ETV Bharat / business

ಬ್ಯಾಂಕ್​ ಗ್ರಾಹಕರಿಗೆ ಸಿಹಿ ಸುದ್ದಿ: ಕ್ಯಾಶ್​ ವಿತ್​ಡ್ರಾ ಮಿತಿ​ ಏರಿಸಿದ ಆರ್​ಬಿಐ

ಸೆಪ್ಟಂಬರ್​ 23ರಂದು ಕಾರ್ಯಾಚರಣೆ ನಿರ್ಬಂಧದ ಆದೇಶ ಹೊರಡಿಸಿದ್ದ ಆರ್​ಬಿಐ, ಗ್ರಾಹಕರಿಗೆ ದಿನಕ್ಕೆ ವಿತ್​ ಡ್ರಾ ಮೊತ್ತವನ್ನು ₹ 1,000ಕ್ಕೆ ನಿಗದಿಪಡಿಸಿತ್ತು. ಬ್ಯಾಂಕ್​ ಗ್ರಾಹಕರು ಈ ಬಗ್ಗೆ ಆಕ್ಷೇಪ ಹಾಗೂ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ಆರ್​ಬಿಐ, ವಿತ್ ಡ್ರಾ ಮಿತಿಯನ್ನು ₹ 1,000ದಿಂದ ₹ 10,000ಕ್ಕೆ ಏರಿಕೆ ಮಾಡಿತ್ತು. ಮತ್ತೆ ಅದನ್ನು ₹ 40,000ಕ್ಕೆ ಹೆಚ್ಚಿಸಿತ್ತು. ಈಗ 50,000 ರೂ.ಗೆ ನಿಗದಿಪಡಿಸಿದ್ದು, ಆರ್​ಬಿಐ ಆದೇಶದಿಂದ ಬ್ಯಾಂಕ್ ಠೇವಣಿದಾರರು ನಿರಾಳರಾಗಿದ್ದಾರೆ.

author img

By

Published : Nov 5, 2019, 7:43 PM IST

ಪಿಎಂಸಿ

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್​ (ಪಿಎಂಸಿ) ಹಗರಣ ಹೊರಬಿದ್ದ ಬಳಿಕ ವಹಿವಾಟಿನ ಮೇಲೆ ನಿರ್ಬಂಧ ಹೇರಿದ್ದ ಭಾರತೀಯ ರಿಸರ್ವ್ ಬ್ಯಾಂಕ್​ (ಆರ್​ಬಿಐ) ಮಂಗಳವಾರ ಸಡಿಲಗೊಳಿಸಿದೆ​.

ಆರ್​ಬಿಐ ಬ್ಯಾಂಕಿನ್ ನಗದು ಸ್ಥಾನಮಾನ ಮತ್ತು ಅದರ ಠೇವಣಿದಾರರಿಗೆ ಪಾವತಿಸುವ ಸಾಮರ್ಥ್ಯ ಪರಿಶೀಲಿಸಿದ ಬಳಿಕ ನಗದು ವಿತ್​ಡ್ರಾ ಮಿತಿಯನ್ನು 50,000 ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಈ ಮೊದಲು 40,000 ರೂ.ಗೆ ಅನುಮತಿ ನೀಡಲಾಗಿತ್ತು. ಇದರಿಂದ ಬ್ಯಾಂಕ್​ನ ಶೇ. 78ಕ್ಕಿಂತ ಅಧಿಕ ಠೇವಣಿದಾರರು ತಮ್ಮ ಸಂಪೂರ್ಣ ಖಾತೆ ಮೊತ್ತ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸೆ.​ 23ರಂದು ಕಾರ್ಯಾಚರಣೆ ನಿರ್ಬಂಧದ ಆದೇಶ ಹೊರಡಿಸಿದ್ದ ಆರ್​ಬಿಐ, ಗ್ರಾಹಕರಿಗೆ ದಿನಕ್ಕೆ ವಿತ್​​ಡ್ರಾ ಮೊತ್ತವನ್ನು ₹ 1,000ಕ್ಕೆ ನಿಗದಿ ಪಡಿಸಿತ್ತು. ಬ್ಯಾಂಕ್​ ಗ್ರಾಹಕರು ಈ ಬಗ್ಗೆ ಆಕ್ಷೇಪ ಹಾಗೂ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಆರ್​ಬಿಐ, ವಿತ್​ಡ್ರಾ ಮಿತಿಯನ್ನು ₹ 1,000ದಿಂದ ₹ 10,000ಕ್ಕೆ ಏರಿಕೆ ಮಾಡಿತ್ತು. ಮತ್ತೆ ಅದನ್ನು ₹ 40,000ಕ್ಕೆ ಹೆಚ್ಚಿಸಿತ್ತು. ಈಗ 50,000 ರೂ.ಗೆ ನಿಗದಿಪಡಿಸಿದ್ದು, ಈ ಆದೇಶದಿಂದ ಬ್ಯಾಂಕ್ ಠೇವಣಿದಾರರು ಸ್ವಲ್ಪ ನಿರಾಳರಾಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.