ಕೋವಿಡ್-19 ಸೋಂಕಿನಿಂದಾಗಿ ಜಾಗತಿಕ ಆರ್ಥಿಕತೆ ಪಾರ್ಶ್ವವಾಯುವಿಗೆ ಒಳಗಾಗಿದೆ. ಆರ್ಥಿಕ ಚಲನಶೀಲತೆಯ ವೇಗವನ್ನೇ ಬದಲಿಸಿದ್ದು, ಅದರ ಪ್ರಭಾವ ಹಲವು ವರ್ಷಗಳ ತನಕ ಮುಂದುವರಿಯಲಿದೆ. ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ (2008) ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ದೊಡ್ಡ ಸಂಕಷ್ಟ ಬಂದೆರೆಗಿದೆ. ಈ ಬಿಕ್ಕಟ್ಟಿಗೆ ಭಾರತವೂ ಹೊರತಾಗಿಲ್ಲ.
ಇದಕ್ಕೆ ತದ್ವಿರುದ್ಧ ಎಂಬಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೃಹತ್ ಆದಾಯ ಮತ್ತು ಹಣಕಾಸಿನ ಕೊರತೆ, ಖಾಸಗಿ ಹೂಡಿಕೆ ಮತ್ತು ಉಳಿತಾಯದ ಕುಸಿತ, ರಫ್ತು ಅಭಾವ, ಹೆಚ್ಚಿನ ಮಟ್ಟದ ಋಣಭಾರ, ದಾಖಲೆಯ ಮಟ್ಟದ ರೂಪಾಯಿ ಮೌಲ್ಯದಲ್ಲಿ ಕ್ಷೀಣ, ಬ್ಯಾಂಕಿಂಗ್ ಬಿಕ್ಕಟ್ಟುಗಳು ಆರ್ಥಿಕತೆಯವನ್ನು ಮತ್ತಷ್ಟು ದುರ್ಬಲ ಹಂತಕ್ಕೆ ಕರೆದೊಯ್ಯುತ್ತಿವೆ. ಬರೀ ಆತ್ಮವಿಶ್ವಾಸಕ್ಕೆ ಸೀಮಿತವಾದ ಸುಳ್ಳು ದಾಖಲೆಯ ವಿದೇಶಿ ವಿನಿಮಯ ನಿಕ್ಷೇಪಗಳು, ಬೆಳಕಿನ ಪ್ರತಿಬಿಂಬದ ನಂಬಿಕೆಯಂತೆ ಕಾಣುತ್ತಿವೆ. ಸಮಸ್ಯಾತ್ಮಕವಾಗಿ ನೋಡಿದರೇ ಅವು ಹಿಮ್ಮುಖವಾಗಿ ಎಲ್ಲ ರಾಷ್ಟ್ರಗಳಲ್ಲಿ ಚಲಿಸುತ್ತಿವೆ.
ಆರ್ಥಿಕತೆಯು ಗಾಢವಾದ ಅಂಧಕಾರದಲ್ಲಿ ಮುಳುಗಿದೆ. ಬೆಳ್ಳಿ ಮೋಡದಂತೆ ಗ್ರಾಮೀಣ ಆರ್ಥಿಕತೆಯು ಜೀವಂತ ಚಿಹ್ನೆಗಳನ್ನು ತೋರುತ್ತಿವೆ. ಇದನ್ನು ಬಹು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವಾಗಿದೆ. ದೇಶಿಯ ವಿತ್ತೀಯಲ್ಲಿ ಕೆಲವು ಸಕಾರಾತ್ಮಕ ಅಂಶಗಳಿವೆ. ಗ್ರಾಮೀಣ ಬೇಡಿಕೆಯು ನಿಧಾನವಾಗಿ ಜೀವಂತಿಕೆ ಪಡೆದುಕೊಳ್ಳುತ್ತಿದೆ. ಲಾಕ್‌ಡೌನ್ ಹೇರಿಕೆಯ ಹೊರತಾಗಿಯೂ ವಿದ್ಯುತ್ ಬೇಡಿಕೆ ಪೂರ್ವ ಕೋವಿಡ್ ಮಟ್ಟಕ್ಕೆ ತಲುಪಿದೆ. ಮೇ ಮಾಸಿಕದ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಸುಧಾರಿಸಿದೆ. ಹೆದ್ದಾರಿಗಳಲ್ಲಿ ಸಂಚಾರ ಹೆಚ್ಚಳ ಮತ್ತು ದ್ವಿಚಕ್ರ ವಾಹನ ಬೇಡಿಕೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಟ್ರಾಕ್ಟರ್ ಮಾರಾಟವು ಶೇ.20ರಷ್ಟು ಹೆಚ್ಚಾಗಿದೆ.
