ಭುವನೇಶ್ವರ: ಮಾಧ್ಯಮಗಳಲ್ಲಿ ವರದಿಯಾದಂತೆ ಬ್ಯಾಂಕ್ಗಳನ್ನು ಎಚ್ಚರಿಕೆಯ ಚೌಕಟ್ಟಿನಲ್ಲಿ ಇರಿಸಿಲ್ಲ. ಆದರೆ, ಹೊಸ ಸವಾಲುಗಳನ್ನು ಎದುರಿಸಲು ಸಾಲದಾತರು (ಬ್ಯಾಂಕ್ಗಳು) ಸಿದ್ಧರಾಗುವಂತೆ ಸೂಚಿಸಲಾಗಿದೆ ಎಂದು ಆರ್ಬಿಐ ಸ್ಪಷ್ಟನೆ ನೀಡಿದೆ.
ಕೇಂದ್ರ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಶಕ್ತಿಕಾಂತ ದಾಸ್, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಬ್ಯಾಂಕಿಂಗ್ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.
ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಬ್ಯಾಂಕ್ಗಳನ್ನು ಎಚ್ಚರಿಸುವಂತಹ ಸ್ಥಿತಿಯಲ್ಲಿ ಆರ್ಬಿಐ ಇರಿಸಿಲ್ಲ. ಹೊಸ ಸವಾಲುಗಳನ್ನು ಎದುರಿಸಲು ಬ್ಯಾಂಕ್ಗಳು ಸಿದ್ಧರಾಗಿರಬೇಕು ಎಂದು ನಾವು ಹೇಳಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಹಣಕಾಸಿನ ಸೇರ್ಪಡೆ, ರಾಜ್ಯದ ಬ್ಯಾಂಕ್ ಶಾಖೆಗಳು, ಕೃಷಿ ಕ್ಷೇತ್ರಕ್ಕೆ ಸಾಲದ ಹರಿವು ಮತ್ತು ಒಡಿಶಾದ ಇ-ಕುಬರ್ ಪ್ಲಾಟ್‌ಫಾರ್ಮ್ ಮೂಲಕ ಡಿಬಿಟಿಯನ್ನು (ನೇರ ನಗದು ವರ್ಗಾವಣೆ) ಸುವ್ಯವಸ್ಥಿತಗೊಳಿಸುವುದು ಕುರಿತು ಚರ್ಚಿಸಿದ್ದೇವೆ ಎಂದು ದಾಸ್ ಹೇಳಿದರು.