ನವದೆಹಲಿ: ಕೊರೊನಾ ಸೋಂಕು ಅರ್ಥಿಕತೆ ಮೇಲೆ ಪರಿಣಾಮ ಬೀರಿರುವುದರಿಂದ ಉದ್ಯಮಿ ವಲಯಗಳೇ ಚಿಂತೆಗೀಡಾಗಿವೆ. ಕಳೆಗುಂದಿದ ವಹಿವಾಟಿನ ಚಟುವಟಿಕೆಗಳನ್ನು ಪುನಶ್ಚೇತನ ನೀಡಿ, ಆರ್ಥಿಕತೆಗೆ ಇಂಬು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ದೇಶದ ಪ್ರಮುಖ ಬ್ಯಾಂಕ್ಗಳ ಮುಖ್ಯಸ್ಥರ ಜೊತೆ ನಾಳೆ ಸಭೆ ನಡೆಸಲಿದ್ದಾರೆ.
ಆರ್‌ಬಿಐ ಇತ್ತೀಚೆಗೆ ಘೋಷಿಸಿದ ಹಲವು ಹಂತಗಳ ಅನುಷ್ಠಾನದ ಬಡ್ಡಿ ದರ ಕಡಿತ ಮತ್ತು ಅದರ ಹಂಚಿಕೆಯ ಸ್ಥಿತಿಗತಿ ಹಾಗೂ ಉದ್ಯಮವನ್ನು ಬೆಂಬಲಿಸಲು ದ್ರವ್ಯತೆ ಕ್ರಮಗಳ ಬಗ್ಗೆಯೂ ಈ ಸಭೆಯಲ್ಲಿ ಪ್ರಸ್ತಾಪ ಆಗಲಿವೆ.
ಒತ್ತಡಕ್ಕೊಳಗಾದ ಎಂಎಸ್‌ಎಂಇ ಉದ್ಯಮ ಮತ್ತು ಗ್ರಾಮೀಣ ವಲಯಕ್ಕೆ ನೆರವು ಒದಗಿಸಲಾದ ವಿವಿಧ ಸೌಲಭ್ಯಗಳನ್ನು ಸಹ ಪರಿಶೀಲಿಸಲಾಗುವುದು. ಆರ್ಥಿಕತೆಯಲ್ಲಿ ಒತ್ತಡ ಕಡಿಮೆ ಮಾಡಲು ಅಗತ್ಯವಾದ ಮುಂದಿನ ಕ್ರಮಗಳಿಗೆ ಬ್ಯಾಂಕರ್‌ಗಳ ತಮ್ಮ ಸಲಹೆ ನೀಡಲು ಇದು ಉತ್ತಮ ವೇದಿಕೆ ಒದಗಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಮೇ 4ರಿಂದ ಇನ್ನೂ ಎರಡು ವಾರಗಳವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸಿದೆ. ಹಸಿರು ವಲಯಗಳ ಜಿಲ್ಲೆಗಳಿಗೆ ಸಡಿಲವಾದ ನಿರ್ಬಂಧ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಕಂಡು ಬಂದಿಲ್ಲ. ಆದರೂ ದಿಗ್ಬಂಧನ ಮುಂದುವರಿಸಿದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ಜಿಲ್ಲೆಗಳ ಅಪಾಯದ ಆಧಾರದ ಮೇಲೆ ವಿಸ್ತೃತ ಲಾಕ್‌ಡೌನ್ ಅವಧಿಯ ಚಟುವಟಿಕೆಗಳನ್ನು ನಿಯಂತ್ರಿಸಲು ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮ್ಯೂಚುವಲ್ ಫಂಡ್ ಸೇರಿದಂತೆ ಸಾಲಗಾರರು, ಸಾಲದಾತರು ಮತ್ತು ಇತರ ಸಂಸ್ಥೆಗಳು ಎದುರಿಸುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಘೋಷಿಸಿದೆ. ಅಭಿವೃದ್ಧಿಶೀಲ ಪರಿಸ್ಥಿತಿಯನ್ನು ಎದುರಿಸಲು ಹೆಚ್ಚಿನ ಉಪಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ಸಹ ನೀಡಿದೆ.