ಗ್ರಾಮೀಣ ಪ್ರದೇಶಗಳು ಕಡಿಮೆ ಪ್ರಮಾಣದ ಸಾಲ ಹೊಂದಿರುತ್ತವೆ ಎಂಬುದರ ಅರ್ಥ, 'ಸಾಲ ಪ್ರೇರಿತ ಬಳಕೆಗೆ ಅವಕಾಶವಿದೆ, ಬ್ಯಾಂಕ್ಗಳು ಸಾಲ ನೀಡಲು ಸಿದ್ಧರಿದ್ದರೆ. ಗ್ರಾಮೀಣ ಬೇಡಿಕೆಯು ನಿರೀಕ್ಷೆಗಿಂತ ಬೇಗನೆ ಚೇತರಿಸಿಕೊಳ್ಳಲು ನೆರವಾಗುತ್ತದೆ' ಎಂಬ ಭರವಸೆ ನೀಡುತ್ತದೆ. ಗ್ರಾಮೀಣ ಬೇಡಿಕೆಯು ಕೃಷಿ, ವಲಸೆ, ಸಾಲ ಮತ್ತು ಸರ್ಕಾರದ ಬೆಂಬಲವನ್ನು ಅವಲಂಬಿಸಿರುತ್ತದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಟ್ರಾಕ್ಟರ್ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಯು ನಿರ್ಣಾಯಕ ಹಂತದಲ್ಲಿ ಇರುವಾಗ ಬಳಕೆ ಮತ್ತು ಆರ್ಥಿಕತೆ ಬೆಂಬಲಿಸುತ್ತದೆ ಎಂಬ ಆಶಾವಾದ ಹೆಚ್ಚಿಸಿದೆ. ಖಾರಿಫ್ ಬಿತ್ತನೆಯು ಕಳೆದ ವರ್ಷ 4 ಕೋಟಿ ಎಕರೆಗಳಿಗೆ ಪ್ರತಿಯಾಗಿ 5.8 ಕೋಟಿ ಹೆಕ್ಟೇರ್ ಆಗಿದೆ. ಭತ್ತ ಶೇ. 26ರಷ್ಟು, ಬೇಳೆಕಾಳುಗಳು ಶೇ.160ರಷ್ಟು, ಸಿರಿಧಾನ್ಯಗಳು ಶೇ. 29ರಷ್ಟು, ಎಣ್ಣೆ ಕಾಳುಗಳು ಶೇ.85ರಷ್ಟು ಮತ್ತು ಹತ್ತಿ ಶೇ.35ರಷ್ಟು ಬಿತ್ತನೆಯು ಶುಭ ಸಂಕೇತವಾಗಿದೆ. ಈ ಪ್ರಮಾಣವು ಯಾವುದೇ ಮಿಡತೆ ಅಥವಾ ಇತರ ನೈಸರ್ಗಿಕ ವಿಕೋಪಗಳನ್ನು ಮೀರಿ ಬಂಪರ್ ಬೆಳೆಯನ್ನು ನಿರೀಕ್ಷಿಸಬಹುದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉದ್ಯೋಗ ಮತ್ತು ಆದಾಯ ಹೆಚ್ಚಳವಾಗಲಿದೆ. ಅಮೆರಿಕದಂತೆ ಇತರ ದೊಡ್ಡ ಉತ್ಪಾದಕ ರಾಷ್ಟ್ರಗಳಲ್ಲಿ ಬೆಳೆ ಬಿತ್ತನೆಯು ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದೆ ಎಂಬ ಅಂಶ ಗಮನಿಸಿದರೆ, ಅಂತಾರಾಷ್ಟ್ರೀಯ ಕೃಷಿ ಸರಕುಗಳ ಬೆಲೆಗಳು ಬೆಂಬಲವಾಗಿ ನಿಲ್ಲಬಹುದು. ಕೃಷಿಯಲ್ಲಿನ ಯಾವುದೇ ಸುಧಾರಣೆಯು ಸ್ವಾಗತಾರ್ಹವಾಗಿದೆ. ಏಕೆಂದರೆ ನಗರ ಪ್ರದೇಶಗಳಿಗೆ ವಲಸೆ ಮತ್ತು ಹಣದ ಒಳಹರಿವು ಸಂಪೂರ್ಣವಾಗಿ ಕುಸಿದಿದೆ.
