ETV Bharat / business

ಈ ಬಾರಿಯೂ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದ ಆರ್​ಬಿಐ

ಮಹಾಮಾರಿ ಕೊರೊನಾ ವೈರಸ್ ಹಾವಳಿ ನಡುವೆ ಕೂಡ ಭಾರತೀಯ ರಿಸರ್ವ್​ ಬ್ಯಾಂಕ್​ ಬಡ್ಡಿದರದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ

ಆರ್​​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​
ಆರ್​​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​
author img

By

Published : Apr 7, 2021, 3:44 PM IST

ಮುಂಬೈ: ಆರ್​​ಬಿಐ ಇಂದು ತನ್ನ ಆರ್ಥಿಕ ವರದಿ ಬಿಡುಗಡೆ ಮಾಡಿದ್ದು, ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಪಾಡಿಕೊಂಡಿದೆ.ಕೊರೊನಾ ಆರ್ಭಟದ ಹಿನ್ನೆಲೆಯಲ್ಲಿ ಈ ಕೇಂದ್ರ ಬ್ಯಾಂಕ್​ ಈ ನಿರ್ಧಾರ ಕೈಗೊಂಡಿದೆ.

ಬೆಂಚ್​​ಮಾರ್ಕ್​ನ ಮರು ಖರೀದಿ ದರದಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಅದನ್ನು ಈ ಹಿಂದಿನಂತೆಯೇ ಶೇ 4ರಷ್ಟೇ ಮುಂದುವರಿಸಲಾಗಿದೆ. ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ಆರ್​ಬಿಐ ಈ ಎಲ್ಲ ಕ್ರಮಗಳನ್ನ ತೆಗೆದುಕೊಂಡಿದೆ. ಇನ್ನು ದೇಶದ ಜಿಡಿಪಿ ಬಗ್ಗೆ ಮಾಹಿತಿ ನೀಡಿದ್ದು, ಈ ತ್ರೈಮಾಸಿಕದಲ್ಲೂ ಆರ್ಥಿಕ ಬೆಳವಣಿಗೆ ದರ 10.5 ರಷ್ಟೇ ದಾಖಲಾಗಿದ್ದು, ಅದು ಸಹ ಯಥಾಸ್ಥಿತಿಯಲ್ಲೇ ಇದೆ.

ಹಣದುಬ್ಬರವು ಜನವರಿ-ಮಾರ್ಚ್ ಅವಧಿಯಲ್ಲಿ ಶೇ.5 ರಿಂದ ಶೇ.5.2 ರವರೆಗೆ ಏರಿಕೆಯಾಗಿದೆ ಎಂದು ಆರ್​​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.