ನವದೆಹಲಿ: ಅತಿಯಾದ ಮದ್ಯ ಸೇವನೆ ಬಳಿಕ ಉಸಿರುಗಟ್ಟಿ ಸಾವನ್ನಪ್ಪಿದ್ದ ಮೃತನ ಕುಟುಂಬಸ್ಥರಿಗೆ ವಿಮೆ ಕ್ಲೈಮ್ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ.
ಅಪಘಾತ ಮತ್ತು ಗಾಯದಿಂದ ಬಳಿದ ವ್ಯಕ್ತಿಗೆ ಪರಿಹಾರ ನೀಡಲು ವಿಮಾದಾರರು ಹೊಣೆಗಾರರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಂ.ಎಂ.ಶಾಂತಂಗೌಡರ್ ಮತ್ತು ವಿನೀತ್ ಸರನ್ ಅವರಿದ್ದ ನ್ಯಾಯಪೀಠವು ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ಆದೇಶಗಳನ್ನು ಎತ್ತಿಹಿಡಿದಿದೆ. ಸಾವು ಆಕಸ್ಮಿಕವಲ್ಲ. ಆದ್ದರಿಂದ ಸಾವನ್ನಪ್ಪಿದವರ ಪ್ರಾಣಹಾನಿ ಸರಿದೂಗಿಸಲು ಸಂಸ್ಥೆಗೆ ವಿಮಾ ಪಾಲಿಸಿಯ ನಿಯಮಗಳಡಿ ಯಾವುದೇ ಕಾನೂನುಬದ್ಧ ಹೊಣೆಗಾರಿಕೆ ಇಲ್ಲ ಎಂದು ಸ್ಪಷ್ಟ ಪಡಿಸಿದೆ.
ಪ್ರಕರಣದ ಸಂಗತಿ ಮತ್ತು ಸನ್ನಿವೇಶಗಳಲ್ಲಿ ರಾಷ್ಟ್ರೀಯ ಆಯೋಗವು ಅಂಗೀಕರಿಸಿದ 2009ರ ಏಪ್ರಿಲ್ 24ರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಕಾರಣವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಚೋಪಾಲ್ ಪಂಚಾಯತ್ ವ್ಯಾಪ್ತಿಯಲ್ಲಿ ರಾಜ್ಯ ಅರಣ್ಯ ನಿಗಮದಲ್ಲಿ (ಎಚ್‌ಪಿಎಸ್‌ಎಫ್‌ಸಿ) ಕಾವಲುಗಾರನಾಗಿದ್ದ ವ್ಯಕ್ತಿ, 1997ರ ಅಕ್ಟೋಬರ್ 7-8ರ ರಾತ್ರಿ ಗುಡುಗು ಸಹಿತ ಮಳೆಯಲ್ಲಿ ಸಿಲುಕಿ ಮೃತಪಟ್ಟಿದ್ದರು. ಮೃತರ ಸಂಬಂಧಿ ನಾರ್ಬಾದಾ ದೇವಿ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ಉನ್ನತ ನ್ಯಾಯಾಲಯ ಈ ತೀರ್ಪು ನೀಡಿದೆ.
ಇದನ್ನೂ ಓದಿ: ಮೋದಿ ಕನಸಿನ 5 ಟ್ರಿಲಿಯನ್ ಡಾಲರ್ GDPಯ ನೈಜ ಕತೆ ಬಿಚ್ಚಿಟ್ಟ ಬ್ಯಾಂಕ್ ಆಫ್ ಅಮೆರಿಕ!
ವಿಮಾ ಪಾಲಿಸಿಯ ನಿಯಮಗಳ ಪ್ರಕಾರ, ವಿಮಾದಾರನಿಗೆ ಯಾವುದೇ ದೈಹಿಕ ಗಾಯಗಳು ಹಿಂಸಾತ್ಮಕ ಮತ್ತು ಇತರೆ ಗೋಚರ ವಿಧಾನಗಳಿಂದ ಸಂಭವಿಸಿದರೇ ಮಾತ್ರ ವಿಮೆ ಕಂಪನಿಯು ಪರಿಹಾರ ಪಾವತಿಸುತ್ತದೆ. ಪಾಲಿಸಿಯ ಅನ್ವಯ ವಿಮಾದಾರನ ಆಕಸ್ಮಿಕ ಸಾವಿಗೆ ನಷ್ಟ ಪರಿಹಾರವಿಲ್ಲ ಎಂದಿದೆ.
ಮರಣೋತ್ತರ ವರದಿಯು ಮೃತರ ದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಅಂತಿಮವಾಗಿ ಸಾವಿಗೆ ಸಂಭವನೀಯ ಕಾರಣವೆಂದರೆ ಆಲ್ಕೊಹಾಲ್ ಸೇವನೆಯಿಂದ ಉಂಟಾಗುವ ಉಸಿರುಗಟ್ಟುವಿಕೆ ಎಂದಿದೆ.
ಅದರಂತೆ, ಸತ್ತವರ ಸಾವು ಆಕಸ್ಮಿಕ ಎಂದು ತೀರ್ಮಾನಿಸಲು ನಮಗೆ ಕಷ್ಟವಾಗುತ್ತದೆ. ವಿಮಾ ಪಾಲಿಸಿಯ ಸ್ಪಷ್ಟ ನಿಯಮಗಳಡಿ ವ್ಯಕ್ತಿ ಮೃತಪಟ್ಟಿದ್ದು ಆಕಸ್ಮಿಕವಲ್ಲ. ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಇತ್ಯರ್ಥಪಡಿಸಲು ವಿಮಾ ಕಂಪನಿಯು ಜವಾಬ್ದಾರನಾಗಿ ಇರುವುದಿಲ್ಲ ಎಂದು ಸರಿಯಾಗಿ ಹೇಳಿದೆ ಎಂದು ಎಂದು ನ್ಯಾಯಪೀಠ ಹೇಳಿದೆ.