ಹಣಕಾಸಿನ ವರ್ಷದ ಕೊನೆಯ ಮೂರು ತಿಂಗಳವರೆಗೆ ಕಾಯುವ ಬದಲು ಸರ್ಕಾರದ ಖರ್ಚು, ಆರ್ಥಿಕತೆಯ ಒತ್ತಡವನ್ನು ಕಡಿಮೆ ಮಾಡಲು ಗ್ರಾಮೀಣ ವಿತ್ತೀಯ ಚಟುವಟಿಕೆ ಸಹಕಾರಿಯಾಗಿದೆ. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಕಳೆದ ವರ್ಷದ ಸುಮಾರು 44,000 ಕೋಟಿ ರೂ. ವೆಚ್ಚಗಳಿಗೆ ಹೋಲಿಸಿದರೆ, ಈ ವರ್ಷ ಸುಮಾರು 90,000 ಕೋಟಿ ರೂ. ಖರ್ಚು ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯ ಖರ್ಚಿನ ಹಣವನ್ನು ಎನ್‌ಆರ್‌ಇಜಿಎಸ್‌ಗೆ (ಸುಮಾರು 43,000 ಕೋಟಿ ರೂ.) ಮತ್ತು ಪಿಎಂ ಗರೀಬ್ ಕಲ್ಯಾಣ ರೋಜಗಾರ್ ಯೋಜನೆ ಆರಂಭ ಆದಾಗಿನಿಂದ 6000 ಕೋಟಿ ರೂ. ವ್ಯಯಿಸಿದೆ. ಹೊಸ ಹಣಕಾಸು ವರ್ಷದ ಮೊದಲ 100 ದಿನಗಳಲ್ಲಿ ಸರ್ಕಾರ ತನ್ನ ಬಜೆಟ್ ಹಂಚಿಕೆಯ ಶೇ.95ರಷ್ಟು ಖರ್ಚು ಮಾಡಿದೆ. 2020ರ ಏಪ್ರಿಲ್ ಮಾಸಿಕದಿಂದ ಎನ್‌ಆರ್‌ಇಜಿಎಸ್ ಅಡಿ ಇದುವರೆಗೆ 130 ದಿನಗಳ ಕೆಲಸ ಕಲ್ಪಿಸಲಾಗಿದೆ.
