವೆಯ ನಡುವೆಯೂ ಹಲವು ವೈಫಲ್ಯಗಳನ್ನು ಕಂಡಿದ್ದಾರೆ. ಅವರ ಯಶಸ್ಸು ಮತ್ತು ವೈಫಲ್ಯಗಳು ವಿವಾದಗಳಿಂದ ಮುಕ್ತವಾಗಿಲ್ಲ. ಆದರೆ, ಈ ಬಗ್ಗೆ ಅವರು ಎಂದು ಕೈಕಟ್ಟಿ ಕುಳಿತುಕೊಂಡಿಲ್ಲ. ಇಸ್ರೋ ಅಧ್ಯಕ್ಷರಾದ ಮೊದಲ ಬಾರಿಗೆ ಪಿಎಸ್​ಎಲ್​ವಿ ಉಡಾವಣೆ ವಿಫಲವಾಯಿತು. ಕಳೆದ 24 ವರ್ಷಗಳ ಸೇವೆಯಲ್ಲಿ ಪಿಎಸ್​ಎಲ್​ವಿ ಒಂದು ಬಾರಿಯೂ ವಿಫಲವಾಗಿರಲಿಲ್ಲ. ಶಿವನ್ ಕಾಲಿಟ್ಟ ಗಳಿಕ ಸರಿಯಿಲ್ಲವೆಂದು ಅಣಕಿಸಿದರು. ತಮ್ಮ ತಪ್ಪನ್ನು ಒಪ್ಪಿಕೊಂಡ ಸಿವನ್, ಯಸ್​ ತಪ್ಪಾಗಿದೆ. ಇದನ್ನು ಮತ್ತೆ ಸರಿಪಡಿಸಿಕೊಂಡು ಮುಂದೆ ಹೋಗಬೇಕಿದೆ ಎನ್ನುತ್ತಲ್ಲೇ ತಮ್ಮ ಕೆಲಸದಲ್ಲಿ ಮಗ್ನರಾದರು.

ಈ ವರ್ಷದ ಆರಂಭದಲ್ಲಿ ಬಾಹ್ಯಾಕಾಶ ಮಿಲಿಟರೀಕರಣದ ಬಗ್ಗೆ ಸಿವನ್ ಅವರು ಹಲವು ಪ್ರಶ್ನೆಗಳನ್ನು ಎದುರಿಸಬೇಕಾಯಿತು. ಈ ಬಗ್ಗೆ ಮೌನ ಮುರಿದ ಸಿವನ, ಎದುರಾದ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳು ನೀಡಿದರು. ಅದರಲ್ಲಿ ಮುಖ್ಯವಾಗಿ, ''ನಾನು ಒಬ್ಬ ಉದ್ಯಮಿ. ಬಳಕೆಯಲ್ಲಿಲ್ಲದ ಉಪಗ್ರಹವನ್ನು ಯಾರಾದರೂ ನನ್ನಿಂದ ಖರೀದಿಸಲು ಬಯಸಿದರೆ, ನಾನು ಯಾಕೆ ಬೇಡ ಎನ್ನಲಿ" ಎಂಬ ಪ್ರತಿ ಪ್ರಶ್ನೆಯಲ್ಲಿ ಅವರ ಮಿತವ್ಯಯದ ಕಾಳಜಿ ಇದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.