ETV Bharat / business

ಫೆಬ್ರವರಿ ಮಧ್ಯದಿಂದ ಆರ್‌ಬಿಐ ಬ್ಯಾಲೆನ್ಸ್ ಶೀಟ್ 54 ಲಕ್ಷ ಕೋಟಿ ರೂ.ಗೆ ಏರಿಕೆ

ಆರ್‌ಬಿಐನ ಬ್ಯಾಲೆನ್ಸ್‌ಶೀಟ್‌ನಲ್ಲಿನ ಅರ್ಧದಷ್ಟು ವಿಸ್ತರಣೆಯು ವಿದೇಶಿ ಕರೆನ್ಸಿ ಆಸ್ತಿ (ಚಿನ್ನದ ನಾಣ್ಯ ಮತ್ತು ಬುಲಿಯನ್ ಸೇರಿ), ಎಲ್‌ಟಿಆರ್‌ಒಗಳಿಂದಾಗಿ 30 ಪ್ರತಿಶತದಷ್ಟು ಮತ್ತು ಉಳಿದ ಶೇ.20ರಷ್ಟು ದೇಶೀಯ ಭದ್ರತೆಗಳ ಖರೀದಿಗೆ ಕಾರಣವಾಗಿದೆ..

RBI
ಆರ್​ಬಿಐ
author img

By

Published : Jul 24, 2020, 10:01 PM IST

ಮುಂಬೈ : ಫೆಬ್ರವರಿ ಮಧ್ಯದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬ್ಯಾಲೆನ್ಸ್‌ಶೀಟ್ ಸುಮಾರು ₹9.5 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್ ತಿಳಿಸಿದೆ.

ಮೊದಲ ದೀರ್ಘಾವಧಿಯ ರೆಪೊ ಕಾರ್ಯಾಚರಣೆ (ಎಲ್‌ಟಿಆರ್‌ಒ) 54 ಲಕ್ಷ ಕೋಟಿ ರೂ.ಯಷ್ಟಾಗಿದೆ. ಇದರ ವಾರ್ಷಿಕ ಬೆಳವಣಿಗೆಯ ದರ ದ್ವಿಗುಣವಾಗಿದ್ದು, 2020ರ ಆರಂಭದಲ್ಲಿ 14 ಪ್ರತಿಶತದಿಂದ ಪ್ರಸ್ತುತ ಶೇ.30ಕ್ಕಿಂತಲೂ ಹೆಚ್ಚಾಗಿದೆ ಎಂದು ಇಕೋಸ್ಕೋಪ್ ವರದಿ ಹೇಳಿದೆ.

ಬ್ಯಾಂಕಿಂಗ್ ವ್ಯವಸ್ಥೆಯ ನಿವ್ವಳ ಹೆಚ್ಚುವರಿ 2020ರ ಆರಂಭದಲ್ಲಿನ 3 ಲಕ್ಷ ಕೋಟಿ ರೂ.ಯಿಂದ ಶೇ 2.2ರಷ್ಟು ಏರಿಕೆಯಾಗಿದೆ. ನಿವ್ವಳ ಬೇಡಿಕೆ ಮತ್ತು ಸಮಯ ಹೊಣೆಗಾರಿಕೆಯು (ಎನ್‌ಡಿಟಿಎಲ್) 2020ರ ಆರಂಭದಲ್ಲಿ 4.3 ಲಕ್ಷ ಕೋಟಿ ರೂ.ಗಳಿಂದ ಶೇ.3ರಷ್ಟು ಏರಿದೆ.

ಆರ್‌ಬಿಐನ ಬ್ಯಾಲೆನ್ಸ್‌ಶೀಟ್‌ನಲ್ಲಿನ ಅರ್ಧದಷ್ಟು ವಿಸ್ತರಣೆಯು ವಿದೇಶಿ ಕರೆನ್ಸಿ ಆಸ್ತಿ (ಚಿನ್ನದ ನಾಣ್ಯ ಮತ್ತು ಬುಲಿಯನ್ ಸೇರಿ), ಎಲ್‌ಟಿಆರ್‌ಒಗಳಿಂದಾಗಿ 30 ಪ್ರತಿಶತದಷ್ಟು ಮತ್ತು ಉಳಿದ ಶೇ.20ರಷ್ಟು ದೇಶೀಯ ಭದ್ರತೆಗಳ ಖರೀದಿಗೆ ಕಾರಣವಾಗಿದೆ.

ವ್ಯಾಪಕ ಹಣ ಪೂರೈಕೆಯಲ್ಲಿನ ವಾರ್ಷಿಕ ಬೆಳವಣಿಗೆ ಅಥವಾ ಎಂ- 3 ಸಹ ವರ್ಷದಿಂದ ವರ್ಷಕ್ಕೆ ಶೇ.12.4ರಷ್ಟು ಹೆಚ್ಚಳವಾಗಿದೆ. 2020ರ ಹಣಕಾಸು ವರ್ಷದ ಅಂತ್ಯದ ನಂತರ ಎಂ-3 7.4 ಲಕ್ಷ ಕೋಟಿ ರೂ. ಏರಿಕೆಯಾಗಿದೆ. ಸರ್ಕಾರಕ್ಕೆ ನಿವ್ವಳ ಸಾಲ 7.3 ಲಕ್ಷ ಕೋಟಿ ರೂ., ಖಾಸಗಿ ವಲಯಕ್ಕೆ ನಿವ್ವಳ ಸಾಲವು 0.9 ಲಕ್ಷ ಕೋಟಿ ರೂ.ಗಳಿಂದ ಇಳಿಕೆಯಾಗಿದೆ. ವಿದೇಶಿ ವಿನಿಮಯ ಸ್ವತ್ತುಗಳು 1 ಲಕ್ಷ ರೂ. ಏರಿಕೆಯಾಗಿದೆ ಎಂದು ವಿವರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.