ಇದರಲ್ಲಿ ಸುಮಾರು 80 ಕೋಟಿ ದುಡಿಯುವವರ ದಿನಗಳನ್ನು ಆರು ರಾಜ್ಯಗಳು ಲೆಕ್ಕಹಾಕಿದರೆ, 4.87 ಕೋಟಿ ಕುಟುಂಬಗಳು ಇದರ ಲಾಭ ಪಡೆದಿವೆ. ಈ ಹಣಕಾಸು ವರ್ಷದ ಈ 100 ದಿನಗಳಲ್ಲಿ ನೀಡಲಾದ ಒಟ್ಟು ಕೆಲಸದ ದಿನಗಳ ಸಂಖ್ಯೆ ಕಳೆದ ವರ್ಷದಲ್ಲಿ ರಚಿಸಲಾದ ಶೇ 50ರಷ್ಟಾಗಿದೆ. ಆಂಧ್ರಪ್ರದೇಶ ಐದನೇ ಅತಿ ಹೆಚ್ಚು ಸಕ್ರಿಯ ಎನ್‌ಆರ್‌ಇಜಿಎಸ್ ಕಾರ್ಮಿಕರನ್ನು ಹೊಂದಿದ್ದು, ತಮಿಳುನಾಡಿಗಿಂತ ಅಧಿಕವಾಗಿದೆ. ನಾಲ್ಕು ರಾಜ್ಯಗಳಲ್ಲಿ 1 ಕೋಟಿಗಿಂತ ಹೆಚ್ಚು ಸಕ್ರಿಯ ಕಾರ್ಮಿಕರಿದ್ದಾರೆ.
ಮೇಲಿನ ಅಂಕಿಅಂಶಗಳ ಅರ್ಥ, ಆರ್ಥಿಕತೆಯು ಚೇತರಿಸಿಕೊಂಡಿದೆ ಎಂದಲ್ಲ. ಇದೊಂದು ಉತ್ತಮ ಆರಂಭ ಮಾತ್ರವೇ. ಇವು ಶಾಶ್ವತವಾದ ಆರ್ಥಿಕ ಬದಲಾವಣೆಯ ಸಂಕೇತಗಳಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಸರ್ಕಾರವು ಜಾಗರೂಕರಾಗಿ ಇರಬೇಕಾದ ಹಲವು ವಿಷಯಗಳು ಇದರಲ್ಲಿವೆ.
ಬ್ಯಾಂಕ್ಗಳು ಸಾಲ ನೀಡಲು ಸಿದ್ಧರಿರುವಂತೆ ತೋರುತ್ತಿಲ್ಲ. ಹೊಸ ಸಾಲಗಳಲ್ಲಿ ಹೆಚ್ಚಿನ ಭಾಗವು ಎವರ್ ಗ್ರೀನ್ ಆಗಿರಲಿದೆ. ಅಲ್ಲಿ ಹೊಸ ಸಾಲ ನೀಡಲಾಗುವುದು ಎಂದು ತೋರಿಸಲಾಗುತ್ತದೆ. ಆದರೆ, ವಾಸ್ತವದಲ್ಲಿ ಹಳೆಯ ಸಾಲ ಮರುಪಾವತಿಯಾಗಿದೆ ಮತ್ತು ಹೊಸ ಸಾಲ ವಿತರಿಸಲಾಗಿದೆ ಎಂದು ತೋರಿಸಲಾಗುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹೊಸ ಸಾಲಗಳು ಕ್ರೆಡಿಟ್ ಅಗತ್ಯವಿರುವವರಿಗೆ ತಲುಪುವ ಸ್ವಲ್ಪ ಹೊಸ ಹಣದೊಂದಿಗೆ ಪುಸ್ತಕ ವಹಿವಾಟು ಹೊರತುಪಡಿಸಿ ಹೊಸದು ಏನೂ ಇರುವುದಿಲ್ಲ. ಮೇಲಾಧಾರದ ಜೊತೆಗೆ ಸ್ವತ್ತುಗಳಿಗೆ ಸಾಲ ನೀಡುವುದು ಇದಕ್ಕೆ ಅಪವಾದವಾಗಿ ನಿಲ್ಲುತ್ತದೆ.
ಬ್ಯಾಂಕ್ಗಳು ಸಾಲ ನೀಡಲು ಹೆಚ್ಚು ಆಸಕ್ತಿ ಹೊಂದಿಲ್ಲ ಎಂಬುದನ್ನು ಚಿನ್ನದ ಮೇಲೆ ಸಾಲ ನೀಡುವ ಕಂಪನಿಗಳಿಂದ ತಿಳಿದುಬರುತ್ತದೆ. ಇದು ಮಧ್ಯಮ ಮತ್ತು ಕೆಳವರ್ಗದವರ ಒತ್ತಡ ಸ್ಪಷ್ಟಿಯ ಸೂಚಕವಾಗಿದೆ. ಸಮಯೋಚಿತವಾಗಿ ಸಾಲವನ್ನು ಒದಗಿಸದಿದ್ದರೆ ಶಾಶ್ವತವಾದ ಕೃಷಿ ಚೇತರಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ.
