ETV Bharat / business

ಮುಗ್ಗರಿಸುತ್ತಿರುವ ಆರ್ಥಿಕತೆ ಮೇಲೆತ್ತಲು ಪಿಎಂಒ, ವಿತ್ತ ಅಧಿಕಾರಿಗಳ ಸರಣಿ ಸಭೆ...

author img

By

Published : Aug 17, 2019, 2:04 PM IST

ಪಿಎಂ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಆಟೋ ಮತ್ತು ರಿಯಾಲ್ಟಿ ಕ್ಷೇತ್ರಗಳಲ್ಲಿನ ಮಂದಗತಿಯ ಬೆಳವಣಿಗೆ ತೊಡಕಾಗಿರುವ ಕಾರಣಗಳು ಮತ್ತು ಪರಿಹಾರ ಕ್ರಮಗಳೊಂದಿಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಈಕ್ವಿಟಿ ಮಾರುಕಟ್ಟೆಗಳ ವಿವಾದಗಳ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಶ್ರೀಮಂತರ ಮೇಲಿನ ಹೆಚ್ಚುವರಿ ತೆರಿಗೆ ಶುಲ್ಕ, ವಾಹನ ಮತ್ತು ವಸತಿ ವಲಯಗಳ ಮಂದಗತಿಯ ಬೆಳವಣಿಗೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಹಣಕಾಸು ಸಚಿವಾಲಯದ ಐವರು ಕಾರ್ಯದರ್ಶಿಗಳು ಸೇರಿದಂತೆ ಉನ್ನತ ಅಧಿಕಾರಿಗಳ ಸಭೆ ಇಂದು ನಡೆಯಲಿದೆ.

ಪಿಎಂ ಅವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಆಟೋ ಮತ್ತು ರಿಯಾಲ್ಟಿ ಕ್ಷೇತ್ರಗಳಲ್ಲಿನ ಮಂದಗತಿಯ ಬೆಳವಣಿಗೆ ತೊಡಕಾಗಿರುವ ಕಾರಣಗಳು ಮತ್ತು ಪರಿಹಾರ ಕ್ರಮಗಳೊಂದಿಗೆ ಬರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಈಕ್ವಿಟಿ ಮಾರುಕಟ್ಟೆಗಳ ವಿವಾದಗಳ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ.

ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಪಿಎಂಒ ಒಳಗೊಂಡಂತೆ ಎಸ್​ಎಂಇ ಇಂಡಸ್ಟ್ರೀಸ್​, ಬ್ಯಾಂಕ್​ ಮತ್ತು ಹಣಕಾಸು ಸಂಸ್ಥೆಗಳು, ಆಟೋಮೊಬೈಲ್​ ಸೇರಿದಂತೆ ಐದು ವಲಯಗಳ ಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಮುಂದೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಹೇಳಿದರು.

ಗುರುವಾರದಂದು ಪ್ರಧಾನಿ ಮೋದಿ ಅವರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲ್ಲಿದ್ದೇವೆ. ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಕುರಿತು ಸಮಾಲೋಚನೆ ನಡೆಯುತ್ತಿದೆ. ಅಂತಿಮ ನಿರ್ಧಾರಕ್ಕೆ ಬಂದ ಬಳಿಕ ತಿಳಿಸುತ್ತೇವೆ ಎಂದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.