ETV Bharat / business

ದಿಲ್ಲಿ ಚಲೋ: ಕೆಲ ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ರೈತರನ್ನು ದಾರಿ ತಪ್ಪಿಸುತ್ತಿವೆ- ಪಿಯೂಷ್ ಗೋಯಲ್​

author img

By

Published : Nov 28, 2020, 8:40 PM IST

ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು 'ದೆಹಲಿ ಚಲೋ' ಚಳವಳಿ ನಡೆಸುತ್ತಿದ್ದು, ಸಾವಿರಾರು ರೈತರು ಶುಕ್ರವಾರದಂದು ರಾಷ್ಟ್ರ ರಾಜಧಾನಿ ಪ್ರವೇಶಿಸಲು ಪ್ರಾರಂಭಿಸಿದರು. ಈ ವೇಳೆ ಮಾತನಾಡಿದ ಪಿಯೂಷ್​ ಗೋಯಲ್​, ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಆ ರೈತರನ್ನು ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ ಎಂದರು.

iyush Goyal
ಪಿಯೂಷ್ ಗೋಯಲ್​

ನವದೆಹಲಿ: ಕೇಂದ್ರದ ನೂತನ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕೆಲವೇ ಕೆಲವು 'ದಾರಿ ತಪ್ಪಿದ ರೈತರು, ಈ ಬದಲಾವಣೆಗಳ ಹಿಂದಿನ ಒಳ್ಳೆಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು 'ದೆಹಲಿ ಚಲೋ' ಚಳವಳಿ ನಡೆಸುತ್ತಿದ್ದು, ಸಾವಿರಾರು ರೈತರು ಶುಕ್ರವಾರದಂದು ರಾಷ್ಟ್ರ ರಾಜಧಾನಿ ಪ್ರವೇಶಿಸಲು ಪ್ರಾರಂಭಿಸಿದರು. ಈ ವೇಳೆ ಮಾತನಾಡಿದ ಗೋಯಲ್​, ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಆ ರೈತರನ್ನು ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ ಎಂದರು.

ಕೆಲವು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ರೈತರನ್ನು ದಾರಿ ತಪ್ಪಿಸುತ್ತಿರುವುದು ದುರದೃಷ್ಟಕರ. ಆದರೆ, ದೇಶಾದ್ಯಂತ ಇರುವ ರೈತರು ನಮ್ಮ ಹೊಸ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿದ್ದಾರೆ. ದಾರಿ ತಪ್ಪಿದ ಕೆಲವೇ ಕೆಲವು ರೈತರು ಸಹ ಇದರ ಉತ್ತಮ ಅಂಶಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದು ನನಗೆ ತುಂಬಾ ವಿಶ್ವಾಸವಿದೆ. ರೈತರ ಅನುಕೂಲಕ್ಕಾಗಿ ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಈ ಬದಲಾವಣೆ ತರಲಾಗಿದೆ ಎಂದು ಹೇಳಿದರು.

ಪೆನ್ ಅಥವಾ ಥರ್ಮೋಸ್ ತಯಾರಕರು ತಮ್ಮ ಸರಕುಗಳನ್ನು ಎಲ್ಲಿಯಾದರೂ ಮತ್ತು ಯಾರಿಗಾದರೂ ಮಾರಾಟ ಮಾಡುವುದಕ್ಕೆ ಯಾವುದೇ ನಿರ್ಬಂಧ ಇಲ್ಲ. ರೈತರೂ ಸಹ ಅದೇ ಸ್ವಾತಂತ್ರ್ಯಕ್ಕೆ ಅರ್ಹರು ಎಂದರು.

ನಾವು ದೇಶವನ್ನು ಮತ್ತು ನಮ್ಮ ರೈತರನ್ನು ಬಲಶಾಲಿಯಾಗಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದಲ್ಲಿ ಎಲ್ಲಿಯಾದರೂ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸಾಮರ್ಥ್ಯ ಪಡೆದುಕೊಳ್ಳಲಿದ್ದಾರೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.