ಕೇವಲ ಸರ್ಕಾರದ ಖರ್ಚಿನ ಆಧಾರದ ಮೇಲೆ ಬೇಡಿಕೆ ಸೃಷ್ಟಿಯು ಅಲ್ಪಾವಧಿಯ, ನಿಲುಗಡೆ ಅಂತರದ ಮಾಪನವಾಗಿದೆ. ಅಲ್ಪಾವಧಿಯ ಕ್ರಮಗಳಿಗೆ ಇಷ್ಟೊಂದು ಹಣವನ್ನು ಖರ್ಚು ಮಾಡಲು ಸರ್ಕಾರಕ್ಕೆ ಸಂಪನ್ಮೂಲಗಳಿಲ್ಲ. ಕಳೆದುಹೋದ ಗಳಿಕೆಯ ಪ್ರಮಾಣವನ್ನು ಎನ್ಆರ್ಇಜಿಸಿಯು ಬದಲಾಯಿಸಲು ಸಾಧ್ಯವಿಲ್ಲ. ದೀರ್ಘಾವಧಿಯ ಉದ್ಯೋಗಗಳನ್ನು ಸೃಜಿಸುವ ಉತ್ಪಾದನಾ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಬೇಕಾಗಿದೆ. ಅದು ಸಂಭವಿಸದಿದ್ದರೆ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಭಾರತ ಒಳಗಾಗಬಹುದು.
ತೆರಿಗೆಗೆ ಕಡಿಮೆ ಮೂಲಗಳು ಇರುವುದರಿಂದ ಸರ್ಕಾರಗಳು (ರಾಜ್ಯಗಳು ಮತ್ತು ಕೇಂದ್ರ) ಜನರು ಬಳಸುವ ಪ್ರಮುಖ ವಸ್ತುಗಳ ಮೇಲೆ ಹೆಚ್ಚು ಸುಂಕ ವಿಧಿಸುತ್ತಿವೆ. ಯಾವುದೇ ಸಂಭವನೀಯ ಬೇಡಿಕೆ ಸೃಷ್ಟಿಸಲು ಇದೊಂದು ನಿರ್ದಿಷ್ಟ ಮಾರ್ಗವಾಗಿದೆ. ಆದ್ದರಿಂದ ಜಿಎಸ್‌ಟಿ ಸೇರಿದಂತೆ ಎಲ್ಲಾ ವಸ್ತುಗಳ ಮೇಲಿನ ತೆರಿಗೆ ಕಡಿಮೆ ಮಾಡುವುದು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಹೊರೆ ತಗ್ಗಿಸಿದರೇ ಬೇಡಿಕೆಯ ಹೆಚ್ಚಳಕ್ಕೆ ಉತ್ತಮ ಮಾರ್ಗವಾಗಲಿದೆ. ಮನೆಗಳ ಬ್ಯಾಲೆನ್ಸ್ ಶೀಟ್‌ಗೆ ಹೆಚ್ಚು ಒತ್ತು ನೀಡಿದಂತಾಗುತ್ತದೆ. ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಹೂಡಿಕೆಗಳಿಗೆ ಕೇಂದ್ರ ಸರ್ಕಾರವು 10 ವರ್ಷಗಳ ಕಾಲ ತೆರಿಗೆ ರಜೆ ಘೋಷಿಸುವುದು ಪ್ರಮುಖ ಅವಶ್ಯಕತೆಯಾಗಿದೆ. ಅದು ದೀರ್ಘಕಾಲೀನ ಗ್ರಾಮೀಣ ಉದ್ಯೋಗವನ್ನು ಸೃಷ್ಟಿಸಲು ನೆರವಾಗಲಿದೆ.
-ಡಾ. ಎಸ್. ಅನಂತ್