ಮುಂಬೈ: 2 ಸಾವಿರ ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು 2019-20ರಲ್ಲಿ ಮುದ್ರಿಸಲಾಗಿಲ್ಲ. ಚಲಾವಣೆ ವರ್ಷಗಳಲ್ಲಿ ಈ ನೋಟುಗಳ ಸಂಖ್ಯೆ ಕಡಿಮೆಯಾಗಿದೆ ಎಂಬುದು ಆರ್‌ಬಿಐನ ವಾರ್ಷಿಕ ವರದಿಯಿಂದ ತಿಳಿದುಬಂದಿದೆ.
ಚಲಾವಣೆಯಲ್ಲಿರುವ 2 ಸಾವಿರ ರೂ. ಕರೆನ್ಸಿ ನೋಟುಗಳ ಸಂಖ್ಯೆ 2018ರ ಮಾರ್ಚ್ ಅಂತ್ಯದ ವೇಳೆಗೆ 33,632 ಲಕ್ಷ ಪ್ರಮಾಣದಿಂದ 2019ರ ಮಾರ್ಚ್ ಅಂತ್ಯದ ವೇಳೆಗೆ 32,910 ಲಕ್ಷಗಳಿಗೆ ತಲುಪಿದೆ. 2020ರ ಮಾರ್ಚ್ ಅಂತ್ಯದ ವೇಳೆಗೆ 27,398 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಆರ್‌ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
2,000 ರೂ. ಮುಖಬೆಲೆಯ ನೋಟು ತುಣುಕುಗಳ ಸಂಖ್ಯೆ 2020ರ ಮಾರ್ಚ್ ಅಂತ್ಯದ ವೇಳೆಗೆ ಒಟ್ಟು ನೋಟುಗಳ ಪರಿಮಾಣದಲ್ಲಿ ಶೇ 2.4ರಷ್ಟಿದೆ. 2019ರ ಮಾರ್ಚ್ ಅಂತ್ಯದ ವೇಳೆಗೆ ಶೇ 3ರಷ್ಟು ಮತ್ತು 2018ರ ಮಾರ್ಚ್ ಅಂತ್ಯದ ವೇಳೆಗೆ ಶೇ 3.3ರಷ್ಟಿದ್ದವು. ಮೌಲ್ಯದ ಪರಿಭಾಷೆಯಲ್ಲಿ ಹೇಳುವುದಾದರೇ 2020ರ ಮಾರ್ಚ್ ಅಂತ್ಯದ ವೇಳೆಗೆ ಶೇ 22.6ಕ್ಕೆ ಇಳಿದಿದೆ. ಇದು 2019ರ ಮಾರ್ಚ್ ಅಂತ್ಯದ ವೇಳೆಗೆ 31.2ರಿಂದ ಮತ್ತು 2018ರ ಮಾರ್ಚ್ ಅಂತ್ಯದ ವೇಳೆಗೆ 37.3 ಪ್ರತಿಶತಕ್ಕೆ ಕ್ಷೀಣಿಸಿದೆ.
2018ರಿಂದ ಆರಂಭವಾಗುವ ಮೂರು ವರ್ಷಗಳಲ್ಲಿ ಪರಿಮಾಣ ಮತ್ತು ಮೌಲ್ಯದ ದೃಷ್ಟಿಯಿಂದ 500 ಮತ್ತು 200 ರೂ. ಮುಖಬೆಲೆಯ ಕರೆನ್ಸಿ ನೋಟುಗಳ ಚಲಾವಣೆ ಗಣನೀಯವಾಗಿ ಹೆಚ್ಚಳವಾಗಿದೆ.
2019-20ರ ಅವಧಿಯಲ್ಲಿ 2,000 ರೂ. ನೋಟುಗಳ ಮುದ್ರಣಕ್ಕೆ ಗುರುತು (ಇಂಡೆಂಟ್) ಮಾಡಲಾಗಿದೆ. ಬಿಆರ್‌ಬಿಎನ್‌ಎಂಪಿಎಲ್ (ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್) ಮತ್ತು ಎಸ್‌ಪಿಎಂಸಿಐಎಲ್ (ಸೆಕ್ಯೂರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ಯಾವುದೇ ಹೊಸ ಸರಬರಾಜುಗಳನ್ನು ಮಾಡಿಲ್ಲ.
2019-20ರ ನೋಟುಗಳ ಇಂಡೆಂಟ್ ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ ಶೇ 13.1ರಷ್ಟು ಕಡಿಮೆಯಾಗಿದೆ. 2019-20ರ ಅವಧಿಯಲ್ಲಿ ನೋಟುಗಳ ಪೂರೈಕೆ ಹಿಂದಿನ ವರ್ಷಕ್ಕಿಂತ ಶೇ 23.3ರಷ್ಟು ಕಡಿಮೆಯಾಗಿದೆ. ಕೋವಿಡ್-19 ಹಾಗೂ ರಾಷ್ಟ್ರವ್ಯಾಪಿ ಹೇರಿದ್ದ ಲಾಕ್‌ಡೌನ್ ಸಹ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಿದೆ.