ನವದೆಹಲಿ: ಕೊರೊನಾ ಪ್ರೇರೇಪಿತ ಸಂಪನ್ಮೂಲಗಳನ್ನು ಸಂಗ್ರಹಿಸಿ ಕೃಷಿ ಮತ್ತು ಎಂಎಸ್ಎಂಇಗಳಿಗೆ ಉತ್ತೇಜನ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗ್ರಾಹಕರಿಗೆ ಹೊರೆಯಾಗದಂತೆ ಕೆಲವು ಸರಕುಗಳ ಮೇಲಿನ ಸೆಸ್ ಹೆಚ್ಚಳ ಮಾಡಲಾಗಿದೆ.
ಈ ಬಗ್ಗೆ ಗ್ರಾಹಕ ಮತ್ತು ಪ್ರತಿಪಕ್ಷಗಳು ತೀವ್ರ ಟೀಕೆ ಮಾಡುತ್ತಿರುವುದರ ನಡುವೇ ಸ್ವಪಕ್ಷದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
- — Subramanian Swamy (@Swamy39) February 2, 2021 " class="align-text-top noRightClick twitterSection" data="
— Subramanian Swamy (@Swamy39) February 2, 2021
">— Subramanian Swamy (@Swamy39) February 2, 2021
ರಾಮನ ಭಾರತದಲ್ಲಿ ಪೆಟ್ರೋಲ್ ದರ 93 ರೂ. ಇದ್ದರೆ ಸೀತೆ ಜನಿಸಿದ ನೇಪಾಳದಲ್ಲಿ 53 ರೂ. ಇದೆ. ರಾವಣನ ಲಂಕೆಯಲ್ಲಿ 51 ರೂ. ಇದೆ ಎಂಬ ವ್ಯಂಗ್ಯ ಪೋಸ್ಟ್ ಅನ್ನು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
ನಿನ್ನೆ ಮಂಡನೆಯಾದ 2021-22ರ ಕೇಂದ್ರ ಬಜೆಟ್ನಲ್ಲಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 2.50 ರೂ. ಮತ್ತು ಡೀಸೆಲ್‌ಗೆ 4 ರೂ. ವಿಧಿಸಲಾಯಿತು.